ದೇವರು ತನ್ನನ್ನು ನಂಬುವಂತಹ ಜನರಿಗೆ ಆರಾಧನೆಯ ದಿನವನ್ನು ನೇಮಕ ಮಾಡಿದರು.
"ಸಬ್ಬತ್ ದಿನವನ್ನು ದೇವರ ದಿನವೆಂದು ಆಚರಣೆಗೆ ತರುವದಕ್ಕೆ ಜ್ಞಾಪಕದಲ್ಲಿಟ್ಟುಕೊಳ್ಳಬೇಕು." ವಿಮೋ 20:8
ಸಬ್ಬತ್ ದಿನವು ದೇವರ ಮತ್ತು ಅವರ ಜನರ ನಡುವೆಯಿರುವ ಗುರುತಾಗಿದೆ.
ದೇವರು ತನ್ನ ಜನರನ್ನು ದೇವಜನರನ್ನಾಗಿ ಮಾಡುವ ದಿನವಾಗಿದೆ. (ಯೆಹೆ 20:12).
ಆದ್ದರಿಂದ, ದೇವಜನರು ಆರಾಧನೆಯ ದಿನವಾಗಿ ದೇವರು ನೇಮಿಸಿದ ಸಬ್ಬತ್ ದಿನವನ್ನು ಆಚರಿಸಬೇಕು.
ಸಬ್ಬತ್ ದಿನವು ದೇವರು ಆಕಾಶ ಮತ್ತು ಭೂಮಿಯನ್ನು ಆರು ದಿನಗಳವರೆಗೆ ಸೃಷ್ಟಿಸಿ ಏಳನೇ ದಿನದಲ್ಲಿ ವಿಶ್ರಾಂತಿಯನ್ನು ಹೊಂದಿದ ದಿನವಾಗಿದೆ. (ಆದಿ 2:3)
ಏಳನೇ ದಿನದ ಸಬ್ಬತ್ ದಿನವು ದೇವರ ಸೃಷ್ಟಿಸುವ ಶಕ್ತಿಯನ್ನು ಸ್ಮರಿಸುವ ದಿನವಾಗಿದೆ.
ಹಾಗಾದರೆ, ವಾರದ ಯಾವ ದಿನ ಏಳನೇ ದಿನ?
ಭಾನುವಾರ: ವಾರದ ಮೊದಲ ದಿನ
ಶನಿವಾರ: ವಾರದ ಏಳನೇ ದಿನ
ನಿಘಂಟುಗಳು ಏಳನೇ ದಿನವನ್ನು ಶನಿವಾರ ಎಂದು ದಾಖಲಿಸುತ್ತವೆ.
ನಾವು ಕ್ಯಾಲೆಂಡರ್ ಅನ್ನು ನೋಡಿದಾಗ, ಏಳನೇ ದಿನದ ಸಬ್ಬತ್ ದಿನ ಶನಿವಾರವಾಗಿದೆ.
ವಾರದ ಮೊದಲ ದಿನದಂದು ಯೇಸು ಪುನರುತ್ಥಾನಗೊಂಡರು ಎಂದು ಸತ್ಯವೇದವು ಹೇಳುತ್ತದೆ. (ಮಾರ್ಕ 16:9)
ಅದೇ ವಚನವು, ಕಥೋಲಿಕ ಬೈಬಲಿನಲ್ಲಿ ಭಾನುವಾರ ಯೇಸು ಪುನರುತ್ಥಾನಗೊಂಡರು
ಎಂದು ಹೇಳುತ್ತದೆ. (ಮಾರ್ಕ 16:9)
ಹಾಗಾದರೆ, ವಾರದ ಯಾವ ದಿನವು ಸಬ್ಬತ್ ದಿನ ಆಗಿದೆ?
ಸಬ್ಬತ್ ದಿನವು ಶನಿವಾರವಾಗಿದೆ.
ಕಥೋಲಿಕ ಪುಸ್ತಕಗಳು ಸಹ ಸಬ್ಬತ್ ದಿನವು ಶನಿವಾರ ಎಂದು ಸಾಕ್ಷಿಕರಿಸಿದೆ.
"ನಾವು ಎಂದಿಗೂ ಆರಾಧಿಸದ ದಿನವಾದ ಶನಿವಾರದ ಧಾರ್ಮಿಕ ಆಚರಣೆಯನ್ನು ಶಾಸ್ತ್ರಗಳು ಒತ್ತಿ ಹೇಳುತ್ತದೆ."
ಯೇಸು ಕೂಡ, ಸಬ್ಬತ್ ದಿನವನ್ನು [ಶನಿವಾರ] ಆರಾಧಿಸಿದರು.
ಹೀಗಿರಲಾಗಿ ಆತನು ತಾನು ಬೆಳೆದ ನಜರೇತಿಗೆ ಬಂದು ತನ್ನ ವಾಡಿಕೆಯ ಪ್ರಕಾರ ಸಬ್ಬತ್ದಿನದಲ್ಲಿ [ಶನಿವಾರ] ಸಭಾಮಂದಿರಕ್ಕೆ ಹೋಗಿ ಓದುವದಕ್ಕಾಗಿ ಎದ್ದು ನಿಂತನು. ಲೂಕ 4:16
ಯೇಸುವಿನ ಸ್ವರ್ಗಾರೋಹಣದ ನಂತರ, ಅಪೊಸ್ತಲ ಪೌಲನು ಸಹ ಸಬ್ಬತ್ ದಿನವನ್ನು [ಶನಿವಾರದಂದು] ಆರಾಧಿಸಿದನು.
“ಪೌಲನು ತನ್ನ ಪದ್ಧತಿಯ ಪ್ರಕಾರ ಅಲ್ಲಿದ್ದವರ ಬಳಿಗೆ ಹೋಗಿ ಮೂರು ಸಬ್ಬತ್ದಿನಗಳಲ್ಲಿ ಶಾಸ್ತ್ರಾಧಾರದಿಂದ ಅವರ ಸಂಗಡ ವಾದಿಸಿ . . . ಅ.ಕೃ 17:2
ಯೇಸು ಮತ್ತು ಆತನ ಶಿಷ್ಯರು ಸಬ್ಬತ್ ದಿನವನ್ನು [ಶನಿವಾರ] ಆಚರಿಸಿದಂತೆಯೇ, ದೇವಜನರು ದೇವರು ನೇಮಿಸಿದ ಸಬ್ಬತ್ ದಿನವನ್ನು [ಶನಿವಾರ] ಆಚರಿಸಬೇಕು.
ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್
ದೇವರಿಂದ ನೇಮಿಸಿದ ಏಳನೇ ದಿನ ಸಬ್ಬತ್ ದಿನವನ್ನು ಆರಾಧಿಸುತ್ತದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ