ಕ್ರಿಸ್ತ ಅನ್ ಸಂಗ್ ಹೊಂಗ್ ದೇವರು ಏಕೆಂದರೆ ಕ್ರಿಸ್ತ ಅನ್ ಸಂಗ್ ಹೊಂಗ್ ಮಾತ್ರ
ದಾವೀದನ ಅಂಕುರದವರಾಗಿದ್ದು, ಅವರು ಅಂತ್ಯಕಾಲದಲ್ಲಿ ಬಂದು
ಸತ್ಯವೇದವನ್ನು ಬಿಚ್ಚುವ ಮೂಲಕ ಶಾಶ್ವತ ಒಡಂಬಡಿಕೆಯನ್ನು ಪುನಃಸ್ಥಾಪಿಸಿದರು.
ಕ್ರಿಸ್ತನು ಮೊದಲನೇ ಬರುವಿಕೆಯಲ್ಲಿ ಯೇಸು ಎಂಬ ಹೆಸರಿನೊಂದಿಗೆ ಬಂದು
ಎರಡನೇ ಬರುವಿಕೆಯಲ್ಲಿ ಅನ್ ಸಂಗ್ ಹೊಂಗ್ ಹೆಸರಿನೊಂದಿಗೆ 30ನೇ ವಯಸ್ಸಿನಲ್ಲಿ
ದೀಕ್ಷಾಸ್ನಾನ ಮಾಡಿಸಿಕೊಂಡು ಆಧ್ಯಾತ್ಮಿಕ ಅಭಿಷೇಕವನ್ನು ಹೊಂದಿದರು.
ಅವರು ಸುವಾರ್ತೆಯ ರಾಜ್ಯವನ್ನು ಅವರ ಮೊದಲನೇ ಬರುವಿಕೆಯಲ್ಲಿ ಮೂರು ವರ್ಷ
ಮತ್ತು ಅವರ ಎರಡನೇ ಬರುವಿಕೆಯಲ್ಲಿ 37 ವರ್ಷಗಳು ಮುನ್ನಡೆಸಿದರು
ಮತ್ತು ದಾವೀದನ ಸಿಂಹಾಸನದ ಪ್ರವಾದನೆಯನ್ನು ನೆರವೇರಿಸಿದರು.
1948, ಇದು ಯೇಸು ಕಲಿಸಿದ ಅಂಜೂರದ ಮರದ ಸಾಮ್ಯದ ಪ್ರಕಾರ ಇಸ್ರಾಯೇಲ್
ಸ್ವಾತಂತ್ರ್ಯ ಪಡೆದ ವರ್ಷ, ಕ್ರಿಸ್ತ ಅನ್ ಸಂಗ್ ಹೊಂಗ್ ಬಾಗಿಲ ಬಳಿ ನಿಂತು,
ಹೊಸ ಒಡಂಬಡಿಕೆಯ ಪಸ್ಕದ ಮೂಲಕ ನಮಗೆ ರಕ್ಷಣೆಯ ಆಶೀರ್ವಾದವನ್ನು ನೀಡಿ
ದೇವರ ಸಭೆಯನ್ನು ಸ್ಥಾಪಿಸಿದರು ಮತ್ತು ತಾಯಿ ದೇವರ ಬಗ್ಗೆ ಸಾಕ್ಷಿ ನೀಡಿದರು.
ಆಗ ಸುರುಳಿಯನ್ನು ಬಿಚ್ಚುವದಕ್ಕಾಗಲಿ ಅದರಲ್ಲಿ ನೋಡುವದಕ್ಕಾಗಲಿ ಯೋಗ್ಯನಾದವನು ಒಬ್ಬನೂ ಸಿಕ್ಕಲಿಲ್ಲವಾದ ಕಾರಣ ನಾನು ಬಹಳವಾಗಿ ಅಳುತ್ತಿರಲು ಹಿರಿಯರಲ್ಲಿ ಒಬ್ಬನು ನನಗೆ - ಅಳಬೇಡ; ಅಗೋ, ಯೂದಾ ಕುಲದಲ್ಲಿ ಜನಿಸಿದ ಸಿಂಹವೂ ದಾವೀದನ ಅಂಕುರದವನೂ ಆಗಿರುವಾತನು ಜಯಹೊಂದಿದನು; ಆತನು ಆ ಸುರುಳಿಯನ್ನೂ ಅದರ ಏಳು ಮುದ್ರೆಗಳನ್ನೂ ಬಿಚ್ಚುವನು ಎಂದು ಹೇಳಿದನು.
ಪ್ರಕಟನೆ 5:4-5
ಅನಂತರ ಅವರು ತಮ್ಮ ದೇವರಾದ ಯೆಹೋವನನ್ನೂ ತಮ್ಮ ರಾಜನಾದ ದಾವೀದನನ್ನೂ ಪುನಃ ಆಶ್ರಯಿಸುವರು; ಹೌದು, ಅಂತ್ಯಕಾಲದಲ್ಲಿ ಯೆಹೋವನನ್ನೂ ಆತನ ದಯೆಯನ್ನೂ ಭಯಭಕ್ತಿಯಿಂದ ಮರೆಹೊಗುವರು.
ಹೋಶೇಯ 3:5
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ