ಇಂದು ಚರ್ಚ್ ಆಫ್ ಗಾಡ್ನಲ್ಲಿ ವಾರ್ಷಿಕವಾಗಿ ಆಚರಿಸುವ ಸರ್ವದೋಷಪರಿಹಾರಕ ದಿನವು ಇಸ್ರಾಯೇಲ್ಯರ ನಲವತ್ತು ವರ್ಷಗಳ ಅರಣ್ಯ ಜೀವನದಿಂದ ಆರಂಭವಾಯಿತು; ಮತ್ತು ಸರ್ವದೋಷಪರಿಹಾರಕ ದಿನದ ಮೂಲಕ ದೇವರು ಪಾಪಗಳ ಕ್ಷಮೆ ಮತ್ತು ಆತ್ಮರಕ್ಷಣೆಯ ಮಾರ್ಗವನ್ನು ಎಲ್ಲಾ ಜನರು ತಿಳಿಯುವಂತೆ ಮಾಡಿದರು.
ಮೋಶೆ ಹತ್ತು ಆಜ್ಞೆಗಳನ್ನು ಸ್ವೀಕರಿಸಲು ಸೀನಾಯಿ ಪರ್ವತದಲ್ಲಿ ನಲವತ್ತು ದಿನ ಉಪವಾಸವಿದ್ದಾಗ, ಚಿನ್ನದ ಬಸವನನ್ನು ಆರಾಧಿಸಿದ ಇಸ್ರಾಯೇಲ್ಯರನ್ನು ದೇವರು ಕ್ಷಮಿಸಿದ ದಿನವೇ ಸರ್ವದೋಷಪರಿಹಾರಕ ದಿನವಾಗಿದೆ. ಇದು ಅವರ ಪಾಪಗಳನ್ನು ಕ್ಷಮಿಸಿದ ಸಂಕೇತವಾಗಿ ದೇವರು ಎರಡನೆಯ ಸಾರಿ ಹತ್ತು ಆಜ್ಞೆಗಳನ್ನು ಅನುಗ್ರಹಿಸಿದ ದಿನವಾಗಿದೆ.
ಸಾಮಾನ್ಯ ದಿನಗಳಲ್ಲಿ, ಜನರ ಎಲ್ಲಾ ಪಾಪಗಳನ್ನು ಒಂದು ವರ್ಷ ಪವಿತ್ರಾಲಯಸ್ಥಾನದಲ್ಲಿ ಇಡಲಾಗುತ್ತಿತ್ತು. ಸರ್ವದೋಷಪರಿಹಾರಕ ದಿನದಂದು, ಮಹಾಯಾಜಕನು ಅಜಾಜೇಲನ ಹೋತದ ಮೇಲೆ ತನ್ನ ಕೈಗಳನ್ನಿಟ್ಟಂತೆ ಪಾಪಗಳು ಅದರ ಮೇಲೆ ವರ್ಗಾವಣೆಯಾಗಿ ಅದನ್ನು ಅರಣ್ಯಕ್ಕೆ ಕಳುಹಿಸಲಾಯಿತು.
ಅಜಾಜೇಲನ ಹೋತವು ಸತ್ತಾಗ, ಜನರ ಎಲ್ಲಾ ಪಾಪಗಳು ಕ್ಷಮಿಸಲ್ಪಟ್ಟವು. ಅದೇ ರೀತಿ, ಪವಿತ್ರಾಲಯಸ್ಥಾನದ ಸತ್ಯತ್ವವಾದ ತಂದೆ ದೇವರು ಮತ್ತು ತಾಯಿ ದೇವರು ಮನುಕುಲದ ಎಲ್ಲಾ ಪಾಪ ಮತ್ತು ಸಂಕಟಗಳನ್ನು ಹೊತ್ತು, ಸರ್ವದೋಷಪರಿಹಾರಕ ದಿನದಂದು ಆ ಪಾಪಗಳನ್ನು ಸೈತಾನನಿಗೆ ವರ್ಗಾಯಿಸುತ್ತಾರೆ ಮತ್ತು ನಂತರ ಸೈತಾನನು ನರಕದ ದಂಡನೆಯನ್ನು ಪ್ರವೇಶಿಸುತ್ತಾನೆ.
ಇದಲ್ಲದೆ ಅವರನ್ನು ಮರುಳುಗೊಳಿಸಿದ ಸೈತಾನನು ಬೆಂಕಿ ಗಂಧಕಗಳುರಿಯುವ ಕೆರೆಯಲ್ಲಿ ದೊಬ್ಬಲ್ಪಟ್ಟನು. ಅಲ್ಲಿ ಮೃಗವೂ ಸುಳ್ಳು ಪ್ರವಾದಿಯೂ ಇದ್ದಾರೆ. ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆಪಡುತ್ತಿರುವರು. ಪ್ರಕಟನೆ 20:10
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ