ನಾವು ದೇವರ ನಿಯಮಕ್ಕೆ ವಿಧೇಯರಾಗುವ ಜೀವನವನ್ನು ಜೀವಿಸಿದಾಗ, ನಮಗಾಗಿ ಅಧಿಕವಾದ ಆಶೀರ್ವಾದವು ಯಾವಾಗಲೂ ಸಂಗ್ರಹವಾಗಿರುತ್ತದೆ. ಈ ಕಾರಣದಿಂದ, ತಂದೆಯ ಕಾಲದಿಂದ ದೇವರು ಸ್ಥಾಪಿಸಿದ ಸಬ್ಬತ್ ಮತ್ತು ಪಸ್ಕ ಹಬ್ಬದಂತಹ ಹಬ್ಬಗಳಲ್ಲಿ, “ಅವುಗಳನ್ನು ಎಂದಿಗೂ ಮರೆಯದೆ, ತಲತಲಾಂತರಗಳವರೆಗೂ ಜ್ಞಾಪಕದಲ್ಲಿಟ್ಟುಕೊಂಡು ಕೈಗೊಳ್ಳಿರಿ” ಎಂಬ ಆಜ್ಞೆಯು ಯಾವಾಗಲೂ ಇರುತ್ತದೆ.
ಎಲ್ಲಾ ಕಾಲಗಳಲ್ಲಿಯೂ ದೇವರ ನಿಯಮವನ್ನು ಕೈಗೊಳ್ಳುವವರು ನೀತಿವಂತರೆಂದು ಆಶೀರ್ವದಿಸಲ್ಪಡುತ್ತಾರೆ, ಆದರೆ ದೇವರ ನಿಯಮವನ್ನು ಉಲ್ಲಂಘಿಸುವವರು ದ್ರೋಹದಿಂದಾಗಿ ಶಾಪಗ್ರಸ್ತರಾಗುತ್ತಾರೆಂದು ಸತ್ಯವೇದವು ಹೇಳುತ್ತದೆ. ದೇವರ ನಿಯಮವನ್ನು ಕೈಗೊಳ್ಳದ ಕಾರಣವೇ ಇಸ್ರಾಯೇಲ್ಯರು ಬಾಬಿಲೋನಿಗೆ ಸೆರೆಯಾಳುಗಳಾಗಿ ಕರೆದೊಯ್ಯಲ್ಪಟ್ಟರು.
ಕರ್ತನಾದ ನಮ್ಮ ದೇವರ ಮಾತನ್ನು ಕೇಳಲಿಲ್ಲ, ತನ್ನ ಸೇವಕರಾದ ಪ್ರವಾದಿಗಳ ಮೂಲಕ ನಮಗೆ ಗೊತ್ತುಮಾಡಿದ ಧರ್ಮಮಾರ್ಗದಲ್ಲಿ ನಡೆಯಲಿಲ್ಲ. ಇಸ್ರಾಯೇಲ್ಯರೆಲ್ಲರೂ ನಿನ್ನ ಧರ್ಮಪ್ರಮಾಣವನ್ನು ಮೀರಿ ನಿನ್ನ ಮಾತನ್ನು ಕೇಳಲೊಲ್ಲದೆ ಓರೆಯಾಗಿ ಹೋದರು; ಆದಕಾರಣ ನಿನ್ನ ಶಾಪದ ಕೇಡುಗಳೂ ದೇವಸೇವಕನಾದ ಮೋಶೆಯ ಧರ್ಮಶಾಸ್ತ್ರದಲ್ಲಿ ನೀನು ಆಣೆಯಿಟ್ಟು ಪ್ರಕಟಿಸಿದ ವಿಪತ್ತುಗಳೂ ನಮ್ಮ ಮೇಲೆ ಸುರಿಯಲ್ಪಟ್ಟಿವೆ; ನಾವು ದೇವದ್ರೋಹಿಗಳೇ ಸರಿ. ದಾನಿಯೇಲನು 9:10–11
ನನ್ನ ನಿಯಮಗಳನ್ನು ಅನುಸರಿಸಿ ನನ್ನ ವಿಧಿಗಳನ್ನು ಕೈಕೊಂಡು ಸತ್ಯಪರನಾಗಿಯೇ ನಡೆದರೆ ಇಂಥವನು ಸದ್ಧರ್ಮಿಯಾಗಿರುವದರಿಂದ ಬಾಳೇ ಬಾಳುವನು; ಇದು ಕರ್ತನಾದ ಯೆಹೋವನ ನುಡಿ. ಯೆಹೆಜ್ಕೇಲನು 18:9
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ