ನಾವು ಈ ಲೋಕದಲ್ಲಿ ಎಲ್ಲಿಯೇ ಹುಟ್ಟಿದ್ದರೂ, ನಾವು ಬೆಳೆದಂತೆ ನಮ್ಮ ಸುತ್ತಮುತ್ತಲಿನ ಎಲ್ಲಾ ಸಂಪ್ರದಾಯಗಳು ನಮ್ಮಲ್ಲಿ ಬೇರೂರುತ್ತವೆ. ಅನೇಕ ಬಾರಿ, “ನಾವು ಇದನ್ನು ಏಕೆ ಮಾಡುತ್ತೇವೆ?” ಎಂದು ಜನರನ್ನು ಕೇಳಿದಾಗ, “ನನಗೆ ಗೊತ್ತಿಲ್ಲ. ನಾನು ಯಾವಾಗಲೂ ಹೀಗೆಯೇ ಮಾಡಿದ್ದು” ಎಂಬ ಉತ್ತರವನ್ನು ಸಾಮಾನ್ಯವಾಗಿ ನೀಡಲಾಗುತ್ತದೆ. ಈ ರೀತಿಯಾಗಿ, ಜನರು ಬಾಲ್ಯದಿಂದಲೂ ಅಳವಡಿಸಿಕೊಳ್ಳುವ ಸಂಪ್ರದಾಯಗಳು ಅವರು ಪ್ರೌಢಾವಸ್ಥೆಗೆ ಬಂದರೂ ಅವರಲ್ಲಿಯೇ ಉಳಿಯುತ್ತವೆ. ಆದರೆ ಅವರು ತಮ್ಮ ಆತ್ಮಿಕ ಗುರುತನ್ನು ವ್ಯಾಖ್ಯಾನಿಸುವ ಒಬ್ಬರ ನಂಬಿಕೆಯ ಸೂಕ್ಷ್ಮ ಮತ್ತು ಮುಖ್ಯವಾದ ವಿಷಯದ ಕುರಿತು ಏನಾಗಿದೆ?
ಮೂಲವನ್ನು ಲೆಕ್ಕಿಸದೆಯೇ ನಮ್ಮ ಆಧ್ಯಾತ್ಮಿಕ ರಚನೆ, ಆರೋಗ್ಯ ಮತ್ತು ಗಮ್ಯಸ್ಥಾನವನ್ನು ನಿರ್ಧರಿಸಲು ನಮಗಿಂತ ಮೊದಲು ಬಂದವರ ಸಂಪ್ರದಾಯಗಳನ್ನು ನಾವು ಅನುಮತಿಸಬೇಕೇ?
ನಾವು ಸುತ್ತಲೂ ನೋಡಿದಾಗ, ಕ್ರೈಸ್ತಧರ್ಮ ಮತ್ತು ಅದರ ಸಿದ್ಧಾಂತಗಳು ಸತ್ಯವೇದದ ಬೋಧನೆಗಳಿಂದ ಬಹಳ ದೂರವಿರುವ ಬೋಧನೆಗಳು ಮತ್ತು ಸಂಪ್ರದಾಯಗಳ ಸುತ್ತಲೂ ಬೆಳೆದಿವೆ. ದುರದೃಷ್ಟವಶಾತ್, ಈ ಬದಲಾವಣೆಯು ಪೋಪ್ ಎಲ್ಲಾ ಸಭೆಗಳ ಮೇಲೆ ತನ್ನ ಅಧಿಕಾರವನ್ನು ಚಲಾಯಿಸಿದಾಗ ಮತ್ತು ಯೇಸುವಿನ ಹೆಸರಿನಲ್ಲಿ ರೋಮಿನ ಸೂರ್ಯ-ದೇವನ ಸಂಪ್ರದಾಯಗಳನ್ನು ಅನುಸರಿಸಲು ಕ್ರೈಸ್ತಧರ್ಮವನ್ನು ಮರುರೂಪಿಸಿದಾಗ, ಎರಡನೇ ಶತಮಾನದ ಮಧ್ಯಭಾಗದಿಂದ ನಾಲ್ಕನೇ ಶತಮಾನದ ಮಧ್ಯಭಾಗದವರೆಗೆ ಸಂಭವಿಸಲು ಪ್ರಾರಂಭಿಸಿತು. ನಾವು ಇತಿಹಾಸವನ್ನು ನೋಡಿದಾಗ, ಭಾನುವಾರದ ಆರಾಧನೆಯು ವಾಸ್ತವವಾಗಿ ರೋಮ್ನಲ್ಲಿ ಕ್ರಿ.ಶ 321ರಲ್ಲಿ, ಸೂರ್ಯನನ್ನು (Sun) ಆರಾಧಿಸಲು ಘೋಷಿಸಿದ ನಿಯಮವಾಗಿತ್ತು. ಇದಲ್ಲದೆ, ಪಾರಸಿಯ ಸೂರ್ಯ ದೇವನಾದ ಮಿತ್ರನ ಜನನದಿಂದ ಹುಟ್ಟಿಕೊಂಡ ಡಿಸೆಂಬರ್ 25, ಯೇಸುವಿನ ಸ್ವರ್ಗಾರೋಹಣದ ಸುಮಾರು 300 ವರ್ಷಗಳ ನಂತರ, ಕ್ರಿ.ಶ 354ರಿಂದ ಕ್ರೈಸ್ತಧರ್ಮವನ್ನು ಆವರಿಸಿತು.
ಹಾಗಾದರೆ, ಇಡೀ ಲೋಕವು ಸಂಪ್ರದಾಯಗಳು ಮತ್ತು ಮನುಷ್ಯ ಕಲ್ಪಿಸಿದ ಆಚರಣೆಗಳ ಮೂಲಕ ದೇವರನ್ನು ವ್ಯರ್ಥವಾಗಿ ಆರಾಧಿಸುತ್ತಿದ್ದರೆ, ದೇವರು ಯಾರಿಗೆ ಆತ್ಮರಕ್ಷಣೆಯನ್ನು ನೀಡುತ್ತಾರೆ? ಈ ಕಾರಣದಿಂದಲೇ ಎರಡನೇ ಬರುವಿಕೆಯ ಕ್ರಿಸ್ತನು ಈಗಾಗಲೇ ಸತ್ಯವೇದದ ಎಲ್ಲಾ ಪ್ರವಾದನೆಗಳ ಪ್ರಕಾರ ಬಂದಿದ್ದಾರೆ ಎಂದು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಮತ್ತು ಅವರು ನಮ್ಮ ಸಮಯದಲ್ಲಿ ದೇವರ ಬೋಧನೆಗಳನ್ನು ಪುನಃಸ್ಥಾಪಿಸಿದ್ದಾರೆ.
ಮೀಕನು (ಅಧ್ಯಾಯ) 4ರಲ್ಲಿ, “ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಎಲ್ಲಾ ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವದು; ಆಗ ಜನಾಂಗಗಳು ಅದರ ಕಡೆಗೆ ಪ್ರವಾಹಗಳಂತೆ ಬರುವವು. . . ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆಮಾಡುವನು.” ಎಂದು ಬರೆಯಲಾಗಿದೆ.
ಇದು ಕೊನೆಯ ದಿನಗಳಲ್ಲಿ ಎಲ್ಲಾ ಜನಾಂಗದವರು ದೇವರಿಂದ ಕಲಿಸಲ್ಪಡುವ ಹಾಗು ಅವರ ಮಾರ್ಗಗಳಲ್ಲಿ ನಡೆಯುವ ಸಲುವಾಗಿ ಚೀಯೋನಿಗೆ ಬರುವರು ಎಂದು ಹೇಳುತ್ತದೆ. ಹಾಗಾದರೆ, ಲೋಕದ ಎಲ್ಲಾ ಸಭೆಗಳಲ್ಲಿ, ಎರಡನೇ ಬರುವಿಕೆಯ ಕ್ರಿಸ್ತನಿಂದ ಕಲಿಸಲ್ಪಟ್ಟ ಸಬ್ಬತ್ ದಿನ, ಪಸ್ಕ ಹಬ್ಬ ಮತ್ತು ಮುಸುಕಿನ ನಿಯಮದಂತಹ ದೇವರ ಎಲ್ಲಾ ಆಜ್ಞೆಗಳನ್ನು ಆಚರಿಸುವ ಏಕೈಕ ಸಭೆ ಯಾವುದು? ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್ ಮಾತ್ರ ನಮ್ಮನ್ನು ಬಿಡುಗಡೆ ಮಾಡಿದ ಕ್ರಿಸ್ತನ ಬೋಧನೆಗಳನ್ನು ಕಲಿಸುತ್ತದೆ ಮತ್ತು ಕೈಗೊಂಡು ನಡೆಯುತ್ತದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ