ಸೊಲೊಮೋನನು ತಾನು ಬಯಸಿದ್ದನ್ನೆಲ್ಲಾ ಮಾಡಿದರೂ, ಕೊನೆಯಲ್ಲಿ, “ಸಮಸ್ತವೂ ವ್ಯರ್ಥ!” ಎಂದು ಹೇಳಿದನು ಮತ್ತು ಅಲೆಕ್ಸಾಂಡರ್ ದಿ ಗ್ರೇಟ್ ಸಹ ಒಪ್ಪಿಕೊಂಡಂತೆ, ಮರಣ ಸಂಭವಿಸಿದಾಗ, ಮನುಷ್ಯನು ಬರಿಗೈಯಲ್ಲಿ ಹಿಂತಿರುಗುತ್ತಾನೆ. ಆದ್ದರಿಂದ, ನಾವು ಈ ಭೂಮಿಯ ಕ್ಷಣಿಕ ಸಂತೋಷ ಮತ್ತು ಸುಖಭೋಗಗಳಿಂದ ತೃಪ್ತರಾಗಬಾರದು, ಬದಲಾಗಿ ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಗೊಂಡು ನಿತ್ಯ ಪರಲೋಕರಾಜ್ಯಕ್ಕಾಗಿ ಜೀವಿಸಬೇಕು. ಜೀವಿಸಲು ಬುದ್ಧಿವಂತ ಮಾರ್ಗವೆಂದರೆ ಪರಲೋಕರಾಜ್ಯದಲ್ಲಿ ನಾವು ಯುಗಯುಗಾಂತರಗಳವರೆಗೂ ಆನಂದಿಸುವ ಸಂತೋಷಕ್ಕಾಗಿ ಜೀವಿಸುವದಾಗಿದೆ.
ಈ ಭೂಮಿಯ ಮೇಲೆ ನಂಬಿಗಸ್ತರಾಗಿ ಜೀವಿಸಲು ಮತ್ತು ಪರಲೋಕದಲ್ಲಿ ದೇವರ ಆಶೀರ್ವಾದವನ್ನು ಸ್ವೀಕರಿಸಲು ಮನುಕುಲವು ಆಯ್ಕೆಗಳನ್ನು ಮಾಡಬೇಕು. ಚರ್ಚ್ ಆಫ್ ಗಾಡ್ನ ಸದಸ್ಯರು ಸಬ್ಬತ್ ದಿನ ಮತ್ತು ಏಳು ವಾರ್ಷಿಕ ಹಬ್ಬಗಳನ್ನು ಆಚರಿಸುತ್ತಾರೆ ಮತ್ತು ಪರಲೋಕರಾಜ್ಯ ಮತ್ತು ನಿತ್ಯಜೀವ ಸ್ವೀಕರಿಸುವ ಸಿದ್ಧತೆಯಲ್ಲಿ ಒಳ್ಳೆಯ ಕಾರ್ಯಗಳ ಮೂಲಕ ದೇವರನ್ನು ಮಹಿಮೆಪಡಿಸುತ್ತಾರೆ.
ಮಣ್ಣು ಭೂವಿುಗೆ ಸೇರಿ ಇದ್ದ ಹಾಗಾಗುವದು; ಆತ್ಮವು ತನ್ನನ್ನು ದಯಪಾಲಿಸಿದ ದೇವರ ಬಳಿಗೆ ಸೇರುವದು; ಇಷ್ಟರೊಳಗಾಗಿ [ನಿನ್ನ ಸೃಷ್ಟಿಕರ್ತನನ್ನು ಸ್ಮರಿಸದಿರಬೇಡ.] ವ್ಯರ್ಥವೇ ವ್ಯರ್ಥ, ಸಮಸ್ತವೂ ವ್ಯರ್ಥ ಎಂದು ಪ್ರಸಂಗಿಯು ಹೇಳುತ್ತಾನೆ. ವಿಷಯವು ತೀರಿತು; ಎಲ್ಲವೂ ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ. ಪ್ರಸಂಗಿ 12:7–8, 13
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ