ನಮ್ಮ ಶಾರೀರಿಕ ಮತ್ತು ಆತ್ಮಿಕ ಜೀವನದಲ್ಲಿ, ಯಾವಾಗಲೂ ಅನೇಕ ಶೋಧನೆಗಳು ಮತ್ತು ಅಡೆತಡೆಗಳು ಇರುತ್ತವೆ. ಹಿಂದೆ, ಇಸ್ರಾಯೇಲ್ಯರು ನೀರು ಮತ್ತು ಆಹಾರವಿಲ್ಲದ ಅರಣ್ಯ ಹಾಗೂ ದೈತ್ಯರಿದ್ದ ಕಾನಾನ್ ದೇಶವೆಂಬ ದೊಡ್ಡ ಶೋಧನೆಗಳನ್ನು ಎದುರಿಸಿದಾಗ, ಯೆಹೋಶುವ ಮತ್ತು ಕಾಲೇಬನು ದೇವರಲ್ಲಿ ಮಾತ್ರ ತಮ್ಮ ನಿರೀಕ್ಷೆಯನ್ನಿಟ್ಟಿದ್ದರು. ಅವರಂತೆಯೇ, ಕಷ್ಟಗಳ ಮಧ್ಯದಲ್ಲಿ ದೇವರು ನಮಗಾಗಿ ತೆರೆದಿರುವ ನಿರೀಕ್ಷೆಯ ದ್ವಾರವನ್ನು ನೋಡುವ ನಂಬಿಕೆ ನಮಗೆ ಅಗತ್ಯವಿದೆ.
ಯೇಸುವಿನ ಶಿಲುಬೆಗೇರಿಸುವಿಕೆಯಿಂದ ಹತಾಶರಾದ ಆದಿ ಸಭೆಯ ವಿಶ್ವಾಸಿಗಳಿಗೆ, ದೇವರು ಪುನರುತ್ಥಾನ ಮತ್ತು ಸ್ವರ್ಗಾರೋಹಣದ ಮೂಲಕ ಪರಲೋಕರಾಜ್ಯದ ನಿರೀಕ್ಷೆಯ ದ್ವಾರವನ್ನು ತೆರೆದಂತೆಯೇ ಮತ್ತು ರಾತ್ರಿಯಿಡೀ ಏನನ್ನೂ ಹಿಡಿಯದ ಪೇತ್ರನಿಗೆ, ತನ್ನ ವಾಕ್ಯದಂತೆ ಮಾಡಿದಾಗ ನಡೆಯುವ ಅದ್ಭುತವನ್ನು ಯೇಸು ತೋರಿಸಿದಂತೆಯೇ, ಇಂದಿಗೂ, “ಸುವಾರ್ತೆಯು ಸರ್ವಲೋಕದಲ್ಲಿ ಸಾರಲ್ಪಡುವುದು” ಎಂಬ ಕ್ರಿಸ್ತ ಅನ್ ಸಂಗ್ ಹೊಂಗ್ರವರ ವಾಕ್ಯವು ಖಂಡಿತವಾಗಿ ನೆರವೇರುವುದು.
ಯೆಹೋವನೇ, ನನಗೆ ಅವಸಾನವುಂಟೆಂದೂ ನನ್ನ ಜೀವಮಾನವು ಅತ್ಯಲ್ಪವೆಂದೂ ನಾನು ಎಷ್ಟೋ ಅಸ್ಥಿರನೆಂದೂ ನನಗೆ ತಿಳಿಯಪಡಿಸು. ಹೀಗಿರಲಾಗಿ ಕರ್ತನೇ, ಇನ್ನು ಯಾವದಕ್ಕೆ ಕಾದುಕೊಳ್ಳಲಿ? ನೀನೇ ನನ್ನ ನಿರೀಕ್ಷೆ. ಕೀರ್ತನೆಗಳು 39:4–7
ಆದರೆ ಕಡೇವರೆಗೂ ತಾಳುವವನು ರಕ್ಷಣೆಹೊಂದುವನು. ಇದಲ್ಲದೆ ಪರಲೋಕರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು. ಮತ್ತಾಯನು 24:13–14
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ