ಒತ್ತಡವನ್ನು ತೊಡೆದುಹಾಕಲು ನೀವು ಏನು ಮಾಡುತ್ತೀರಿ?
ಪ್ರತಿಯೊಬ್ಬರೂ ತಮ್ಮ ಆಂತರಿಕ ಒತ್ತಡವನ್ನು ಕಡಿಮೆ ಮಾಡಲು ತಮ್ಮದೇ ಆದ ಮಾರ್ಗವನ್ನು ಹೊಂದಿದ್ದಾರೆ.
ಆದರೆ ಈಗ, ನಾನು ಇನ್ನೊಂದು ಮಾರ್ಗವನ್ನು ಸೂಚಿಸಲು ಬಯಸುತ್ತೇನೆ.
ಅದು, ನಿಮ್ಮ ತಾಯಿಗೆ ಕರೆ ಮಾಡುವದಾಗಿದೆ.
ಸ್ಟ್ಯಾನ್ಫೋರ್ಡ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್, 7 ರಿಂದ 12 ವರ್ಷ ವಯಸ್ಸಿನ 24 ಮಕ್ಕಳನ್ನು ಪರೀಕ್ಷಿಸುವ ಮೂಲಕ ತಾಯಿಯ ಧ್ವನಿಯನ್ನು ಕೇಳಿದಾಗ ಮೆದುಳು ಹೇಗೆ ಸಕ್ರಿಯಗೊಳ್ಳುತ್ತದೆ ಎಂಬುದನ್ನು ಅಧ್ಯಯನ ಮಾಡಿದೆ.
ಕೆಲವು ರೆಕಾರ್ಡಿಂಗ್ಗಳು ತಮ್ಮ ಸ್ವಂತ ತಾಯಿಯ ಧ್ವನಿಯನ್ನು ಒಳಗೊಂಡಿವೆ ಮತ್ತು ಇತರ ರೆಕಾರ್ಡಿಂಗ್ಗಳು ಸಂಬಂಧವಿಲ್ಲದ ಮಹಿಳೆಯರ ಧ್ವನಿಯನ್ನು ಒಳಗೊಂಡಿವೆ.
ಕ್ಲಿಪ್ಗಳು ತುಂಬಾ ಚಿಕ್ಕದಾಗಿದ್ದರೂ, ಒಂದು ಸೆಕೆಂಡ್ಗಿಂತ ಕಡಿಮೆ ಇದ್ದರೂ, ಮಕ್ಕಳು ತಮ್ಮ ತಾಯಿಯ ಧ್ವನಿಯನ್ನು ಶೇಕಡ 97ಕ್ಕಿಂತ ಹೆಚ್ಚು ನಿಖರವಾಗಿ ಗುರುತಿಸಿದ್ದಾರೆ.
ಇತರ ಮಹಿಳೆಯರಿಗಿಂತ ತಮ್ಮ ತಾಯಿಯ ಧ್ವನಿಯನ್ನು ಕೇಳಿದಾಗ ಮೆದುಳು ಹೆಚ್ಚು ಸಕ್ರಿಯಗೊಂಡವು.
ತಮ್ಮ ತಾಯಿಯ ಧ್ವನಿಯನ್ನು ತಕ್ಷಣವೇ ಗುರುತಿಸಿದ ಮಕ್ಕಳು ಬಲವಾದ ಸಾಮಾಜಿಕ ಸಂವಹನ ಸಾಮರ್ಥ್ಯಗಳನ್ನು ಹೊಂದಿದ್ದಾರೆಂದು ಕಂಡುಬಂದಿದೆ.
ಹಾಗಾದರೆ, ಇದು ನಮ್ಮ ದೈಹಿಕ ದೇಹಕ್ಕೆ ಮಾತ್ರವೇ?
ನಮ್ಮ ಆಧ್ಯಾತ್ಮಿಕ ತಾಯಿ ಪರಲೋಕದಿಂದ ಈ ಭೂಮಿಗೆ ಬರುತ್ತಾರೆ ಎಂದು ಸತ್ಯವೇದವು ಮುಂತಿಳಿಸುತ್ತದೆ.
ಬಾ, ಯಜ್ಞದ ಕುರಿಯಾದಾತನಿಗೆ ಹೆಂಡತಿಯಾಗತಕ್ಕ ಮದಲಗಿತ್ತಿಯನ್ನು ನಿನಗೆ ತೋರಿಸುವೆನು ಎಂದು ಹೇಳಿ
. . . ಯೆರೂಸಲೇಮೆಂಬ ಪರಿಶುದ್ಧ ಪಟ್ಟಣವು ದೇವರ ತೇಜಸ್ಸುಳ್ಳದ್ದಾಗಿ ಪರಲೋಕದೊಳಗಿಂದ ದೇವರ ಕಡೆಯಿಂದ ಇಳಿದುಬರುವದನ್ನು ನನಗೆ ತೋರಿಸಿದನು.
ಪ್ರಕ 21:9-10
ಆದರೆ ಮೇಲಣ ಯೆರೂಸಲೇಮ್ ಎಂಬವಳು ಸ್ವತಂತ್ರಳು, ಇವಳೇ ನಮಗೆ ತಾಯಿ.
ಗಲಾ 4:26
ಪರಲೋಕ ತಾಯಿ ಈ ಭೂಮಿಯ ಮೇಲೆ ಶರೀರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಸತ್ಯವೇದವು ಸಾಕ್ಷಿಕರಿಸುತ್ತದೆ, ಹಾಗಾಗಿ ನಾವು ಅವರ ಪ್ರತಿಧ್ವನಿಸುವ ಧ್ವನಿಯನ್ನು ಕೇಳಬಹುದು ಅದು ಅವರ ಮಕ್ಕಳಾಗಲು ಮತ್ತು ರಕ್ಷಣೆ ಹೊಂದಲು ನಮ್ಮನ್ನು ಪ್ರಭಾವಿಸುತ್ತದೆ.
ಹಾಗಾದರೆ, ನಮ್ಮ ಪರಲೋಕ ತಾಯಿಯ ಧ್ವನಿಯನ್ನು ಹೊರತುಪಡಿಸಿ ನಮಗೆ ಕೇಳಲು ಹೆಚ್ಚು ಮೌಲ್ಯಯುತವಾದ, ಅಮೂಲ್ಯವಾದ ಅಥವಾ ಪ್ರಯೋಜನಕಾರಿಯಾದ ಯಾವುದಾದರೂ ಧ್ವನಿ ಇದೆಯೇ?
ನಿರ್ದಿಷ್ಟ ಪುರಾವೆಯ ಪ್ರಕಾರ, ನಿಮಗೆ ಉತ್ತರ ತಿಳಿದಿದೆ ಎಂದು ನಾನು ನಂಬುತ್ತೇನೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ