ದೇವರು ನೋಹನ ದಿವಸಗಳಲ್ಲಿ ಜಲಪ್ರಳಯದಿಂದ ಮತ್ತು ಸೊದೊಮ್ ಮತ್ತು ಗೊಮೋರದ ದಿವಸಗಳಲ್ಲಿ ಬೆಂಕಿಯಿಂದ ಭೂಮಿಯನ್ನು ತೀರ್ಪು ಮಾಡಿದಾಗ, ದೇವರ ವಾಕ್ಯವನ್ನು ತಮಾಷೆಯಾಗಿ ತೆಗೆದುಕೊಂಡು ಓಡಿಹೋಗದೆ ಇದ್ದವರು ನಾಶವಾದರು.
ಅದೇ ರೀತಿ, “ದಂಡುಗಳು ಯೆರೂಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿರುವದನ್ನು ನೀವು ಕಾಣುವಾಗ, ನೀವು ಓಡಿಹೋಗಬೇಕು” ಎಂಬ ಯೇಸುವಿನ ಮಾತನ್ನು ನಂಬದ ಜನರು, ರೋಮನ್ ಸೈನ್ಯದ ಎರಡನೆಯ ಆಕ್ರಮಣದಲ್ಲಿ ನಾಶವಾದರು.
ಬೆಂಕಿಯ ಮೂಲಕ ದೇವರ ಕೊನೆ ನ್ಯಾಯತೀರ್ಪು ಎಂಬುದನ್ನು ಲೋಕವು ತಮಾಷೆಯಾಗಿ ಪರಿಗಣಿಸುತ್ತದೆ.
ಎಷ್ಟಾದರೂ, ದೇವರು ಮನುಕುಲಕ್ಕಾಗಿ ಕಾಯುತ್ತಿದ್ದಾರೆ ಏಕೆಂದರೆ ಯಾರೊಬ್ಬರು ನಾಶವಾಗದೆ ಎಲ್ಲರೂ ರಕ್ಷಣೆಯನ್ನು ಹೊಂದಬೇಕೆಂದು ಅವರು ಬಯಸುತ್ತಾರೆ.
ಹೀಗಾಗಿ, ಚರ್ಚ್ ಆಫ್ ಗಾಡ್ ಸದಸ್ಯರು ದೇವರ ಚಿತ್ತದ ಪ್ರಕಾರ ಆತ್ಮರಕ್ಷಣೆಯ ಸುದ್ದಿಯನ್ನು ಲೋಕಕ್ಕೆ ಹುರುಪಿನಿಂದ ಸಾಕ್ಷಿಕರಿಸುತ್ತಿದ್ದಾರೆ.
ಕಡೇ ದಿವಸಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು ಕುಚೋದ್ಯಮಾಡುತ್ತಾ -
ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು?
. . . ಆ ದಿನದಲ್ಲಿ ಆಕಾಶಮಂಡಲವು ಬೆಂಕಿ ಹತ್ತಿ ಲಯವಾಗಿ ಹೋಗುವದು, ಸೂರ್ಯಚಂದ್ರ ನಕ್ಷತ್ರಗಳು ಉರಿದು ಕರಗಿ ಹೋಗುವವು.
ಆದರೆ ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರು ನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.
2 ಪೇತ್ರನು 3:3-13
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ