ಸತ್ಯವೇದದ ಪ್ರವಾದನೆಯ ಪ್ರಕಾರ ಎರಡನೆಯ ಸಾರಿ ಬಂದ ಕ್ರಿಸ್ತ ಅನ್ ಸಂಗ್ ಹೊಂಗ್ ರವರನ್ನು ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್ ನಂಬುತ್ತದೆ.
ಎರಡು ಸಾವಿರ ವರ್ಷಗಳ ಹಿಂದೆ ಶಿಷ್ಯರು ಯೇಸುವಿನ ಎರಡನೇ ಬರುವಿಕೆಯ ಸೂಚನೆಯ ಬಗ್ಗೆ ಕೇಳಿದಾಗ, ಅವರು ಅಂಜೂರದ ಮರದ ದೃಷ್ಟಾಂತವನ್ನು ಕಲಿಯಲು ಹೇಳಿದರು.
ಅಂಜೂರದ ಮರದ ದೃಷ್ಟಾಂತದಿಂದ ಬುದ್ಧಿಕಲಿಯಿರಿ. ಅದರ ಕೊಂಬೆ ಇನ್ನೂ ಎಳೆಯದಾಗಿದ್ದು ಎಲೆ ಬಿಡುವಾಗ ಬೇಸಿಗೆಯು ಹತ್ತರವಾಯಿತೆಂದು ತಿಳುಕೊಳ್ಳುತ್ತೀರಲ್ಲಾ. ಹಾಗೆಯೇ ನೀವು ಸಹ ಇದನ್ನೆಲ್ಲಾ ನೋಡುವಾಗ ಆ ದಿನವು ಹತ್ತರವದೆ, ಬಾಗಿಲಲ್ಲೇ ಅದೆ ಎಂದು ತಿಳುಕೊಳ್ಳಿರಿ. (ಮತ್ತಾಯನು 24:30-33)
ಅಂಜೂರದ ಮರದ ದೃಷ್ಟಾಂತದ ಮೂಲಕ, ಯೇಸು ತನ್ನ ಎರಡನೇ ಬರುವಿಕೆಯ ಸಮಯವನ್ನು ತಿಳಿಸಿದರು. ಹಾಗಾದರೆ, ಸತ್ಯವೇದದಲ್ಲಿ ಅಂಜೂರದ ಮರವು ಏನನ್ನು ಸೂಚಿಸುತ್ತದೆ?
ಹಳೆಯ ಒಡಂಬಡಿಕೆಯ ಕಾಲದಿಂದಲೂ, ಅಂಜೂರದ ಮರವು ಇಸ್ರಾಯೇಲ್ ದೇಶವನ್ನು ಪ್ರತಿನಿಧಿಸುತ್ತದೆ (ಯೆರೆಮೀಯನು 24:5). ಹೊಸ ಒಡಂಬಡಿಕೆಯ ಕಾಲದಲ್ಲಿ, ಯೇಸು ಕೂಡ ತನ್ನ ಬೋಧನೆಗಳಲ್ಲಿ ಇಸ್ರಾಯೇಲ್ ದೇಶವನ್ನು ಅಂಜೂರದ ಮರಕ್ಕೆ ಹೋಲಿಸಿದರು (ಮಾರ್ಕನು 11:12-14, 20-21). ಅಂಜೂರದ ಮರದಿಂದ ಪ್ರತಿನಿಧಿಸಲ್ಪಟ್ಟ ಇಸ್ರಾಯೇಲ್ ದೇಶವು ಇತಿಹಾಸದಲ್ಲಿ, ಯೇಸುವಿನ ಎರಡನೆಯ ಬರುವಿಕೆಯ ಸಮಯದ ಬಗ್ಗೆ ಒಂದು ರಹಸ್ಯವಿದೆ.
“ಅಂಜೂರದ ಕೊಂಬೆಗಳು ಎಳೆಯದಾಗಿದ್ದು ಎಲೆ ಬಿಡುವುದು” ಎಂದರೆ ಒಣಗಿದ ಅಂಜೂರದ ಮರವು ಮತ್ತೆ ಜೀವಕ್ಕೆ ಬರುತ್ತದೆ ಎಂದಾಗಿದೆ. ಇದು ನಾಶವಾದ ಇಸ್ರಾಯೇಲ್ ದೇಶವು ಪುನಃಸ್ಥಾಪಿಸಲ್ಪಡುತ್ತದೆ ಎಂದು ಸೂಚಿಸುತ್ತದೆ. ಯೇಸು ಪ್ರವಾದಿಸಿದಂತೆ, ಇಸ್ರಾಯೇಲ್ ದೇಶವು ಕ್ರಿ.ಶ 70ರಲ್ಲಿ ರೋಮನ್ ಸಾಮ್ರಾಜ್ಯದಿಂದ ನಾಶವಾಯಿತು ಮತ್ತು ಸುಮಾರು 1,900 ವರ್ಷಗಳ ಕಾಲ ಲೋಕದಾದ್ಯಂತ ಹರಡಿ, ವಲಸೆಗಾರರ ಜೀವನವನ್ನು ನಡೆಸಿತು.
ಅಂಜೂರ ಮರದ ದೃಷ್ಟಾಂತದ ಕುರಿತ ಪ್ರವಾದನೆಯನ್ನು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ನೆರವೇರಿಸಿದರು.
ಎರಡನೆಯ ಮಹಾಯುದ್ಧ ಮುಗಿದ ನಂತರ, ಇಸ್ರಾಯೇಲ್ ತನ್ನ ಸ್ವಾತಂತ್ರ್ಯವನ್ನು ಘೋಷಿಸಿತು ಮತ್ತು ತನ್ನ ಹಿಂದಿನ ತಾಯ್ನಾಡು ಪ್ಯಾಲೆಸ್ಟೈನ್ನಲ್ಲಿ ಒಂದು ರಾಜ್ಯವನ್ನು ಸ್ಥಾಪಿಸಿತು.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಯೇಸು ಪ್ರವಾದಿಸಿದಂತೆ ಅಂಜೂರದ ಮರವು ಪುನರುಜ್ಜೀವನಗೊಂಡಿತು. ಇಸ್ರಾಯೇಲ್ನ ಸ್ವಾತಂತ್ರ್ಯವು ಜಗತ್ತಿನ ಬೇರೆಲ್ಲಿಯೂ ಕಂಡುಬರದ ಅದ್ಭುತ ಎಂದು ಇತಿಹಾಸಕಾರರು ಹೇಳುತ್ತಾರೆ. ಎಷ್ಟಾದರೂ, ಅದು ಕೇವಲ ಒಂದು ಐತಿಹಾಸಿಕ ಘಟನೆಯಾಗಿರಲಿಲ್ಲ. ದೇವರು ಯೋಜಿಸಿದಂತೆ ಯೇಸು ಎರಡನೆಯ ಸಾರಿ ಬಂದರೆಂದು ಇಡೀ ಲೋಕಕ್ಕೆ ಘೋಷಿಸುವ ಪ್ರವಾದನೆಯ ಸೂಚನೆಯಾಗಿತ್ತು.
ಒಣಗಿದ ಅಂಜೂರದ ಮರವು ಪುನರುಜ್ಜೀವನಗೊಂಡಂತೆಯೇ, ಇಸ್ರಾಯೇಲ್ 1948ರಲ್ಲಿ ಪುನರ್ನಿರ್ಮಿಸಲ್ಪಟ್ಟಿತು. ಈ ವರ್ಷದಲ್ಲಿ, ಯೇಸು ಎರಡನೆಯ ಸಾರಿ ಬಂದು ದೀಕ್ಷಾಸ್ನಾನ ಪಡೆದ ನಂತರ ಸುವಾರ್ತಾ ಕಾರ್ಯವನ್ನು ಪ್ರಾರಂಭಿಸಬೇಕು. ಅವರು 2,000 ವರ್ಷಗಳ ಹಿಂದೆ ಸ್ಥಾಪಿಸಿದ ಹೊಸ ಒಡಂಬಡಿಕೆಯ ಸುವಾರ್ತೆಯನ್ನು ಪುನಃಸ್ಥಾಪಿಸಬೇಕು. ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಸತ್ಯವೇದದ ಪ್ರವಾದನೆಗಳನ್ನು ಸಂಪೂರ್ಣವಾಗಿ ನೆರವೇರಿಸಲು ಎರಡನೆಯ ಸಾರಿ ಬಂದ ಯೇಸು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ