ಹವಾಮಾನ ಬದಲಾವಣೆಗಳು ಬಹಳ ಕಡಿಮೆ ಇರುವ ಉಷ್ಣವಲಯದ ಪ್ರದೇಶಗಳಲ್ಲಿ, ಮರಗಳಲ್ಲಿ ಸಾಮಾನ್ಯವಾಗಿ ಸ್ಪಷ್ಟವಾದ ಬೆಳವಣಿಗೆಯ ಉಂಗುರಗಳು ರೂಪುಗೊಳ್ಳುವುದಿಲ್ಲ, ಆದರೆ ಹವಾಮಾನದಲ್ಲಿನ ಬದಲಾವಣೆಗಳು, ಕೀಟಗಳು, ಬರಗಳು ಮತ್ತು ಪ್ರವಾಹಗಳಿಂದ ಬಳಲುತ್ತಿರುವ ಮರಗಳು ಸ್ಪಷ್ಟವಾದ ಬೆಳವಣಿಗೆಯ ಉಂಗುರಗಳನ್ನು ಹೊಂದಿರುತ್ತವೆ. ಅದೇ ರೀತಿ, ಪ್ರತಿಯೊಬ್ಬ ವ್ಯಕ್ತಿ ಪರಲೋಕರಾಜ್ಯಕ್ಕಾಗಿ ಯಾವ ರೀತಿಯ ಜೀವನವನ್ನು ನಡೆಸಿದ್ದಾನೆ ಎಂಬುದನ್ನು ತೋರಿಸುವ, ತನ್ನದೇ ಆದ ಬೆಳವಣಿಗೆಯ ಉಂಗುರಗಳನ್ನು ಹೊಂದಿರುತ್ತಾನೆ. ಹೀಗಾಗಿ, ಒಂದು ಆತ್ಮವನ್ನು ರಕ್ಷಿಸಲು ದೇವರ ಚಿತ್ತವನ್ನು ಪ್ರಾಮಾಣಿಕ ಹೃದಯದಿಂದ ಕಾರ್ಯರೂಪಕ್ಕೆ ಹಾಕುವುದು ಪ್ರಾಮುಖ್ಯವಾಗಿದೆ.
ಪ್ರತಿದಿನ, ಪ್ರತಿಯೊಬ್ಬ ವ್ಯಕ್ತಿ ಮನೆಯಲ್ಲಿ ಅಥವಾ ಸಭೆಯಲ್ಲಿ ಪರಲೋಕದ ಬೆಳವಣಿಗೆಯ ಉಂಗುರಗಳನ್ನು ರೂಪಿಸಿಕೊಳ್ಳುತ್ತಿದ್ದಾನೆ. ನಾವು ಸುವಾರ್ತೆಯನ್ನು ಬೋಧಿಸುವ, ಆರಾಧನೆಯಲ್ಲಿ ಪಾಲ್ಗೊಳ್ಳುವ ಮತ್ತು ಪ್ರಾರ್ಥಿಸುವದರಲ್ಲಿ ಸಮಯವನ್ನು ಕಳೆಯುವ ಮನೋಭಾವವು ನಮ್ಮ ಪರಲೋಕದ ಬೆಳವಣಿಗೆಯ ಉಂಗುರಗಳನ್ನು ನಿರ್ಧರಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಪ್ರಕಾರ ಆಶೀರ್ವಾದಗಳು ಮತ್ತು ಪ್ರತಿಫಲಗಳು ಅನುಗ್ರಹಿಸಲ್ಪಡುತ್ತವೆ.
ಇಗೋ, ಬೇಗ ಬರುತ್ತೇನೆ; ನಾನು ಪ್ರತಿಯೊಬ್ಬನಿಗೆ ಅವನವನ ನಡತೆಯ ಪ್ರಕಾರ ಕೊಡತಕ್ಕ ಪ್ರತಿಫಲವು ನನ್ನ ಕೈಯಲ್ಲಿ ಅದೆ. ಪ್ರಕಟನೆ 22:12
ತನ್ನ ಶರೀರಭಾವವನ್ನು ಕುರಿತು ಬಿತ್ತುವವನು ಆ ಭಾವದಿಂದ ನಾಶನವನ್ನು ಕೊಯ್ಯುವನು. ಆತ್ಮನನ್ನು ಕುರಿತು ಬಿತ್ತುವವನು ಆತ್ಮನಿಂದ ನಿತ್ಯಜೀವವನ್ನು ಕೊಯ್ಯುವನು. ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು. ಗಲಾತ್ಯದವರಿಗೆ 6:8-9
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ