ಅರಸ ಯೋಷೀಯ ಮತ್ತು ಅರಸ ಹಿಜ್ಕೀಯನು ಪಸ್ಕವನ್ನು ಆಚರಿಸಿದಾಗ ಎಲ್ಲಾ ವಿಗ್ರಹಗಳನ್ನು ತೆಗೆದು ದೇವರನ್ನು ಪೂರ್ಣಹೃದಯದಿಂದಲೂ ಪೂರ್ಣಬುದ್ಧಿಯಿಂದಲೂ ಮಾತ್ರ ಸೇವಿಸಿದಂತೆ, ನಾವು ಕೂಡ ಇಂದು ಕೇವಲ ಹೊಸ ಒಡಂಬಡಿಕೆಯ ಪಸ್ಕವನ್ನು ಆಚರಿಸುತ್ತಾ, “ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಬಾರದು” ಎಂಬ ಮೊದಲ ಆಜ್ಞೆಯನ್ನು ಕೈಗೊಳ್ಳಬಹುದು.
ನಾವು, ಮನುಕುಲ, ದೇವರನ್ನು ಹೊರತುಪಡಿಸಿ ಬೇರೆ ದೇವರುಗಳನ್ನು ಸೇವಿಸಿದಾಗ ಎಂದಿಗೂ ರಕ್ಷಣೆ ಹೊಂದುವುದಿಲ್ಲ ಅಥವಾ ಆಶೀರ್ವದಿಸಲ್ಪಡುವುದಿಲ್ಲ.
ಈ ಕಾರಣದಿಂದಲೇ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು, ನಾವು ದೇವರಿಗೆ ಮಾತ್ರ ಸೇವೆ ಸಲ್ಲಿಸಬಹುದಾದ ಹೊಸ ಒಡಂಬಡಿಕೆಯ ಪಸ್ಕ ಹಬ್ಬವನ್ನು ಪುನಃಸ್ಥಾಪಿಸಿದ್ದಾರೆ ಮತ್ತು ಅದನ್ನು ಆಚರಿಸಲು ನಮಗೆ ಹೇಳಿದರು.
ಅನಂತರ ಅರಸನು ಎಲ್ಲಾ ಜನರಿಗೆ - ಈ ನಿಬಂಧನಗ್ರಂಥದಲ್ಲಿ ಬರೆದಿರುವ ಪ್ರಕಾರ ನೀವು ನಿಮ್ಮ ದೇವರಾದ ಯೆಹೋವನಿಗೋಸ್ಕರ ಪಸ್ಕಹಬ್ಬವನ್ನು ಆಚರಿಸಬೇಕು ಎಂದು ಆಜ್ಞಾಪಿಸಿದನು. . . . ಯೆಹೋವನ ಕಡೆಗೆ ತಿರುಗಿಕೊಂಡು ಪೂರ್ಣಮನಸ್ಸಿನಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಬಲದಿಂದಲೂ ಮೋಶೆಯ ಧರ್ಮಶಾಸ್ತ್ರವನ್ನು ಅನುಸರಿಸಿದ ಯೋಷೀಯನಿಗೆ ಸಮಾನನಾದ ಅರಸನು ಮುಂಚೆಯೂ ತರುವಾಯವೂ ಇರಲಿಲ್ಲ.
2 ಅರಸುಗಳು 23:21-25
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ