ಬೆಂಕಿಯ ಯಾತನೆಯಲ್ಲಿ ನರಳುವಾಗ ಒಂದು ಹನಿ ನೀರು ಕೂಡ ಸಿಗದ ಭಯಾನಕ ಸ್ಥಳವೇ ನರಕ. (ಲೂಕ 16:24)
ನಿನ್ನ ಕೈ,ಕಾಲು ಅಥವಾ ಕಣ್ಣು ಪಾಪಕ್ಕೆ ಕಾರಣವಾದರೆ, ನರಕದಲ್ಲಿ ಬೀಳುವದಕ್ಕಿಂತ ಅದನ್ನು ಕಡಿದುಹಾಕುವದು ಉತ್ತಮ ಎಂದು ಯೇಸು ಹೇಳಿದ್ದಾರೆ. (ಮಾರ್ಕ 9:43) ಅದೇಕೆಂದರೆ ನರಕದ ಯಾತನೆಯನ್ನು ದೇಹದ ಅಂಗವನ್ನು ಕತ್ತರಿಸುವ ನೋವಿಗೆ ಹೋಲಿಸಲು ಸಾಧ್ಯವಿಲ್ಲ.
“ನರಕದಲ್ಲಿ ಕಚ್ಚುವ ಹುಳ ಸಾಯುವದಿಲ್ಲ, ಉರಿಯುವ ಬೆಂಕಿ ಆರುವದಿಲ್ಲ.” ಮಾರ್ಕ 9:48
“ಪ್ರತಿಯೊಬ್ಬನಿಗೂ ಉಪ್ಪಿನ ಹದವನ್ನು ಕೊಡಲಾಗುವದು.” ಮಾರ್ಕ 9:49
ನರಕದ ಶಿಕ್ಷೆಯು ಕಠಿಣ ನೋವಾಗಿದ್ದರೂ, ನಾವು ಬಯಸಿದರೂ ಸಾಯಲು ಸಾಧ್ಯವಿಲ್ಲ. ನರಕದಲ್ಲಿ,ಜೀವದ ಸಂತೋಷದ ಕ್ಷಣವಿಲ್ಲ, ವಿಶ್ರಾಂತಿಯ ಕ್ಷಣವಿಲ್ಲ,ಮತ್ತು ಆತ್ಮರಕ್ಷಣೆಯ ನಿರೀಕ್ಷೆಯೇ ಇಲ್ಲ, ಆದರೆ ಕೇವಲ ತೀವ್ರ ನೋವು,ವ್ಯಥೆ ಮತ್ತು ದುಃಖವಿರುತ್ತದೆ.
ಸುವಾರ್ತೆಯನ್ನು ಕೇಳಿದ ನಂತರ ಪಶ್ಚತ್ತಾಪಪಡದಿದ್ದರೆ ನಾವು ಏಕೆ ನರಕಕ್ಕೆ ಹೋಗುತ್ತೇವೆ?
ಈ ಭೂಮಿಯ ಮೇಲೆ ಹುಟ್ಟುವದಕ್ಕಿಂತ ಮುಂಚೆ, ನಾವು ಪರಲೋಕದಲ್ಲಿ ದೇವದೂತರಾಗಿದ್ದೆವು. (ಯೋಬ 38:4) ಎಷ್ಟಾದರೂ, ನಾವು ಪರಲೋಕದಲ್ಲಿ ಪಾಪಗಳನ್ನು ಮಾಡಿ ನರಕದ ದಂಡನೆಗೆ ಗುರಿಯಾದೆವು. ಅದಕ್ಕಾಗಿಯೇ, ಆಧ್ಯಾತ್ಮಿಕ ಸೆರೆಮನೆಯಾದ ಈ ಭೂಮಿಯ ಮೇಲೆ ಹುಟ್ಟಿದ್ದೇವೆ ಮತ್ತು ಇಲ್ಲಿ ತಾತ್ಕಾಲಿಕವಾಗಿ ಜೀವಿಸುತ್ತೇವೆ. (ಯೆಹೆಜ್ಕೇಲನು 28:13) ನರಕದ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ದಾರಿಯನ್ನು ನಾವು ಈ ಭೂಮಿಯ ಮೇಲೆ ಹುಡುಕದಿದ್ದರೆ, ನಾವು ನರಕಕ್ಕೆ ಹೋಗಲು ಗುರಿಯಾಗಿದ್ದೇವೆ.
“ಅಯ್ಯೋ, ನಾನು ಎಂಥ ದುರವಸ್ಥೆಯಲ್ಲಿ ಬಿದ್ದ ಮನುಷ್ಯನು! ಇಂಥ ಮರಣಕ್ಕೆ ಒಳಗಾದ ಈ ದೇಹದಿಂದ ನನ್ನನ್ನು ಬಿಡಿಸುವವನು ಯಾರು?” ರೋಮಾಪುರದವರಿಗೆ 7:24
ನರಕದ ಶಿಕ್ಷೆಗೆ ಗುರಿಯಾಗಿರುವ ಮಾನವಕುಲದ ಮೇಲೆ
ದೇವರು ಕರುಣೆತೋರಿಸಿದರು,
ಮತ್ತು ನರಕದ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ದಾರಿಯನ್ನು ತೋರಿಸಲು ಸ್ವತಃ ಅವರೇ ಈ ಭೂಮಿಗೆ ಬಂದರು.
“ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು. . . ಪಾಪಿಗಳನ್ನು ಕರೆಯುವದಕ್ಕೆ ಬಂದವನು.” ಲೂಕ 5:32
ಮರಣಕ್ಕೆ ಕರೆದೊಯ್ಯುವ ನಮ್ಮ ಪಾಪಗಳನ್ನು ಕ್ಷಮಿಸಲು ಹಾಗೂ ನರಕದ ಶಿಕ್ಷೆಯಿಂದ ನಮ್ಮನ್ನು ರಕ್ಷಿಸಲು
ದೇವರು ಪಾಪಿಗಳಾದ ಮಾನವಕುಲಕ್ಕೆ ಅವರ ಮಾಂಸ ಹಾಗೂ ರಕ್ತವನ್ನು ಈಡನ್ನಾಗಿ ನೀಡಿದರು.
“ತಕ್ಕೊಳ್ಳಿರಿ ತಿನ್ನಿರಿ, ಪಸ್ಕದ ಈ ರೊಟ್ಟಿಯು ನನ್ನ ದೇಹ.” ಮತ್ತಾಯ 26:26
“ಪಸ್ಕದ ಈ ದ್ರಾಕ್ಷಾರಸವು ನನ್ನ ಒಡಂಬಡಿಕೆಯ ರಕ್ತ, ಇದು ಪಾಪಗಳ ಕ್ಷಮೆಗಾಗಿ ಬಹುಜನರಿಗೋಸ್ಕರ ಸುರಿಸಲ್ಪಡುವ ರಕ್ತ.” ಮತ್ತಾಯ 26:28
ನಾವು ಹೊಸ ಒಡಂಬಡಿಕೆಯ ಪಸ್ಕವನ್ನು ಆಚರಿಸಿದಾಗ, ಪಾಪ ಕ್ಷಮೆಯ ಆಶೀರ್ವಾದವನ್ನು ಸ್ವೀಕರಿಸಿ ನರಕದ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತೇವೆ. ಮತ್ತು ನಿತ್ಯಜೀವವನ್ನು ಸ್ವೀಕರಿಸಿ ಪರಲೋಕಕ್ಕೆ ಹಿಂತಿರುಗುತ್ತೇವೆ.
“ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನಿತ್ಯಜೀವವನ್ನು ಹೊಂದಿದ್ದಾನೆ. ಮತ್ತು ನಾನು ಅವನನ್ನು ಕಡೇ ದಿನದಲ್ಲಿ ಎಬ್ಬಿಸುವೆನು.” ಯೋಹಾನ 6:54
ಎಷ್ಟಾದರೂ, “ಪಸ್ಕದ ಮೂಲಕ ಪಾಪ ಕ್ಷಮೆಯನ್ನು
ಮತ್ತು ನಿತ್ಯಜೀವವನ್ನು ಸ್ವೀಕರಿಸಿ” ಎಂಬ ಸಂದೇಶವನ್ನು ನಾವು ನಿರಾಕರಿಸಿದರೆ,
ಪರಲೋಕದಲ್ಲಿ ನಾವು ಮಾಡಿದ ಪಾಪಗಳು ಕ್ಷಮಿಸಲ್ಪಡುವದಿಲ್ಲ, ಮತ್ತು ನಾವು ಗುರಿಯಾದ ನರಕದ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
“ನಾನು ಶ್ರಮೆ ಅನುಭವಿಸುವದಕ್ಕಿಂತ ಮುಂಚೆ ನಿಮ್ಮ ಸಂಗಡ ಈ ಪಸ್ಕದ ಊಟವನ್ನು ಮಾಡುವದಕ್ಕೆ ಕುತೂಹಲದಿಂದ ಅಪೇಕ್ಷಿಸಿದ್ದೇನೆ.” ಲೂಕ 22:15
ದಯವಿಟ್ಟು ಪಾಪ ಕ್ಷಮೆಗಾಗಿ ದೇವರ ಗುರುತಾಗಿರುವ ಹೊಸ ಒಡಂಬಡಿಕೆಯ ಪಸ್ಕವನ್ನು ಆಚರಿಸಿ ಮತ್ತು ಪರಲೋಕಕ್ಕೆ ಹಿಂತಿರುಗಿ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ