“ಮರುಭೂಮಿಯಲ್ಲಿ ಚಿನ್ನಕ್ಕಿಂತ ನೀರು ಅಮೂಲ್ಯ ಮತ್ತು ದಾರಿತಪ್ಪಿದ ಕುರಿಗೆ ರಾಜನಿಗಿಂತ ಕುರುಬನು ಹೆಚ್ಚು ಅಮೂಲ್ಯ” ಎಂಬ ಮಾತಿನಂತೆ, ಈ ಭೂಮಿಯಲ್ಲಿ ಮೌಲ್ಯಯುತವಾದದ್ದಕ್ಕೂ ಮತ್ತು ಪರಲೋಕರಾಜ್ಯದಲ್ಲಿ ಮೌಲ್ಯಯುತವಾದದ್ದಕ್ಕೂ ಬಹಳ ವ್ಯತ್ಯಾಸವಿದೆ. ಲೋಕದಲ್ಲಿ ಅನೇಕ ಜನರು ಮೌಲ್ಯವೆಂದು ಪರಿಗಣಿಸುವ ಸಂಪತ್ತು, ಗೌರವ ಮತ್ತು ಅಧಿಕಾರಕ್ಕೆ ನಾವು ಹೋಗಲಿರುವ ಪರಲೋಕರಾಜ್ಯದಲ್ಲಿ ಯಾವುದೇ ಮೌಲ್ಯವಿಲ್ಲ. ಈ ಕಾರಣದಿಂದಲೇ ಆದಿ ಸಭೆಯ ದೇವಜನರು ಹಿಂಸೆಗಳ ಮಧ್ಯೆಯೂ ಪರಲೋಕರಾಜ್ಯಕ್ಕಾಗಿ ಜೀವಿಸಿದರು.
ದೇವರ ರಾಜ್ಯದಲ್ಲಿ, ದೇವರ ವಾಕ್ಯವನ್ನು ಅಭ್ಯಾಸಕ್ಕೆ ಹಾಕುವುದೇ ಅತ್ಯಂತ ಮೌಲ್ಯಯುಳ್ಳ ಕೆಲಸವಾಗಿದೆ. ಚರ್ಚ್ ಆಫ್ ಗಾಡ್ನ ಸದಸ್ಯರು, ತಾವು ಪರಲೋಕರಾಜ್ಯದಲ್ಲಿ ಯುಗಯುಗಾಂತರಗಳಲ್ಲಿಯೂ ಅರಸರಾಗಿ ಆಳುವರು ಮತ್ತು ಆಕಾಶದ ನಕ್ಷತ್ರಗಳಂತೆ ಪ್ರಕಾಶಿಸುವರು ಎಂಬ ದೇವರ ವಾಕ್ಯವನ್ನು ನಂಬುತ್ತಾ, ಹೊಸ ಒಡಂಬಡಿಕೆಯ ಸತ್ಯದಿಂದ ಕಳೆದುಹೋದ ಒಂದು ಆತ್ಮವನ್ನೂ ಹುಡುಕುತ್ತಾರೆ.
ಇವರೆಲ್ಲರು ವಾಗ್ದಾನದ ಫಲಗಳನ್ನು ಹೊಂದದೆ ಅವುಗಳನ್ನು ದೂರದಿಂದ ನೋಡಿ ಉಲ್ಲಾಸದೊಡನೆ ವಂದಿಸಿ ನಂಬಿಕೆಯುಳ್ಳವರಾಗಿ ಮೃತರಾದರು. ತಾವು ಭೂವಿುಯ ಮೇಲೆ ಪರದೇಶದವರೂ ಪ್ರವಾಸಿಗಳೂ ಆಗಿದ್ದೇವೆಂದು ಒಪ್ಪಿಕೊಂಡರು. ಇಬ್ರಿಯರಿಗೆ 11:13
ಜ್ಞಾನಿಗಳು ತೇಜೋಮಯವಾದ ಆಕಾಶಮಂಡಲದಂತೆ ಪ್ರಕಾಶಿಸುವರು; ಬಹು ಜನರನ್ನು ಸದ್ಧರ್ಮಿಗಳನ್ನಾಗಿ ಮಾಡುವವರು ಯುಗಯುಗಾಂತರಗಳಲ್ಲಿಯೂ ನಕ್ಷತ್ರಗಳ ಹಾಗೆ ಹೊಳೆಯುವರು. ದಾನಿಯೇಲನು 12:3
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ