ಇತ್ತೀಚಿನ ದಿನಗಳಲ್ಲಿ, ಹಲವಾರು ಸಭೆಗಳು ತಾವು ಪಂಚಾಶತ್ತಮ ದಿನವನ್ನು ಆಚರಿಸುತ್ತೇವೆ ಮತ್ತು ಪವಿತ್ರಾತ್ಮ ವರವನ್ನು ಸ್ವೀಕರಿಸಿದ್ದೇವೆ ಎಂದು ಹೇಳಿಕೊಳ್ಳುತ್ತವೆ.
ಎಷ್ಟಾದರೂ, ದೇವರು ಸ್ಥಾಪಿಸಿದ ನಿಯಮಗಳ ಪ್ರಕಾರ ದೇವರು ನೇಮಿಸಿದ ದಿನದಂದು ನಾವು ಪಂಚಾಶತ್ತಮ ದಿನವನ್ನು ಆಚರಿಸಿದಾಗ ಪವಿತ್ರಾತ್ಮದ ಆಶೀರ್ವಾದವನ್ನು ಸ್ವೀಕರಿಸಬಹುದು.
ಪಂಚಾಶತ್ತಮ ದಿನವು ಪ್ರಥಮಫಲದ ದಿನದ [ಪುನರುತ್ಥಾನದ ದಿನ] ನಂತರ ಐವತ್ತನೇ ದಿನವಾಗಿದೆ.
ಯೇಸುವಿನ ವಾಕ್ಯಗಳ ಪ್ರಕಾರ, ಶಿಷ್ಯರು ಸ್ವರ್ಗಾರೋಹಣ ದಿನದಿಂದ ಪ್ರಾರ್ಥಿಸಿದ
ನಂತರ ಮಾರ್ಕನ ಮೇಲಂತಸ್ತಿನ ಕೊಠಡಿಯಲ್ಲಿ ಪಂಚಾಶತ್ತಮ ದಿನವನ್ನು ಆಚರಿಸಿದರು.
ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್ ಯೇಸುವಿನ ವಾಕ್ಯಗಳ ಪ್ರಕಾರ ಪಂಚಾಶತ್ತಮ ದಿನವನ್ನು ಆಚರಿಸಿ ಸತ್ಯವೇದದಲ್ಲಿ ಪ್ರವಾದಿಸಿದ ಪವಿತ್ರಾತ್ಮದ ಆಶೀರ್ವಾದವನ್ನು ಸ್ವೀಕರಿಸುವ ಏಕೈಕ ಸಭೆಯಾಗಿದೆ.
ಪಂಚಾಶತ್ತಮ ದಿನದ ಹಬ್ಬವು ಬಂದಿರಲಾಗಿ ಅವರೆಲ್ಲರು ಏಕಮನಸ್ಸಿನಿಂದ ಒಂದೇ ಸ್ಥಳದಲ್ಲಿ ಕೂಡಿದ್ದರು.
ಆಗ ಬಿರುಗಾಳಿ ಬೀಸುತ್ತದೋ ಎಂಬಂತೆ ಫಕ್ಕನೆ ಆಕಾಶದೊಳಗಿಂದ ಒಂದು ಶಬ್ದವುಂಟಾಗಿ
ಅವರು ಕೂತಿದ್ದ ಮನೆಯನ್ನೆಲ್ಲಾ ತುಂಬಿಕೊಂಡಿತು.
ಅದಲ್ಲದೆ ಉರಿಯಂತಿದ್ದ ನಾಲಿಗೆಗಳು ವಿಂಗಡಿಸಿಕೊಳ್ಳುವ ಹಾಗೆ ಅವರಿಗೆ
ಕಾಣಿಸಿ ಅವರಲ್ಲಿ ಒಬ್ಬೊಬ್ಬರ ಮೇಲೆ ಒಂದೊಂದಾಗಿ ಕೂತುಕೊಂಡವು.
ಆಗ ಅವರೆಲ್ಲರು ಪವಿತ್ರಾತ್ಮಭರಿತರಾಗಿ ಆ ಆತ್ಮ ತಮತಮಗೆ ನುಡಿಯುವ
ಶಕ್ತಿಯನ್ನು ಕೊಡುವ ಪ್ರಕಾರ ಬೇರೆಬೇರೆ ಭಾಷೆಗಳಿಂದ ಮಾತಾಡುವದಕ್ಕೆ ಪ್ರಾರಂಭಿಸಿದರು.
ಅಪೊಸ್ತಲರ ಕೃತ್ಯಗಳು 2:1-4
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ