ದೇವರನ್ನು ಆರಾಧಿಸುವ ದಿನವು ಏಳನೇ ದಿನವಾದ ಸಬ್ಬತ್ ಆಗಿದೆ,
ಇದು ವಾರದ ದಿನಗಳಲ್ಲಿ ಶನಿವಾರವಾಗಿದೆ. ಸಬ್ಬತ್ ದಿನವು ಆಶೀರ್ವಾದದೊಂದಿಗೆ
ವಾಗ್ದಾನ ಮಾಡಲಾದ ಪವಿತ್ರ ದಿನವಾಗಿದೆ ಮತ್ತು ನಾವು ದೇವರ ಜನರೆಂದು
ಅಂಗೀಕರಿಸಲ್ಪಡುವ ದಿನವಾಗಿದೆ. ಹತ್ತು ಆಜ್ಞೆಗಳಲ್ಲಿ ಇದು ನಾಲ್ಕನೇ ಆಜ್ಞೆಯಾಗಿದ್ದು,
ಇದು ಮಾನವಕುಲವು ಪಾಲಿಸಬೇಕಾದ ಆರಾಧನೆಯ ದಿನವಾಗಿದೆ.
ಅದಕ್ಕಾಗಿಯೇ ಯೇಸುವಾಗಿರುವ ಕ್ರಿಸ್ತ ಅನ್ ಸಂಗ್ ಹೊಂಗ್
ಮತ್ತು ತಾಯಿ ದೇವರು ಸಬ್ಬತ್ ಅನ್ನು ಆಚರಿಸುವ ಉದಾಹರಣೆಯನ್ನು ತೋರಿಸಿದರು.
ದೇವರು ಕಾಯಿನನ ಕಾಣಿಕೆಯನ್ನು ಏಕೆ ತಿರಸ್ಕರಿಸಿದರು ಮತ್ತು
ಹೇಬೆಲನ ಕಾಣಿಕೆಯನ್ನು ಮಾತ್ರ ಸ್ವೀಕರಿಸಿದರು? ಇಂದಿನ ಮಾನದಂಡಗಳ ಪ್ರಕಾರ
ಪಾಸ್ಟರ್ಗಳಂತೆ ಇರುವ ಯಾಜಕರಾಗಿದ್ದ ಆರೋನನ ಮಕ್ಕಳಾದ ನಾದಾಬ್ ಮತ್ತು ಅಬೀಹು
ಅವರನ್ನು ದೇವರು ಏಕೆ ನಾಶಮಾಡಿದರು? ಇದಕ್ಕೆ ಕಾರಣ ಅವರು ತಮ್ಮ ಸ್ವಂತ ಆಲೋಚನೆಗಳಿಗೆ
ಅನುಗುಣವಾಗಿ ವರ್ತಿಸಿದರು ಮತ್ತು ದೇವರ ಮಾತುಗಳಿಗೆ ವಿಧೇಯರಾಗಲಿಲ್ಲ.
ಅಂತೆಯೇ, ದೇವರ ಚಿತ್ತದ ಪ್ರಕಾರ ಸಬ್ಬತ್ ವನ್ನು ಆಚರಿಸುವ ಮೂಲಕ
ದೇವರನ್ನು ಆರಾಧಿಸುವದು ಆಶೀರ್ವಾದದ ಪ್ರಮುಖ ರಹಸ್ಯವಾಗಿದೆ.
. . . ಏಳನೇ ದಿನವನ್ನು ಪರಿಶುದ್ಧ ದಿನವಾಗಿರಲಿ ಎಂದು ಆಶೀರ್ವದಿಸಿದನು.
ಆದಿಕಾಂಡ 2:3
“ಸಬ್ಬತ್ ದಿನವನ್ನು ದೇವರ ದಿನವೆಂದು ಆಚರಣೆಗೆ ತರುವದಕ್ಕೆ
ಜ್ಞಾಪಕದಲ್ಲಿಟ್ಟುಕೊಳ್ಳಬೇಕು.”
ವಿಮೋಚನಕಾಂಡ 20:8
ಹೀಗಿರಲಾಗಿ ಆತನು ತಾನು ಬೆಳೆದ ನಜರೇತಿಗೆ ಬಂದು ತನ್ನ ವಾಡಿಕೆಯ ಪ್ರಕಾರ ಸಬ್ಬತ್ ದಿನದಲ್ಲಿ
ಸಭಾಮಂದಿರಕ್ಕೆ ಹೋಗಿ ಓದುವದಕ್ಕಾಗಿ ಎದ್ದು ನಿಂತನು.
ಲೂಕ 4:16
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ