ಚೀಯೋನಿನ ಸದಸ್ಯರು ತಮ್ಮ ಶಿಕ್ಷಣ, ಸ್ವಯಂಸೇವಕ ಚಟುವಟಿಕೆಗಳು ಮತ್ತು ನಂಬಿಕೆಯ ಜೀವನದಲ್ಲಿ ಅವರ ಅತ್ಯುತ್ತಮ ಸಾಧನೆಗಳಿಗಾಗಿ ಪ್ರಶಂಸಿಸಲ್ಪಡುತ್ತಾರೆ, ಆದರೆ ಅವರಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ ಕ್ರಿಸ್ತ ಅನ್ ಸಂಗ್ ಹೊಂಗ್ ರವರು, ತಾಯಿ ದೇವರು ಮತ್ತು ಪರಲೋಕರಾಜ್ಯದ ರಹಸ್ಯಗಳಲ್ಲಿನ ಅವರ ನಂಬಿಕೆಯಾಗಿದೆ.
ಅರಸ ದಾವೀದನು ಮರಣಹೊಂದಿದ ನೂರಾರು ವರ್ಷಗಳ ನಂತರ, ಪ್ರವಾದಿ ಯೆಹೆಜ್ಕೇಲನು, ದೇವರು ದಾವೀದನಾಗಿ ಹೊಸ ಒಡಂಬಡಿಕೆಯೊಂದಿಗೆ ಕೊನೆಯ ದಿನಗಳಲ್ಲಿ ಬರುವನೆಂದು ಪ್ರವಾದಿಸಿದನು.
ಆಧ್ಯಾತ್ಮಿಕ ದಾವೀದನಾಗಿ ಬಂದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು, ಕ್ರಿ.ಶ 325ರಲ್ಲಿ ನಾಶವಾದ ಹೊಸ ಒಡಂಬಡಿಕೆಯ ಪಸ್ಕವನ್ನು ಪುನಃಸ್ಥಾಪಿಸಿದರು ಮತ್ತು ನಾವು ಹೊಸ ಒಡಂಬಡಿಕೆಯ ಸತ್ಯತ್ವವಾಗಿರುವ ತಾಯಿ ದೇವರ ಬಳಿಗೆ ಬಂದಾಗ ಮಾತ್ರ ನಾವು ರಕ್ಷಿಸಲ್ಪಡಬಹುದು ಎಂದು ನಮಗೆ ತಿಳಿಸಿದರು.
ನನ್ನ ಸೇವಕನಾದ ದಾವೀದನು ಅವರಿಗೆ ಸದಾ ಪ್ರಭುವಾಗಿರುವನು. ಮತ್ತು ನಾನು ಅವರೊಂದಿಗೆ ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ಅದು ಶಾಶ್ವತವಾಗಿರುವದು . . . ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು.
ಯೆಹೆಜ್ಕೇಲ 37:25-27
ಯೆಹೋವನು ಇಂತೆನ್ನುತ್ತಾನೆ - ಇಗೋ, ನಾನು ಇಸ್ರಾಯೇಲ್ ವಂಶದವರೊಂದಿಗೂ ಯೆಹೂದ ವಂಶದವರೊಂದಿಗೂ ಹೊಸದಾಗಿರುವ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು; . . . ನನ್ನ ಧರ್ಮೋಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು, ಅವರ ಹೃದಯದೊಳಗೆ ಅದನ್ನು ಬರೆಯುವೆನು; ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು.
ಯೆರೆಮೀಯ 31:31-33
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ