ಎರಡನೆಯ ಸಾರಿ ಬಂದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು, 1948ರಲ್ಲಿ ಮೂವತ್ತನೇ ವಯಸ್ಸಿನಲ್ಲಿ ದೀಕ್ಷಾಸ್ನಾನ ಪಡೆದರು ಮತ್ತು ರಾಜ ದಾವೀದನ ಪ್ರವಾದನೆಯ ಪ್ರಕಾರ ಸತ್ಯದ ಬೆಳಕನ್ನು ಪ್ರಕಾಶಿಸಲು ತಮ್ಮ ಸುವಾರ್ತೆಯ ಜೀವನವನ್ನು ಪ್ರಾರಂಭಿಸಿದರು. ಅವರು ಮನುಕುಲವನ್ನು ರಕ್ಷಿಸಲು ಮನುಷ್ಯನಾಗಿ ಈ ಭೂಮಿಗೆ ಬಂದರು ಹಾಗೂ ವೈಭವ ಮತ್ತು ಗೌರವದಿಂದಲ್ಲ ಆದರೆ ನೋವು ಮತ್ತು ಸಂಕಟಗಳಿಂದ ತುಂಬಿದ ಜೀವನವನ್ನು ನಡೆಸಿದರು.
ಅವರು 1918ರಲ್ಲಿ ಜನಿಸಿದಾಗ, ಜಪಾನಿನ ಆಕ್ರಮಣದ ಸಮಯದಲ್ಲಿ ಶೋಷಣೆ ಮತ್ತು ದಬ್ಬಾಳಿಕೆಯ ಯುಗದ ಮೂಲಕ ಹಾದು ಹೋಗಬೇಕಾಯಿತು. ಕ್ರಿಸ್ತ ಅನ್ ಸಂಗ್ ಹೊಂಗ್ ರವರು ತಮ್ಮ ಸುವಾರ್ತೆ ಸೇವೆಯನ್ನು ಪ್ರಾರಂಭಿಸಿದಾಗ, ಕೊರಿಯಾ ಗಣರಾಜ್ಯವು ಆತ್ಮಿಕವಾಗಿ ಬಂಜರು ಮತ್ತು ವಿನಾಶಕಾರಿ ಪರಿಸ್ಥಿತಿಯಲ್ಲಿತ್ತು. ಭೌತಿಕವಾಗಿಯೂ ಸಹ, ಪರಿಸರವು ತುಂಬಾ ಕಳಪೆಯಾಗಿತ್ತು. ಆ ಸಮಯದಲ್ಲಿ, ಜಪಾನಿನ ಸಾಮ್ರಾಜ್ಯಶಾಹಿಯಿಂದ ವಿಮೋಚನೆಗೊಂಡಿದ್ದ ಕೊರಿಯಾ ಗಣರಾಜ್ಯವು, 1950ರಲ್ಲಿ ಭುಗಿಲೆದ್ದ ಕೊರಿಯನ್ ಯುದ್ಧದ ನಂತರ ವಿಶ್ವದ ಅತ್ಯಂತ ಬಡ ದೇಶವಾಗಿ ಕೆಳಮಟ್ಟಕ್ಕಿಳಿದಿತ್ತು ಮತ್ತು ಎಲ್ಲಾ ಜನರು ಜೀವನದ ತೀವ್ರ ಕಷ್ಟಗಳನ್ನು ಎದುರಿಸಬೇಕಾಯಿತು.
2,000 ವರ್ಷಗಳ ಹಿಂದೆ ಕ್ರಿಸ್ತ ಯೇಸು ಮಾಡಿದಂತೆಯೇ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಜೀವದ ನಿಯಮವನ್ನು ಕೈಗೊಂಡು ನಡೆದರು ಮತ್ತು ಸುವಾರ್ತೆಯನ್ನು ಬೋಧಿಸಿದರು, ಎಲ್ಲಾ ಕಠಿಣ ಕೆಲಸಗಳನ್ನು ಮಾಡಿದರೂ ಸಹ ಅವರು ತಿರಸ್ಕರಿಸಲ್ಪಟ್ಟರು ಮತ್ತು ಅವಮಾನಿಸಲ್ಪಟ್ಟರು.
ಅನೇಕ ಜನರು ಜೀವನ ಸಾಗಿಸುವುದು ಕಷ್ಟಕರವೆಂದು ಕಂಡುಕೊಂಡು ಹಸಿವಿನಿಂದ ಬಳಲುತ್ತಿದ್ದ ಆ ದಿನಗಳಲ್ಲಿ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಸಬ್ಬತ್ ದಿನ ಸೇರಿದಂತೆ ದೇವರ ಆಜ್ಞೆಗಳನ್ನು ಕೈಗೊಳ್ಳುವ ಮಾದರಿಯನ್ನು ತೋರಿಸಲು ಜನರು ಬಿಟ್ಟು ಬಿಡುವ ಕಲ್ಲಿನ ಕೆಲಸವನ್ನು ಮಾಡಬೇಕಾಗಿತ್ತು. ಈ ಕಠಿಣ ಪರಿಶ್ರಮದಿಂದಾಗಿ ಅವರ ಕುತ್ತಿಗೆಯ ಮೇಲೆ ಕೈಯ ಹಿಂಭಾಗದ ಗಾತ್ರದ ಚರ್ಮದ ಗಂಟುಗಳು ಇದ್ದವು. ಆ ಕಠಿಣ ಪರಿಶ್ರಮದಿಂದ ಗಳಿಸಿದ ಸಂಬಳವನ್ನು ಅವರು ಬೋಧನೆಯ ವೆಚ್ಚಕ್ಕಾಗಿ ಮತ್ತು ಜೀವದ ಸತ್ಯವನ್ನು ಪ್ರಕಟಪಡಿಸುವ ಪುಸ್ತಕಗಳನ್ನು ಬರೆಯಲು ಬಳಸಿದರು. ಹಾಗಾಗಿ ಅವರು ಆಗಾಗ್ಗೆ ತನ್ನ ಹಸಿವನ್ನು ಬಾರ್ಲಿ ಗಂಜಿ ಅಥವಾ ಊಟವನ್ನು ಬಿಟ್ಟು ತಣಿಸುತ್ತಿದ್ದರು. ಹಗಲು ಹೊತ್ತಿನಲ್ಲಿ ಕಠಿಣ ಪರಿಶ್ರಮದ ನಂತರ, ಅವರು ರಾತ್ರಿಯಿಡೀ ಇಡೀ ಮನುಕುಲದ ಆತ್ಮರಕ್ಷಣೆಗಾಗಿ ಪುಸ್ತಕಗಳನ್ನು ಬರೆದರು ಮತ್ತು ಹಲವಾರು ದಿನಗಳ ಉಪವಾಸ ಮತ್ತು ತ್ಯಾಗದ ಮೂಲಕ ಹೊಸ ಒಡಂಬಡಿಕೆಯ ಸತ್ಯವನ್ನು ಪುನಃಸ್ಥಾಪಿಸಿದರು.
ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಭೂಮಿಯ ಮೇಲಿನ ತಮ್ಮ ಮಾನವನ ಜೀವನವನ್ನು ಮುಗಿಸುವ ನಾಲ್ಕು ವರ್ಷಗಳ ಮೊದಲು ಮಾಧ್ಯಮಗಳ ಮೂಲಕ ತಮ್ಮ ಮರಣದ ಬಗ್ಗೆ ಪ್ರವಾದಿಸಿದರು ಮತ್ತು ಸಭೆಯನ್ನು ತಮ್ಮ ಶಿಷ್ಯರಿಗೆ ವಹಿಸಿಕೊಟ್ಟರು. ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್ ಹೊಸ ಒಡಂಬಡಿಕೆಯ ಸತ್ಯವನ್ನು ಕೈಗೊಳ್ಳುತ್ತದೆ ಮತ್ತು ಕ್ರಿಸ್ತ ಅನ್ ಸಂಗ್ ಹೊಂಗ್ ರವರ ಮಾದರಿಯನ್ನು ಹಿಂಬಾಲಿಸಿ ಲೋಕದಾದ್ಯಂತ 7.8 ಶತಕೋಟಿ ಜನರಿಗೆ ಆತ್ಮರಕ್ಷಣೆಯ ಸುದ್ದಿಯನ್ನು ಬೋಧಿಸುತ್ತದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ