ಆದಿಸಭೆಯ ಸಂತರು ಸ್ವರ್ಗಾರೋಹಣ ದಿನದಿಂದ ಪಂಚಾಶತ್ತಮ ದಿನದವರೆಗೂ
ಹತ್ತು ದಿನಗಳು ಶ್ರದ್ಧೆಯಿಂದ ಪ್ರಾರ್ಥಿಸಿದರು, ಪಂಚಾಶತ್ತಮ ದಿನದಂದು,
ಅವರು ಧೈರ್ಯವುಳ್ಳ ನಂಬಿಕೆಯನ್ನು ಹೊಂದುತ್ತಾ ಸುವಾರ್ತೆಯು ವೇಗವಾಗಿ ಹರಡುವಂತೆ
ಮಾಡುವ ಪವಿತ್ರಾತ್ಮವರವನ್ನು ಸ್ವೀಕರಿಸಿದರು. ಈ ಪವಿತ್ರಾತ್ಮನ ಕಾಲದಲ್ಲಿ,
ದೇವರು 2,000 ವರ್ಷಗಳ ಹಿಂದೆ ಸುರಿಸಿದಕ್ಕಿಂತ ಏಳು ಪಟ್ಟು ಹೆಚ್ಚಿನ
ಪವಿತ್ರಾತ್ಮನ ವರಗಳನ್ನು ಈ ಪಂಚಾಶತ್ತಮದಂದು ಅನುಗ್ರಹಿಸುವರು.
ಪವಿತ್ರಾತ್ಮವರವನ್ನು ಸ್ವೀಕರಿಸಿದ ನಂತರ, “ಯೇಸುವೇ ಕ್ರಿಸ್ತನು” ಎಂದು
ಆದಿಸಭೆಯವರು ಸಾಕ್ಷೀಕರಿಸಿದರು. ಅದೇ ರೀತಿ, ಈ ಪಂಚಾಶತ್ತಮ ದಿನವನ್ನು ಆಚರಿಸಿ
ಪವಿತ್ರಾತ್ಮನ ಹಿಂಗಾರು ಮಳೆಯನ್ನು ಸ್ವೀಕರಿಸಿದ ದೇವರ ಸಭೆಯ ಸದಸ್ಯರು
ನಮ್ಮ ರಕ್ಷಕರಾದ ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ಪರಲೋಕದ ತಾಯಿಯ
ಬಗ್ಗೆ ಲೋಕಕ್ಕೆ ದೈರ್ಯವಾಗಿ ಬೋಧಿಸುತ್ತಾರೆ.
ಪಂಚಾಶತ್ತಮ ದಿನದ ಹಬ್ಬವು ಬಂದಿರಲಾಗಿ ಅವರೆಲ್ಲರು ಏಕಮನಸ್ಸಿನಿಂದ ಒಂದೇ ಸ್ಥಳದಲ್ಲಿ ಕೂಡಿದ್ದರು. ಆಗ ಬಿರುಗಾಳಿ ಬೀಸುತ್ತದೋ ಎಂಬಂತೆ ಫಕ್ಕನೆ ಆಕಾಶದೊಳಗಿಂದ ಒಂದು ಶಬ್ದವುಂಟಾಗಿ ಅವರು ಕೂತಿದ್ದ ಮನೆಯನ್ನೆಲ್ಲಾ ತುಂಬಿಕೊಂಡಿತು. ಅದಲ್ಲದೆ ಉರಿಯಂತಿದ್ದ ನಾಲಿಗೆಗಳು ವಿಂಗಡಿಸಿಕೊಳ್ಳುವ ಹಾಗೆ ಅವರಿಗೆ ಕಾಣಿಸಿ ಅವರಲ್ಲಿ ಒಬ್ಬೊಬ್ಬರ ಮೇಲೆ ಒಂದೊಂದಾಗಿ ಕೂತುಕೊಂಡವು. ಆಗ ಅವರೆಲ್ಲರು ಪವಿತ್ರಾತ್ಮಭರಿತರಾಗಿ ಆ ಆತ್ಮ ತಮತಮಗೆ ನುಡಿಯುವ ಶಕ್ತಿಯನ್ನು ಕೊಡುವ ಪ್ರಕಾರ ಬೇರೆಬೇರೆ ಭಾಷೆಗಳಿಂದ ಮಾತಾಡುವದಕ್ಕೆ ಪ್ರಾರಂಭಿಸಿದರು. ಅಪೊಸ್ತಲರ ಕೃತ್ಯಗಳು 2:1–4
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ