ಆಡಿಯೋ

ಸುಂಕವಸೂಲಿಗಾರನ ಪ್ರಾರ್ಥನೆಯಂತೆ, ತಾವು ಪಾಪಿಗಳೆಂದು ಗ್ರಹಿಸಿಕೊಂಡು
ಪಶ್ಚಾತ್ತಾಪ ಪಡುವವರು ತಮ್ಮನ್ನೇ ಹೆಚ್ಚಿಸಿಕೊಳ್ಳುವದಿಲ್ಲ, ಆದರೆ ತಮ್ಮನ್ನೇ ತಗ್ಗಿಸಿಕೊಂಡು
ಸಹೋದರ ಸಹೋದರಿಯ ಸೇವೆ ಮಾಡುವದು ಹೇಗೆ ಎಂದು ತಿಳಿದುಕೊಂಡಿರುವರು.
ದೇವರ ಚಿತ್ತವನ್ನು ಅಭ್ಯಾಸಿಸಿ ದೇವರಿಗೆ ವಿಧೇಯರಾಗುವವರಿಗೆ, ದೇವರು
ಅಯಸ್ಕಾಂತದಂತೆ ಅನೇಕ ಆತ್ಮಗಳನ್ನು ರಕ್ಷಣೆಗೆ ಸೆಳೆಯುವ ಪವಿತ್ರಾತ್ಮರ ಶಕ್ತಿಯನ್ನು ಕೊಡುವರು.
ಆದರೆ ಜನರು ತಮ್ಮನ್ನೇ ಹೆಚ್ಚಿಸಿಕೊಂಡು ಸರ್ವಾಧಿಕಾರದ ಮನೋವೃತಿಯೊಂದಿಗೆ
ವರ್ತಿಸಲು ಪ್ರಾಯತ್ನಿಸುವ ಸ್ಥಳದಲ್ಲಿ ತೊಂದರೆಯು ಸೃಷ್ಟಿಯಾಗುತ್ತದೆ.
(ಈಸೋಪನ ನೀತಿಕಥೆಗಳು: ಹೇಡಿ ಕತ್ತೆ)