ಹಳೆ ಒಡಂಬಡಿಕೆಯ ಕಾಲದಲ್ಲಿ, ಒಡಂಬಡಿಕೆಯ ಮಂಜೂಷವನ್ನು ಇರಿಸಲಾಗಿದ್ದ ಮಹಾಪರಿಶುದ್ಧ ಸ್ಥಳದ ಉದ್ದ, ಅಗಲ ಮತ್ತು ಎತ್ತರವು ಸಮವಾಗಿತ್ತು. ಪರಲೋಕದಲ್ಲಿರುವ ಪರಿಶುದ್ಧ ಪಟ್ಟಣವಾದ ಯೆರೂಸಲೇಮಿನ ಅಗಲ ಮತ್ತು ಎತ್ತರದವು ಮದಲಗಿತ್ತಿಯಾದ ತಾಯಿ ದೇವರನ್ನು ಸೂಚಿಸುತ್ತದೆ. ಅವರು ಜೀವಜಲದ ಬುಗ್ಗೆ ಮತ್ತು ಮಹಾಪರಿಶುದ್ಧ ಸ್ಥಳದ ಸತ್ಯತ್ವವಾಗಿದ್ದಾರೆ.
ಆದಿಯಲ್ಲಿ ದೇವರು ಭೂಮ್ಯಾಕಾಶವನ್ನು ಮತ್ತು ಅದರಲ್ಲಿರುವ ಸಮಸ್ತವನ್ನೂ ತನ್ನ ವಾಕ್ಯದಿಂದ ಸೃಷ್ಟಿಸಿದಂತೆಯೇ, ಪರ್ಣಶಾಲೆಗಳ ಹಬ್ಬದ ಕೊನೆಯ ದಿನದಂದು ನೀಡಲಾದ "ಪವಿತ್ರಾತ್ಮವನ್ನು ಸ್ವೀಕರಿಸಿ" ಎಂಬ ವಾಕ್ಯಗಳು ಸಹ ಶಕ್ತಿಯನ್ನು ಹೊಂದಿವೆ ಎಂದು ನಾವು ನಂಬಬೇಕು. ನಾವು ಈ ನಂಬಿಕೆಯೊಂದಿಗೆ ಸುವಾರ್ತೆಯನ್ನು ಬೋಧಿಸುವಾಗ, ಆದಿ ಸಭೆಯಲ್ಲಿ ಸಾಧಿಸಲಾದ ಪವಿತ್ರಾತ್ಮದ ಕೆಲಸಕ್ಕಿಂತ ಹೆಚ್ಚು ಶಕ್ತಿಯುತವಾದ ಹಿಂಗಾರು ಮಳೆಯ ಪವಿತ್ರಾತ್ಮದ ಕೆಲಸವು ನಡೆಯುತ್ತದೆ.
ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತಾಡುತ್ತಾ - ಬಾ, ಯಜ್ಞದ ಕುರಿಯಾದಾತನಿಗೆ ಹೆಂಡತಿಯಾಗತಕ್ಕ ಮದಲಗಿತ್ತಿಯನ್ನು ನಿನಗೆ ತೋರಿಸುವೆನು ಎಂದು ಹೇಳಿ . . . ಯೆರೂಸಲೇಮೆಂಬ ಪರಿಶುದ್ಧ ಪಟ್ಟಣವು ದೇವರ ತೇಜಸ್ಸುಳ್ಳದ್ದಾಗಿ ಪರಲೋಕದೊಳಗಿಂದ ದೇವರ ಕಡೆಯಿಂದ ಇಳಿದುಬರುವದನ್ನು ನನಗೆ ತೋರಿಸಿದನು . . . ಅದರ ಉದ್ದವೂ ಅಗಲವೂ ಎತ್ತರವೂ ಸಮವಾಗಿವೆ.
ಪ್ರಕಟನೆ 21:9-16
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ