ಅಬ್ರಹಾಮ, ನೋಹ, ಮೋಶೆ ಮತ್ತು ದಾನಿಯೇಲನು ಆಶೀರ್ವದಿಸಲ್ಪಟ್ಟರು ಏಕೆಂದರೆ ಅವರು ಎಷ್ಟೇ ಅಸಾಧ್ಯವಾದ ಸಂದರ್ಭಗಳನ್ನು ಎದುರಿಸಿದರೂ ಅವರು ದೇವರ ವಾಕ್ಯಕ್ಕೆ ವಿಧೇಯರಾಗಿದ್ದರು.
ಈ ರೀತಿಯ ಸತ್ಯವೇದದ ಇತಿಹಾಸವು ಯಾವುದೇ ಸಂದರ್ಭಗಳ ಹೊರತಾಗಿಯೂ ನಾವು ದೇವರ ಅಸ್ತಿತ್ವದಲ್ಲಿ ದೃಢವಾದ ನಂಬಿಕೆಯನ್ನು ಹೊಂದಿರಬೇಕು ಎಂದು ತೋರಿಸುತ್ತದೆ.
ಇಸ್ರಾಯೇಲ್ಯರು ಹತ್ತು ದಿನಗಳಲ್ಲಿ ಕಾನಾನ್ ದೇಶವನ್ನು ಪ್ರವೇಶಿಸಬಹುದಾಗಿತ್ತು.
ಆದರೆ, ಅವರು 40 ವರ್ಷಗಳ ನಂತರ ಅಲ್ಲಿಗೆ ಪ್ರವೇಶಿಸಿದರು ಮತ್ತು ಗುಣುಗುಟ್ಟುತ್ತಾ ದೂರುನೀಡುತ್ತಾ ಅರಣ್ಯದಲ್ಲಿ ನಾಶವಾದರು ಏಕೆಂದರೆ ಅವರು ತಮ್ಮ ಕಣ್ಮುಂದೆ ನಡೆಯುವ ವಿಷಯಗಳ ಮೇಲೆ ಮಾತ್ರ ಗಮನಹರಿಸಿದರು.
ಇದು ಅವರ ನಂಬಿಕೆಯ ಕೊರತೆಯಿಂದಾಗಿ ಉಂಟಾಯಿತು.
ಅದೇ ರೀತಿ, ಇಂದು ನಾವು ಸ್ವರ್ಗೀಯ ಕೆನಾನ್ ದೇಶದ ಕಡೆ ಹೋಗುತ್ತಿರುವಾಗ, ನಂಬಿಕೆಯ ಅರಣ್ಯದಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ ಅನ್ ಸಂಗ್ ಹೊಂಗ್ ದೇವರು ಮತ್ತು ತಾಯಿ ದೇವರ ಮಾತುಗಳಲ್ಲಿ ಸಂಪೂರ್ಣ ನಂಬಿಕೆಯನ್ನು ಹೊಂದಿರಬೇಕು.
ನಂಬಿಕೆಯೋ ನಾವು ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದೂ ಕಣ್ಣಿಗೆ ಕಾಣದವುಗಳನ್ನು ನಿಜವೆಂದು ತಿಳುಕೊಳ್ಳುವದೂ ಆಗಿದೆ. ನಮ್ಮ ಪೂರ್ವಿಕರು ನಂಬಿಕೆಯುಳ್ಳವರಾಗಿದ್ದದರಿಂದಲೇ ಒಳ್ಳೇ ಹೆಸರನ್ನು ಹೊಂದಿದರು. ಲೋಕಗಳು ದೇವರ ಮಾತಿನಿಂದ ನಿರ್ಮಿತವಾದವೆಂದು ನಂಬಿಕೆಯಿಂದಲೇ ನಾವು ತಿಳಿದುಕೊಂಡು ಕಾಣಿಸುವ ಈ ಜಗತ್ತು ದೃಶ್ಯ ವಸ್ತುಗಳಿಂದ ಉಂಟಾಗಲಿಲ್ಲವೆಂದು ಗ್ರಹಿಸುತ್ತೇವೆ.
ಇಬ್ರಿಯರಿಗೆ 11:1-3
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ