ತಂದೆಯ ಕಾಲದಲ್ಲಿ ಮತ್ತು ಮಗನ ಕಾಲದಲ್ಲಿ ದೇವರು ಹೇಗೆ ಕೆಂಪು ಸಮುದ್ರವನ್ನು
ವಿಭಾಗ ಮಾಡಿದರು, ಯೆರಿಕೋ ಪಟ್ಟಣವನ್ನು ಬೀಳುವಂತೆ ಮಾಡಿದರು
ಮತ್ತು ಸೂರ್ಯನನ್ನು ನಿಲ್ಲಿಸಿದಂತಹ ಅದ್ಭುತಗಳನ್ನು ಮಾಡಿದರು
ಎಂದು ನಾವು ಸೂಕ್ಷ್ಮವಾಗಿ ಗಮನಿಸಿದಾಗ, ಎಲ್ಲವೂ ದೇವರ ವಾಕ್ಯದ ಪ್ರಕಾರ
ನಡೆಯಿತು ಎಂದು ನಮಗೆ ಅರ್ಥವಾಗುತ್ತದೆ.
ಅನ್ ಸಂಗ್ ಹೊಂಗ್ ದೇವರು ಮತ್ತು ತಾಯಿ ದೇವರು ಪವಿತ್ರಾತ್ಮನ ಕಾಲದಲ್ಲಿ
ಆತ್ಮನು ಮತ್ತು ಮದಲಗಿತ್ತಿಯಾಗಿ ಈ ಭೂಮಿಗೆ ಬಂದರು. ಸುವಾರ್ತೆಯ ಕೆಲಸವನ್ನು
ದೇವರು ನೆರವೇರಿಸುತ್ತಾರೆ ಎಂದು ನಂಬುತ್ತಾ ನಾವು ದೇವರ ಮಾತಿಗೆ ವಿಧೇಯರಾದಾಗ,
ಈ ಕ್ಷಣದಲ್ಲಿಯೂ ಸುವಾರ್ತೆಯ ಅದ್ಭುತ ಕಾರ್ಯವು ನಡೆಯುತ್ತದೆ.
(ಚೀಯೋನಿನ ಸುಗಂಧ: ಪಂಚಾಶತ್ತಮದ ಬೋಧನಾ ಉತ್ಸವದ ನಂತರ
ನಾಲ್ಕು ತಿಂಗಳಲ್ಲಿ ಸಾಧಿಸಿದ ಸುವಾರ್ತೆ ಕೆಲಸ)
ಯೆಹೋವನು ಅಮೋರಿಯರನ್ನು ಇಸ್ರಾಯೇಲ್ಯರಿಗೆ ಒಪ್ಪಿಸಿದ ದಿನದಲ್ಲಿ ಯೆಹೋಶುವನು ಯೆಹೋವನಿಗೆ ಒಂದು ವಿಜ್ಞಾಪನೆ ಮಾಡಿದನು. ಸೂರ್ಯನೇ, ನೀನು ಗಿಬ್ಯೋನಿನಲ್ಲಿಯೂ ಚಂದ್ರನೇ, ನೀನು ಅಯ್ಯಾಲೋನ್ ತಗ್ಗಿನಲ್ಲಿಯೂ ನಿಲ್ಲಿರಿ! ಎಂದು ಇಸ್ರಾಯೇಲ್ಯರ ಸಮಕ್ಷದಲ್ಲಿ ಆಜ್ಞಾಪಿಸಲು ಇಸ್ರಾಯೇಲ್ಯರು ತಮ್ಮ ಶತ್ರುಗಳಿಗೆ ಮುಯ್ಯಿತೀರಿಸುವವರೆಗೆ ಸೂರ್ಯಚಂದ್ರರು ಹಾಗೆಯೇ ನಿಂತರು . . .
[ಯೆಹೋಶುವ 10:12-13]
ಮೋಶೆ ಸಮುದ್ರದ ಮೇಲೆ ಕೈಚಾಚಿದಾಗ ಯೆಹೋವನು ಆ ರಾತ್ರಿಯೆಲ್ಲಾ ಮೂಡಣ ದಿಕ್ಕಿನಿಂದ ಬಲವಾದ ಬಿರುಗಾಳಿಯನ್ನು ಬೀಸುವಂತೆ ಮಾಡಿ ಸಮುದ್ರದ ನೀರನ್ನು ಒಂದು ಕಡೆಗೆ ನೂಕಿ ಅದರ ತಳದಲ್ಲಿ ಒಣನೆಲವು ಕಾಣಿಸುವಂತೆ ಮಾಡಿದನು.
ನೀರು ವಿಭಾಗವಾಯಿತು.
[ವಿಮೋಚನಕಾಂಡ 14:21]
ಮಾತಾಡುವದನ್ನು ಮುಗಿಸಿದ ಮೇಲೆ ಸೀಮೋನನಿಗೆ - ಆಳವಾದ ಸ್ಥಳಕ್ಕೆ ದೋಣಿಯನ್ನು ನಡಿಸಿ ಮೀನುಬೇಟೆಗಾಗಿ ನಿಮ್ಮ ಬಲೆಗಳನ್ನು ಹಾಕಿರಿ . . . ಗುರುವೇ, ನಾವು ರಾತ್ರಿಯೆಲ್ಲಾ ಪ್ರಯಾಸಪಟ್ಟರೂ ಏನೂ ಸಿಕ್ಕಲಿಲ್ಲ; ಆದರೆ ನಿನ್ನ ಮಾತಿನ ಮೇಲೆ ಬಲೆಗಳನ್ನು ಹಾಕುತ್ತೇನೆ ಅಂದನು. ಹಾಕಿದ ಮೇಲೆ ಮೀನುಗಳು ರಾಶಿರಾಶಿಯಾಗಿ ಸಿಕ್ಕಿಕೊಂಡು ಅವರ ಬಲೆಗಳು ಹರಿದುಹೋಗುತ್ತಿದ್ದವು.
[ಲೂಕ 5:4-6]
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ