3,500 ವರ್ಷಗಳ ಹಿಂದೆ, ಮೋಶೆಯ ನಿಯಮಗಳ ಮೂಲಕ
ಹಳೆಯ ಒಡಂಬಡಿಕೆಯ ಎಲ್ಲಾ ಹಬ್ಬಗಳ ಹೆಸರುಗಳು ಮತ್ತು ದಿನಾಂಕಗಳನ್ನು
ಮೊದಲೇ ದೇವರು ನಿಗದಿಪಡಿಸಿದ್ದರು ಮತ್ತು ಪುನರುತ್ಥಾನ ದಿನದಿಂದ
(ಪ್ರಥಮಫಲದ ಹಬ್ಬ) 50 ನೇ ದಿನದಂದು ಪಂಚಾಶತ್ತಮ ದಿನವನ್ನು ಆಚರಿಸಲು ನಮಗೆ ಆಜ್ಞಾಪಿಸಿದರು.
ಯೇಸುವಿನ ಪುನರುತ್ಥಾನದ ನಂತರ, ಶಿಷ್ಯರು ಸ್ವರ್ಗಾರೋಹಣ ದಿನದಿಂದ
ಹತ್ತು ದಿನಗಳವರೆಗೆ ಮನಃಪೂರ್ವಕವಾಗಿ ಪ್ರಾರ್ಥಿಸಿದರು
ಮತ್ತು ಪಂಚಾಶತ್ತಮ ದಿನದಂದು ಪವಿತ್ರಾತ್ಮವರವನ್ನು ಸ್ವೀಕರಿಸಿದರು.
ಅವರು ಒಂದು ದಿನದಲ್ಲಿ 3000 ಜನರು ರಕ್ಷಣೆಗೆ ಮುನ್ನಡೆಯುವ
ಪವಿತ್ರಾತ್ಮನ ಮಹಾನ್ ಕಾರ್ಯಕ್ಕೆ ಸಾಕ್ಷಿಯಾದರು.
ಅದೇ ರೀತಿಯಲ್ಲಿ, ಚರ್ಚ್ ಆಫ್ ಗಾಡ್ ಸಂತರು ದೇವರ ವಾಕ್ಯಗಳ ಪ್ರಕಾರ
ಪಂಚಾಶತ್ತಮ ದಿನವನ್ನು ಆಚರಿಸುತ್ತಾರೆ ಮತ್ತು ಪವಿತ್ರಾತ್ಮನ ಹಿಂಗಾರು ಮಳೆಯ ಮೂಲಕ,
ಈ ಪವಿತ್ರಾತ್ಮನ ಕಾಲದ ರಕ್ಷಕರಾದ ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರ ಕುರಿತು
ಇಡೀ ಲೋಕಕ್ಕೆ ಸಾಕ್ಷಿ ಕೊಡುತ್ತಾ, ತಮ್ಮ ಪೂರ್ಣ ಹೃದಯ ಮತ್ತು ಮನಸ್ಸಿನಿಂದ ಜನರನ್ನು ಎಚ್ಚರಿಸುತ್ತಿದ್ದಾರೆ.
“ಆದರೆ ಪವಿತ್ರಾತ್ಮ ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ
ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ
ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರಬೇಕು.” ಅಪೊಸ್ತಲರ ಕೃತ್ಯಗಳು 1:8
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ