ಪಾಪಗಳ ಕ್ಷಮೆಯನ್ನು ಪಡೆಯಲು, ಯಾರಾದರೂ ಪಾಪಗಳನ್ನು ಹೊತ್ತುಕೊಳ್ಳಬೇಕು. ಸಬ್ಬತ್ ದಿನಕ್ಕಾಗಿ ಸರ್ವಾಂಗಹೋಮ ಮಾಡಿದ ಪಶುಗಳು, ಪ್ರತಿನಿತ್ಯದ ಸರ್ವಾಂಗಹೋಮ, ಪಸ್ಕಹಬ್ಬ ಮತ್ತು ಹಳೇ ಒಡಂಬಡಿಕೆಯಲ್ಲಿನ ಎಲ್ಲಾ ಹಬ್ಬಗಳ ಮೂಲಕ ದೇವರು ನಮಗೆ ಇದನ್ನು ನೆರಳಿನಂತೆ ತೋರಿಸಿದರು, ಮತ್ತು ಹಳೆಯ ಒಡಂಬಡಿಕೆಯ ನಿಯಮದ ಮೂಲಕ ಸರ್ವದೋಷಪರಿಹಾರಕ ದಿನದಂದು ಎಲ್ಲಾ ಪಾಪಗಳನ್ನು ಅರಣ್ಯಕ್ಕೆ ಕಳುಹಿಸಲ್ಪಟ್ಟ ಅಜಾಜೇಲನ ಮೇಲೆ ಹಾಕಲಾಗಿ ಅದು ಸತ್ತದ್ದನ್ನು ಕೂಡ ನೆರಳಾಗಿ ತೋರಿಸಿದರು.
ದೇವರು ತನ್ನ ಸೃಷ್ಟಿಯಿಂದ ಶಿಲುಬೆಯ ಯಾತನೆ, ಅಪಹಾಸ್ಯ ಮತ್ತು ತಿರಸ್ಕಾರದ ಎಲ್ಲಾ ಸಂಕಟಗಳನ್ನು ಸಹಿಸಿಕೊಂಡಿದ್ದಾರೆ ಎಂದು ಚರ್ಚ್ ಆಫ್ ಗಾಡ್ ಸದಸ್ಯರು ಗ್ರಹಿಸಿಕೊಳ್ಳುತ್ತಾರೆ ಏಕೆಂದರೆ ಅವರ ಪಾಪಗಳಿಗೆ ಬೆಲೆಯನ್ನು ಪಾವತಿಸುವ ಮೂಲಕ ಎಲ್ಲಾ ಮಾನವಕುಲವನ್ನು ರಕ್ಷಿಸಲು ಬಯಸುವದು ದೇವರ ಮಹಾನ್ ಪ್ರೀತಿಯಾಗಿದೆ.
ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷವಿುಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿಮಾಡುವನು. ನಾವು ಪಾಪಮಾಡಲಿಲ್ಲವೆಂದು ಹೇಳಿದರೆ ಆತನನ್ನು ಸುಳ್ಳುಗಾರನನ್ನಾಗಿ ಮಾಡುತ್ತೇವೆ.
1 ಯೋಹಾನ 1:9-10
ಹಾಗೆಯೇ ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೂ ಬಂದನು ಎಂದು ಹೇಳಿದನು.
ಮತ್ತಾಯ 20:28
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ