N
ಆಶೀರ್ವಾದಕ್ಕೆ ಮುನ್ನಡೆಸುವ ಮಾತುಗಳು
ನಾವು ಯಾವಾಗಲೂ ಸಂತೋಷಿಸಿ ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿ ಮಾಡಿದರೆ, ನಾವು ದೂರುಗಳು ಅಥವಾ ಕುಂದುಕೊರತೆಗಳನ್ನು ಹೊಂದಲು ಸಾಧ್ಯವಿಲ್ಲ.
ದೇವರು ಇಡೀ ಮನುಕುಲಕ್ಕೆ, ತಮ್ಮ ದೈಹಿಕ ಜನನದ ನಂತರ ದೇವರನ್ನು ಸಂಧಿಸಬೇಕು ಮತ್ತು ಪರಲೋಕರಾಜ್ಯವನ್ನು ಪ್ರವೇಶಿಸಲು ಗುಣುಗುಟ್ಟುವುದು ಮತ್ತು ದೂರುವುದು ಎಂಬ ನಕಾರಾತ್ಮಕತೆಯನ್ನು ಬಿಟ್ಟು, ಪರಸ್ಪರ ಕಾಳಜಿ ವಹಿಸುವ, ಬೆಂಬಲಿಸುವ ಮತ್ತು ಪ್ರೋತ್ಸಾಹಿಸುವ ಹೊಸ ವ್ಯಕ್ತಿಗಳಂತೆ ಹೊಸದಾಗಿ ಹುಟ್ಟಬೇಕು ಎಂದು ಹೇಳುತ್ತಾರೆ.
ಹೊಸದಾಗಿ ಹುಟ್ಟಲು, ನಾವು ಕೃತಜ್ಞತೆಯ ಮಾತುಗಳು ಮತ್ತು ನಂಬಿಕೆಯ ಸಕಾರಾತ್ಮಕ ಮಾತುಗಳೊಂದಿಗೆ ನಮ್ಮ ಗುಣಲಕ್ಷಣವನ್ನು ಬದಲಾಯಿಸಿಕೊಳ್ಳಬೇಕು.
ದೇವರ ವಾಕ್ಯವನ್ನು ಮಾತ್ರ ನಂಬಿ ಕಾನಾನ್ ದೇಶವನ್ನು ಧೈರ್ಯದಿಂದ ವಶಪಡಿಸಿಕೊಂಡ ಯೆಹೋಶುವ ಮತ್ತು ಕಾಲೇಬನಂತೆ ಮತ್ತು ಯಾವುದೇ ಸಂಕಷ್ಟದ ಸಮಯದಲ್ಲಿ ದೂರು ನೀಡದೆ ದೇವರು ತನ್ನೊಂದಿಗಿದ್ದಾರೆ ಎಂದು ಯಾವಾಗಲೂ ನಂಬಿದ ಯೋಸೇಫನಂತೆ, ಚರ್ಚ್ ಆಫ್ ಗಾಡ್ ಸದಸ್ಯರು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರನ್ನು ರಕ್ಷಕರೆಂದು ನಂಬುತ್ತಾರೆ ಮತ್ತು ಹೊಸದಾಗಿ ಹುಟ್ಟುತ್ತಾ ತಮ್ಮ ಮಾತುಗಳನ್ನು ಕಾರ್ಯರೂಪಕ್ಕೆ ಹಾಕುವದರ ಮೂಲಕ ಅನೇಕ ಆಶೀರ್ವಾದಗಳನ್ನು ಪಡೆಯುತ್ತಾರೆ.
ಅದಕ್ಕೆ ಯೇಸು - ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ಒಬ್ಬನು ಹೊಸದಾಗಿ ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು ಅಂದನು.
ಯೋಹಾನನು 3:3
ನಿಮ್ಮ ನೀತಿಯು ಶಾಸ್ತ್ರಿಗಳ ಮತ್ತು ಫರಿಸಾಯರ ನೀತಿಗಿಂತಲೂ ಹೆಚ್ಚಿನದಾಗದಿದ್ದರೆ ನೀವು ಪರಲೋಕರಾಜ್ಯದಲ್ಲಿ ಸೇರಲಾರಿರಿ ಎಂದು ನಿಮಗೆ ಹೇಳುತ್ತೇನೆ.
ಮತ್ತಾಯನು 5:20
ವೀಕ್ಷಣೆಗಳು26
#ವಾಕ್ಯಗಳು ಹಾಗೂ ನಡವಳಿಕೆ
#ವ್ಯಕ್ತಿತ್ವದ ಬದಲಾವಣೆ
#ಧನ್ಯವಾದಗಳು