ನಾವು ಪರಲೋಕರಾಜ್ಯವನ್ನು ಪ್ರವೇಶಿಸುವವರೆಗೂ ಅನೇಕ ಸಂಸ್ಕರಣಗಳು
ಹಾಗೂ ಪರೀಕ್ಷೆಗಳು ಬರುತ್ತವೆ ಎಂದು ಸತ್ಯವೇದವು ಹೇಳುತ್ತದೆ.
ಕೆಲವು ಜನರು ಹಣಕಾಸಿನ ಪರೀಕ್ಷೆಗಳಿಗೆ ಒಳಗಾಗಬಹುದು,
ಕೆಲವರು ತಮ್ಮ ಸುತ್ತಲಿನ ಜನರೊಂದಿಗೆ ಇರುವ ಸಂಬಂಧಗಳ ಮೂಲಕ
ಕಲಿಯುತ್ತಾರೆ ಹಾಗೂ ಇನ್ನೂ ಕೆಲವರು ಸ್ವಲ್ಪ ಜ್ಞಾನದಿಂದ ಕಲಿಯುತ್ತಾರೆ.
ಈ ಸಂಸ್ಕರಣಗಳನ್ನು ಜಯಿಸುವವರಿಗೆ ಬಂಗಾರಕ್ಕಿಂತ ಹೆಚ್ಚಿನ
ಮೌಲ್ಯವಿದೆ ಮತ್ತು ಅವರು ಪರಲೋಕದಲ್ಲಿ ದೇವರಿಂದ
ಕೀರ್ತಿ ಪ್ರಭಾವ ಮಾನಗಳನ್ನು ಸ್ವೀಕರಿಸುತ್ತಾರೆ ಎಂದು ಸತ್ಯವೇದವು ಹೇಳುತ್ತದೆ.
ಬಂಗಾರವು ನಾಶವಾಗುವಂಥದಾಗಿದ್ದರೂ ಅದನ್ನು ಬೆಂಕಿಯಲ್ಲಿ ಪುಟಾಹಾಕಿ ಶೋಧಿಸುವದುಂಟಷ್ಟೆ. ಬಂಗಾರಕ್ಕಿಂತ ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ ಪ್ರಭಾವ ಮಾನಗಳನ್ನು ಉಂಟುಮಾಡುವದು. 1 ಪೇತ್ರನು 1:7
2000 ವರ್ಷಗಳ ಹಿಂದೆ, ಯೇಸು “ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬರಲಿ”
ಎಂದು ಹೇಳಿದಂತೆ ಆದಿಸಭೆಯ ಸಂತರು ತಮ್ಮ ಶಿಲುಬೆಯನ್ನು ಹೊತ್ತುಕೊಂಡು
ಯಾವಾಗಲೂ ಸಂತೋಷಿಸುತ್ತಾ ಹಾಗೂ ಎಲ್ಲಾ ಸಂದರ್ಭಗಳಲ್ಲಿಯೂ
ಕೃತಜ್ಞತಾಸ್ತುತಿ ಸಲ್ಲಿಸುತ್ತಾ ನಂಬಿಕೆಯನ್ನು ಸಂಸ್ಕರಿಸಿಕೊಂಡರು.
ಏಕೆಂದರೆ ನಾವು ಈ ಭೂಮಿಯ ಮೇಲೆ ಅನುಭವಿಸುವ ಕಷ್ಟಗಳನ್ನು
ನಾವು ಪರಲೋಕದಲ್ಲಿ ಸ್ವೀಕರಿಸುವ ಮಹಿಮೆಗೆ ಹೋಲಿಸಲು ಸಾಧ್ಯವಿಲ್ಲ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ