ಪ್ರತಿಯೊಂದು ಆರಾಧನೆಯ ಮೂಲಕ ದೇವರು ತನ್ನ ಮಕ್ಕಳಿಗೆ
ಪರಲೋಕದ ಆಶೀರ್ವಾದವನ್ನು ನೀಡುವುದರಿಂದ,
ದೇವರನ್ನು ನಂಬುವುದು ಮತ್ತು ದೇವರಿಗೆ ಭಯಭಕ್ತಿ ತೋರುವ ಕ್ರಿಯೆಯೇ
ಸಂತೋಷ ಮತ್ತು ಉಲ್ಲಾಸಕರವಾಗಿದೆ.
ಪರಲೋಕದ ಬಗ್ಗೆ ನಿರೀಕ್ಷೆ ಇಲ್ಲದ ಕಟ್ಟುಪಾಡಿನ ನಂಬಿಕೆಯ ಜೀವನವು
ಶೋಧನೆಗಳನ್ನು ಬರಮಾಡುತ್ತದೆ. ನಾವು ಸೈತಾನನ ಕುತಂತ್ರಕ್ಕೆ ಸೋತುಹೋದ
ಆದಾಮ ಮತ್ತು ಹವ್ವಳ ಹಾದಿಯನ್ನು ಅನುಸರಿಸಬಾರದು,
ಆದರೆ ಯೋಬನಂತೆ ಸಂಪೂರ್ಣ ನಂಬಿಕೆಯನ್ನು ಹೊಂದಿದವರಾಗಿ,
ಕೊನೆಯವರೆಗೂ ದೇವರಿಗೆ ಭಯಭಕ್ತಿಯನ್ನು ತೋರುತ್ತಾ,
ಯೇಸುವಿನ ಮಾದರಿಯನ್ನು ಅನುಸರಿಸುತ್ತಾ,
ದೇವರ ವಾಕ್ಯಗಳ ಮೂಲಕ ಶೋಧನೆಗಳನ್ನು ಜಯಿಸಬೇಕು.
ನಮ್ಮ ಪರಲೋಕದ ದಾರಿಯನ್ನು ತಡೆಯುವ ಎಲ್ಲಾ ಲೋಕದ ಶೋಧನೆಗಳು ಪರೀಕ್ಷೆಗಳಾಗಿವೆ.
40 ವರ್ಷಗಳ ಕಾಲ ಅರಣ್ಯದಲ್ಲಿ ಇಸ್ರಾಯೇಲ್ಯರನ್ನು ಪ್ರತಿ ಕ್ಷಣ ಪರೀಕ್ಷಿಸಿದಂತೆ,
ಪರಲೋಕದ ಕಾನಾನಿನ ಕಡೆಗೆ ನಡೆಯುತ್ತಿರುವ ಚರ್ಚ್ ಆಫ್ ಗಾಡ್ನ ಸದಸ್ಯರಿಗೆ
ಪರೀಕ್ಷೆಗಳನ್ನು ಕೊಡಲಾಗುತ್ತದೆ, ಆದರೆ ನಾವು ತಂದೆ ದೇವರು ಮತ್ತು
ತಾಯಿ ದೇವರ ಮೇಲೆ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದರೆ,
ನಾವು ಪರೀಕ್ಷೆಗಳಲ್ಲಿ ದೃಢವಾಗಿ ನಿಂತು, ಕೊನೆಯಲ್ಲಿ ಪರಲೋಕದ ಆಶೀರ್ವಾದವನ್ನು ಸ್ವೀಕರಿಸಬಹುದು.
“ನೀನು ನನ್ನ ಸಹನವಾಕ್ಯವನ್ನು ಕಾಪಾಡಿದ್ದರಿಂದ ಭೂನಿವಾಸಿಗಳನ್ನು
ಪರೀಕ್ಷಿಸುವದಕ್ಕಾಗಿ ಲೋಕದ ಮೇಲೆಲ್ಲಾ ಬರುವದಕ್ಕಿರುವ
ಶೋಧನೆಯ ಸಮಯದಲ್ಲಿ ನಿನ್ನನ್ನು ತಪ್ಪಿಸಿ ಕಾಪಾಡುವೆನು.” ಪ್ರಕಟನೆ 3:10
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ