ಪರಲೋಕದಲ್ಲಿ ಅದ್ಭುತವಾದ ಸಿಂಹಾಸನದ ಮೇಲೆ ಕುಳಿತುಕೊಳ್ಳಬೇಕಾದ ದೇವರು 2,000 ವರ್ಷಗಳ ಹಿಂದೆ ಯೇಸುವಿನ ಹೆಸರಿನಲ್ಲಿ ಮತ್ತು ಇಂದು ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರ ಹೆಸರಿನಲ್ಲಿ ಈ ಭೂಮಿಗೆ ಬಂದರು ಮತ್ತು ಮನುಕುಲದ ಪಾಪಗಳ ಕ್ಷಮೆಗಾಗಿ ಮತ್ತು ಆತ್ಮರಕ್ಷಣೆಗಾಗಿ ಮೌನವಾಗಿ ತ್ಯಾಗದ ಮಾರ್ಗದಲ್ಲಿ ನಡೆದರು.
ಆದ್ದರಿಂದ, ನಮಗೆ ಪರಲೋಕದ ನಿರೀಕ್ಷೆಯನ್ನು ನೀಡಿದ ದೇವರಿಗೆ ನಾವು ಯಾವಾಗಲೂ ಕೃತಜ್ಞತೆಯನ್ನು ಸಲ್ಲಿಸಬೇಕು.
ಭೀಕರ ಹಿಂಸೆಗಳ ನಡುವೆಯೂ ಸಂತೋಷದಿಂದ ಹುತಾತ್ಮತೆಯ ಮಾರ್ಗದಲ್ಲಿ ನಡೆದ ಆದಿ ಸಭೆಯ ದೇವಜನರು, ಕಷ್ಟಗಳು ಮತ್ತು ಪರೀಕ್ಷೆಗಳನ್ನು ಎದುರಿಸುವಾಗ ಯಾವಾಗಲೂ ದೇವರಿಗೆ ಕೃತಜ್ಞತೆ ಸಲ್ಲಿಸುವ ಅರಸನಾದ ದಾವೀದನು ಅವರ ಮಾದರಿಯನ್ನು ಅನುಸರಿಸಿ, ಚರ್ಚ್ ಆಫ್ ಗಾಡ್ ಸದಸ್ಯರು ಎಲ್ಲಾ ಸಂದರ್ಭಗಳಲ್ಲಿ ಕೃತಜ್ಞತೆ ಸಲ್ಲಿಸುತ್ತಾ, ಜೀವನವನ್ನು ನಡೆಸುತ್ತಾರೆ.
ಯಾವಾಗಲೂ ಸಂತೋಷಿಸಿರಿ;
ಎಡೆಬಿಡದೆ ಪ್ರಾರ್ಥನೆಮಾಡಿರಿ;
ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ; ಇದೇ ನಿಮ್ಮ ವಿಷಯವಾಗಿ ಕ್ರಿಸ್ತ ಯೇಸುವಿನಲ್ಲಿ ತೋರಿ ಬಂದ ದೇವರ ಚಿತ್ತ.
1 ಥೆಸಲೋನಿಕದವರಿಗೆ 5:16-18
ಯಾರು ಸ್ತುತಿಯಜ್ಞವನ್ನು ಸಮರ್ಪಿಸುತ್ತಾರೋ ಅವರೇ ನನ್ನನ್ನು ಗೌರವಿಸುವವರು; ತಮ್ಮ ನಡತೆಯನ್ನು ಸರಿಪಡಿಸಿಕೊಳ್ಳುವವರಿಗೆ ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸುವೆನು.
ಕೀರ್ತನೆಗಳು 50:23
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ