ಎಲ್ಲಾ ಮಾನವಕುಲವು ನರಕಕ್ಕೆ ಹೋಗುವ ದುರದೃಷ್ಟಕರ ಪರಿಸ್ಥಿತಿಯನ್ನು ಅಪೊಸ್ತಲ ಯೋಹಾನನು ನೋಡಿದಾಗ, ಅವನು ಅಳುತ್ತಿದ್ದನು. ಆದರೆ, ಹಿರಿಯರೊಬ್ಬರು ಅವನಿಗೆ, “ಭವಿಷ್ಯದಲ್ಲಿ, ದಾವೀದನ ಅಂಕುರದವನು ಮುದ್ರಿಸಲ್ಪಟ್ಟಿರುವ ಸತ್ಯವೇದವನ್ನು ತೆರೆದು ಮಾನವಕುಲವನ್ನು ರಕ್ಷಿಸುತ್ತಾರೆ” ಎಂದು ಹೇಳಿದರು. ದಾವೀದನ ಜೀವನದ ಪ್ರಕಾರ,
ಕ್ರಿಸ್ತ ಅನ್ ಸಂಗ್ ಹೊಂಗ್ ರವರು 30 ವರುಷದವರಾದಾಗ ದೀಕ್ಷಾಸ್ನಾನ ಹೊಂದಿ ಉಳಿದ 37 ವರ್ಷಗಳನ್ನು ಪೂರ್ಣಗೊಳಿಸಿದರು ಮತ್ತು ಹೊಸ ಒಡಂಬಡಿಕೆ ಮತ್ತು ನಮ್ಮ ಪರಲೋಕದ ತಾಯಿಯ ಬಗ್ಗೆ ಇರುವ ಸತ್ಯವನ್ನು ಒಳಗೊಂಡಂತೆ ಮುದ್ರಿಸಲ್ಪಟ್ಟ ಎಲ್ಲಾ ಸತ್ಯವೇದದ ರಹಸ್ಯಗಳನ್ನು ಬಹಿರಂಗಪಡಿಸಿದರು.
ಸತ್ಯವೇದದ ರಹಸ್ಯಗಳನ್ನು ದಾವೀದನಿಂದ ಮಾತ್ರ ಬಹಿರಂಗಪಡಿಸಬಹುದಾದ ಕಾರಣ ಮಾನವಕುಲವು ದಾವೀದನನ್ನು ಭೇಟಿಯಾಗಬೇಕು. ದಾವೀದನಾಗಿ ಬಂದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಈ ತಾತ್ಕಾಲಿಕ ಜೀವನದ ವ್ಯವಹಾರಗಳ ಬದಲಾಗಿ ನಿತ್ಯ ಪರಲೋಕರಾಜ್ಯದ ಬಗ್ಗೆ ಮಾನವಕುಲಕ್ಕೆ ಕಲಿಸಿದರು. ಮತ್ತು ದೇವರ ಯೋಜನೆಯಲ್ಲಿ ಅಡಗಿರುವ ಆಧ್ಯಾತ್ಮಿಕ ಹವ್ವಳಾದ ತಾಯಿ ದೇವರ ಅಸ್ತಿತ್ವದ ಬಗ್ಗೆ ಕಲಿಸಿದರು. ಆದ್ದರಿಂದ, ಎಲ್ಲಾ ಜನಾಂಗಗಳು ತಾಯಿ ದೇವರು ನೆಲೆಸಿರುವ ಸಭೆಗೆ ಹೋಗುತ್ತಿದ್ದಾರೆ.
ಆಗ ಸುರುಳಿಯನ್ನು ಬಿಚ್ಚುವದಕ್ಕಾಗಲಿ ಅದರಲ್ಲಿ ನೋಡುವದಕ್ಕಾಗಲಿ ಯೋಗ್ಯನಾದವನು ಒಬ್ಬನೂ ಸಿಕ್ಕಲಿಲ್ಲವಾದ ಕಾರಣ ನಾನು ಬಹಳವಾಗಿ ಅಳುತ್ತಿರಲು ಹಿರಿಯರಲ್ಲಿ ಒಬ್ಬನು ನನಗೆ - ಅಳಬೇಡ; ಅಗೋ, ಯೂದಾ ಕುಲದಲ್ಲಿ ಜನಿಸಿದ ಸಿಂಹವೂ ದಾವೀದನ ಅಂಕುರದವನೂ ಆಗಿರುವಾತನು ಜಯಹೊಂದಿದನು; ಆತನು ಆ ಸುರುಳಿಯನ್ನೂ ಅದರ ಏಳು ಮುದ್ರೆಗಳನ್ನೂ ಬಿಚ್ಚುವನು ಎಂದು ಹೇಳಿದನು.
ಪ್ರಕಟನೆ 5:4-5
ಒಂದೇ ಸಾರಿ ಸಾಯುವದೂ ಆಮೇಲೆ ನ್ಯಾಯತೀರ್ಪೂ ಮನುಷ್ಯರಿಗೆ ಹೇಗೆ ನೇಮಕವಾಗಿದೆಯೋ ಹಾಗೆಯೇ ಕ್ರಿಸ್ತನು ಸಹ ಬಹುಜನರ ಪಾಪಗಳನ್ನು ಹೊತ್ತುಕೊಳ್ಳುವದಕ್ಕೋಸ್ಕರ ಒಂದೇ ಸಾರಿ ಸಮರ್ಪಿತನಾದನು, 28ಮತ್ತು ತನ್ನನ್ನು ನಿರೀಕ್ಷಿಸಿಕೊಂಡಿರುವವರಿಗೆ ರಕ್ಷಣೆಯನ್ನುಂಟು ಮಾಡುವದಕ್ಕೋಸ್ಕರ ಪಾಪಸಂಬಂಧವಿಲ್ಲದವನಾಗಿ ಎರಡನೆಯ ಸಾರಿ ಕಾಣಿಸಿಕೊಳ್ಳುವನು.
ಇಬ್ರಿಯರಿಗೆ 9:27-28
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ