ದೇವರ ಆಜ್ಞೆಗಳನ್ನು ಪಾಲಿಸದೆ, ನಾವು ದೇವರ ಮರ್ಮವಾದ ಕ್ರಿಸ್ತನನ್ನು
ತಿಳಿದುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಸಬ್ಬತ್ ಮತ್ತು
ಹೊಸ ಒಡಂಬಡಿಕೆಯ ಪಸ್ಕದಂತಹ ದೇವರ ಆಜ್ಞೆಗಳನ್ನು
ಪಾಲಿಸುವವರಿಗೆ ಮಾತ್ರ ದೇವರು ತಿಳುವಳಿಕೆಯನ್ನು ನೀಡುತ್ತಾರೆ,
ಇದರಿಂದ ಅವರು ಶರೀರದಲ್ಲಿ ಬಂದ ದೇವರನ್ನು ಗುರುತಿಸಬಹುದು.
ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನು ಪಾಲಿಸುವವರು ಸಬ್ಬತ್ ದಿನ
ಮತ್ತು ಪಸ್ಕಹಬ್ಬವನ್ನು ಮುಖ್ಯವಲ್ಲವೆಂದು ಪರಿಗಣಿಸುತ್ತಾರೆ,
ಆದರೆ ದೇವರಿಂದ ತಿಳುವಳಿಕೆಯನ್ನು ಸ್ವೀಕರಿಸಿದವರು
ದೇವರ ಪ್ರತಿಯೊಂದು ಆಜ್ಞೆಗಳಲ್ಲಿ ಒಳಗೊಂಡಿರುವ ನಿಜವಾದ ಅರ್ಥವನ್ನು
ಅರಿತುಕೊಳ್ಳುತ್ತಾರೆ ಮತ್ತು ಯೆಶಾಯನು ಪ್ರವಾದಿಸಿದಂತೆ “ಈತನೇ ನಮ್ಮ ದೇವರು”
ಎಂದು ಕೂಗುತ್ತಾರೆ. 1,600 ವರ್ಷಗಳಿಂದ ಆಚರಿಸಲ್ಪಡದ ಪಸ್ಕಹಬ್ಬವನ್ನು
ಮತ್ತೆ ಸ್ಥಾಪಿಸುವ ಮೂಲಕ ಮರಣವನ್ನು ನಾಶಮಾಡಿದ ಕ್ರಿಸ್ತ ಅನ್ ಸಂಗ್ ಹೊಂಗ್
ಮತ್ತು ತಾಯಿ ದೇವರು ಮಾನವಕುಲವು ದೀರ್ಘಕಾಲದಿಂದ
ಎದುರುನೋಡುತ್ತಾ ಕಾಯುತ್ತಿರುವ ನಿಜವಾದ ದೇವರುಗಳು.
ಯೆಹೋವನ ಭಯವೇ ಜ್ಞಾನಕ್ಕೆ ಮೂಲವು; ಆತನ ಕಟ್ಟಳೆಗಳನ್ನು ನಡಿಸುವವರು ಪೂರ್ಣ ವಿವೇಕಿಗಳು.
ಆತನ ಸ್ತುತಿಯು ನಿರಂತರವಾದದ್ದು.
ಕೀರ್ತನೆಗಳು 111:10
ಇದಲ್ಲದೆ ಸೇನಾಧೀಶ್ವರನಾದ ಯೆಹೋವನು ಈ ಪರ್ವತದಲ್ಲಿ ಸಕಲಜನಾಂಗಗಳಿಗೂ ಸಾರವತ್ತಾದ ಮೃಷ್ಟಾನ್ನದಿಂದಲೂ ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣವನ್ನು ಅಣಿಮಾಡುವನು . . . ಮರಣವನ್ನು ಶಾಶ್ವತವಾಗಿ ನಿರ್ನಾಮ ಮಾಡುವನು; . . . ಆ ದಿನದಲ್ಲಿ ಜನರು - ಆಹಾ, ಈತನೇ ನಮ್ಮ ದೇವರು, ನಮ್ಮನ್ನು ರಕ್ಷಿಸಲಿ ಎಂದು ಈತನನ್ನು
ಯೆಶಾಯ 25:6-9
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ