ನಮ್ಮ ದೇಹಗಳು ದೇವರು ತನ್ನ ರಕ್ತದಿಂದ ಕೊಂಡುಕೊಂಡ ದೇವರ ಆಲಯವಾಗಿರುವುದರಿಂದ, ನಾವು ಅರಣ್ಯದ ಪ್ರಯಾಣದ ಕೊನೆಯಲ್ಲಿ ಸೈತಾನನಿಂದ ಶೋಧಿಸಲ್ಪಟ್ಟು ವ್ಯಭಿಚಾರದಲ್ಲಿ ತೊಡಗಿದ ಇಸ್ರಾಯೇಲ್ಯರಂತೆ ಅಥವಾ ಹಸಿವಿನಿಂದ ತನ್ನ ಚೊಚ್ಚಲತನದ ಹಕ್ಕನ್ನು ಮಾರಿದ ಏಸಾವನಂತೆ ವರ್ತಿಸಬಾರದು. ನಾವು ಈ ದುಷ್ಟ ಮತ್ತು ವ್ಯಭಿಚಾರಿ ಲೋಕವನ್ನು ಅನುಸರಿಸುವ ಬದಲು ದೇವರನ್ನು ಅನುಸರಿಸುವ ನೀತಿವಂತ ಜೀವನವನ್ನು ನಡೆಸಬೇಕು.
ಲೋಕವು ಪಾಪ ಮತ್ತು ವ್ಯಭಿಚಾರದಿಂದ ತುಂಬಿರುವಾಗ, ದೇವರು ಲೋಕಕ್ಕೆ ನ್ಯಾಯತೀರಿಸುತ್ತಾರೆ. ನೋಹನ ದಿನಗಳಲ್ಲಿ ದುಷ್ಟ ಪೀಳಿಗೆಯನ್ನು ನೀರಿನಿಂದ ಹಾಗೂ ಸೊದೋಮ್ ಮತ್ತು ಗೊಮೋರಗಳ ದಿನಗಳಲ್ಲಿ ಬೆಂಕಿಯಿಂದ ದೇವರು ನ್ಯಾಯತೀರ್ಪು ಮಾಡಿದಂತೆಯೇ, ಈ ದುಷ್ಟ ಮತ್ತು ವ್ಯಭಿಚಾರಿ ಸಂತತಿಯನ್ನು ಬೆಂಕಿಯಿಂದ ನ್ಯಾಯತೀರ್ಪು ಮಾಡುವುದಾಗಿ ದೇವರು ಪ್ರವಾದಿಗಳ ಮೂಲಕ ಮುಂತಿಳಿಸಿದರು ಮತ್ತು ತನ್ನ ಮಕ್ಕಳಿಗೆ ಪರಿಶುದ್ಧ ಮತ್ತು ಭಕ್ತಿಯ ಜೀವನವನ್ನು ನಡೆಸುವಂತೆ ಕಲಿಸಿದರು.
ಆ ನೀರುಗಳಿಂದಲೇ ಆ ಕಾಲದಲ್ಲಿದ್ದ ಲೋಕವು ಜಲಪ್ರಲಯದಲ್ಲಿ ನಾಶವಾಯಿತು. ಆದರೆ ಈಗಿರುವ ಭೂಮ್ಯಾಕಾಶಗಳು ಅದೇ ವಾಕ್ಯದ ಬಲದಿಂದ ಬೆಂಕಿಯ ಮೂಲಕ ನಾಶವಾಗುವದಕ್ಕೆ ಇಡಲ್ಪಟ್ಟಿವೆ; ಮತ್ತು ಭಕ್ತಿಹೀನರ ಶಿಕ್ಷಾವಿಧಿಯೂ ನಾಶವೂ ಉಂಟಾಗುವ ದಿನಕ್ಕಾಗಿ ಆ ಬೆಂಕಿ ಸಿದ್ಧವಾಗಿದೆ. . . . ನೀವು ದೇವರ ದಿನದ ಪ್ರತ್ಯಕ್ಷತೆಯನ್ನು ಎದುರು ನೋಡುತ್ತಾ ಹಾರೈಸುತ್ತಾ ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕಲ್ಲಾ; . . . 2 ಪೇತ್ರನು 3:6-12
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ