ಪಾಪಿಯು ತನ್ನ ಪಾಪವನ್ನು ಮರೆತು ಹೊಸ ಜೀವನವನ್ನು ನಡೆಸಿದರೂ, ಅವರ ಪಾಪವು ಎಂದಿಗೂ ಕಣ್ಮರೆಯಾಗುವದಿಲ್ಲ.
ಮಾನವಕುಲವು ಪರಲೋಕದಲ್ಲಿ ಪಾಪಮಾಡಿ ಪರಲೋಕ ಅಥವಾ ನರಕದ ತೀರ್ಪಿಗಾಗಿ ಕಾಯುತ್ತಿರುವ ತಪ್ಪಿತಸ್ಥರೆಂದು ನಿರ್ಣಯಿಸಲಾಗದ ಸೆರೆಯಾಳುಗಳು. ಹೊಸ ಒಡಂಬಡಿಕೆಯ ನಿಯಮದ ಮೂಲಕ ಈ ಭೂಮಿಯ ಮೇಲೆ ಪಶ್ಚಾತ್ತಾಪ ಪಡುವ ಕೊನೆಯ ಅವಕಾಶದ ನಂತರ, ಅವರು ದೇವರ ನ್ಯಾಯತೀರ್ಪಿನ ಸಿಂಹಾಸನದ ಮುಂದೆ ನಿಲ್ಲಬೇಕು ಮತ್ತು ಅವರ ಪಾಪಗಳಿಗೆ ಕೊನೆಯ ನ್ಯಾಯತೀರ್ಪು ನೀಡಲಾಗುವದು.
ಹೊಸ ಒಡಂಬಡಿಕೆಯ ನಿಯಮವು ನಮ್ಮ ಎಲ್ಲಾ ಪಾಪಗಳು ಮತ್ತು ಅಪರಾಧಗಳನ್ನು ತೆಗೆದುಹಾಕುವ ವಾಗ್ದಾನವನ್ನು ಒಳಗೊಂಡಿದೆ.
ಆಧ್ಯಾತ್ಮಿಕ ಪಾಪಿಗಳ ಘೋರ ಪಾಪಗಳನ್ನು ತೆಗೆದುಹಾಕಲು ಯೇಸು ಶಿಲುಬೆಯ ಮೇಲೆ ಯಾತನೆಪಟ್ಟರು. ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ಬಿಡುಗಡೆಯ ಅನುಗ್ರಹವನ್ನು ಒಳಗೊಂಡಿರುವ ಹೊಸ ಒಡಂಬಡಿಕೆಯ ನಿಯಮವನ್ನು ಪುನಃಸ್ಥಾಪಿಸಿದರು. ಯೇಸುವಿನಂತೆ ಅವರು ಕೂಡ ಮನಃಪೂರ್ವಕವಾಗಿ “ತಿರುಗಿಕೊಳ್ಳಿ” ಎಂದು ಕೂಗುತ್ತಾ ಮಾನವಕುಲವನ್ನು ಪರಲೋಕರಾಜ್ಯಕ್ಕೆ
ಮುನ್ನಡೆಸುತ್ತಿದ್ದಾರೆ.
ಒಂದೇ ಸಾರಿ ಸಾಯುವದೂ ಆಮೇಲೆ ನ್ಯಾಯತೀರ್ಪೂ ಮನುಷ್ಯರಿಗೆ ಹೇಗೆ ನೇಮಕವಾಗಿದೆಯೋ . . .
ಇಬ್ರಿಯರಿಗೆ 9:27
ಆಮೇಲೆ ಮೃತ್ಯುವೂ ಪಾತಾಳವೂ ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟವು; ಆ ಬೆಂಕಿಯ ಕೆರೆಯೇ ಎರಡನೆಯ ಮರಣವು. ಯಾವನ ಹೆಸರು ಜೀವಬಾಧ್ಯರ ಪಟ್ಟಿಯಲ್ಲಿ ಬರೆದದ್ದಾಗಿ ಕಾಣಲಿಲ್ಲವೋ ಅವನು ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟನು.
ಪ್ರಕಟನೆ 20:14-15
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ