ಧರ್ಮವನ್ನು ಮೀರಿನಡೆಯುವವರು ದುಷ್ಟರು ಎಂದು ಸತ್ಯವೇದ
ನಮಗೆ ತಿಳಿಸುತ್ತದೆ ಮತ್ತು ದೇವರ ನಿಯಮವನ್ನು ಅಂದರೆ
ಹೊಸ ಒಡಂಬಡಿಕೆಯ ಮಾರ್ಗವನ್ನು ಅನುಸರಿಸುವ ಮೂಲಕ ಮಾತ್ರ
ಅವರು ನೀತಿವಂತರಾಗಿ ಹೊಸದಾಗಿ ಹುಟ್ಟಬಹುದು ಎಂದು ಸಾಕ್ಷಿ ನೀಡುತ್ತದೆ.
ನಮ್ಮ ಅಲ್ಪಾವಧಿಯ ಜೀವನದಲ್ಲಿ, ದುಷ್ಟರು ನಮ್ಮ ಸುತ್ತಲೂ
ಹರಡಿಕೊಂಡಿದ್ದರೂ ನಾವು ಅವರ ಮಾರ್ಗದಲ್ಲಿ ನಡೆಯಬಾರದು.
ನಾವು ದೇವರ ಮಾರ್ಗಗಳನ್ನು ನಮ್ಮ ಹೃದಯದಲ್ಲಿ ಕೆತ್ತಿಕೊಂಡು
ಅವುಗಳನ್ನು ಕಾಪಾಡಿಕೊಂಡಾಗ ಮಾತ್ರ
ನಾವು ನಿತ್ಯ ಪರಲೋಕರಾಜ್ಯವನ್ನು ಪ್ರವೇಶಿಸಬಹುದು.
ನ್ಯಾಯತೀರ್ಪಿನ ದಿನದಂದು, ದೇವರು ನೀತಿವಂತರನ್ನು ಮತ್ತು ದುಷ್ಟರನ್ನು
ಹಾಗೂ ಕುರಿಗಳನ್ನು ಮತ್ತು ಆಡುಗಳನ್ನು ಪ್ರತ್ಯೇಕಿಸುತ್ತಾರೆ. ಆ ದಿನದಂದು
ನಾವು ನ್ಯಾಯತೀರ್ಪಿನಿಂದ ತಪ್ಪಿಸಿಕೊಂಡು ನೀತಿವಂತರೊಂದಿಗೆ
ನಿಲ್ಲಲು ಬಯಸುವುದಾದರೆ, ನಾವು ಅಧರ್ಮವನ್ನು ಬಿಟ್ಟುಬಿಡಬೇಕು
ಮತ್ತು ತಂದೆ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರು
ಮತ್ತೆ ಸ್ಥಾಪಿಸಿದ ಹೊಸ ಒಡಂಬಡಿಕೆಯ ಆಜ್ಞೆಗಳನ್ನು ಪಾಲಿಸಬೇಕು.
ನನ್ನನ್ನು ಸ್ವಾಮೀ, ಸ್ವಾಮೀ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ;
ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನು . . . ಆಗ ನಾನು ಅವರಿಗೆ- ನಾನೆಂದೂ ನಿಮ್ಮ ಗುರುತು ಕಾಣೆನು; ಧರ್ಮವನ್ನು ಮೀರಿನಡೆಯುವವರೇ, ನನ್ನಿಂದ ತೊಲಗಿಹೋಗಿರಿ ಎಂದು ಎಲ್ಲರ ಮುಂದೆ ಹೇಳಿಬಿಡುವೆನು.
ಮತ್ತಾಯ 7:21-23
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ