ಹಳೆಯ ಒಡಂಬಡಿಕೆಯ ಮೋಶೆಯ ಕಾಲದಲ್ಲಿ ಆಚರಿಸಲಾದ
ಪ್ರಥಮಫಲದ ಹಬ್ಬವು ಛಾಯೆಯಾಗಿದೆ ಮತ್ತು ಹೊಸ ಒಡಂಬಡಿಕೆಯಲ್ಲಿರುವ
ಪುನರುತ್ಥಾನ ದಿನವು ಸತ್ಯತ್ವವಾಗಿದೆ.
ಪ್ರಥಮಫಲದ ಪ್ರವಾದನೆಯನ್ನು ನೆರವೇರಿಸಲು ನಿದ್ರೆಹೋದವರಲ್ಲಿ
ಪ್ರಥಮಫಲವಾಗಿ, ಸಬ್ಬತ್ ದಿನದ ಮರುದಿನ ಮುಂಜಾನೆ
ಯೇಸುಕ್ರಿಸ್ತರು ಪುನರುತ್ಥಾನರಾದರು.
ಆದ್ದರಿಂದ, ನಾವು ಸಬ್ಬತ್ ದಿನ (ಶನಿವಾರ)ವನ್ನು ವಾರದ ಹಬ್ಬವಾಗಿ
ಮತ್ತು ಪುನರುತ್ಥಾನ ದಿನವನ್ನು ವಾರ್ಷಿಕ ಹಬ್ಬವಾಗಿ ಆಚರಿಸುವುದು ದೇವರ ಚಿತ್ತವಾಗಿದೆ.
ಸೈತಾನನು ಮಾನವಕುಲವನ್ನು ಮರಣದ ಸರಪಳಿಯಲ್ಲಿ ಬಂಧಿಸಿ,
ಅವರನ್ನು ಮರಣದ ಸಂಕಟಕ್ಕೆ ಒಳಪಡಿಸಿದನು.
ಎಷ್ಟಾದರೂ ಯೇಸುಕ್ರಿಸ್ತರು ಈ ಭೂಮಿಗೆ ಬಂದು ಮರಣದ ಶಕ್ತಿಯನ್ನು ಒಡೆದುಹಾಕಿ
ಪುನರುತ್ಥಾನ ದಿನದ ಮೂಲಕ ಜನರನ್ನು ನಿತ್ಯಜೀವಕ್ಕೆ ಮುನ್ನಡೆಸಿದರು.
ಇತ್ತೀಚಿನ ದಿನಗಳಲ್ಲಿ, ಚರ್ಚ್ ಆಫ್ ಗಾಡ್ ಸದಸ್ಯರು ಮೊಟ್ಟೆಗಳನ್ನು ಹಂಚಿಕೊಳ್ಳುವ
ಅನ್ಯಜನಾಂಗದ ಪದ್ಧತಿಯನ್ನು ಅನುಸರಿಸುವುದಿಲ್ಲ,
ಆದರೆ ಯೇಸುಕ್ರಿಸ್ತರ ಮಾದರಿಯನ್ನು ಅನುಸರಿಸಿ
ನಮ್ಮ ಆಧ್ಯಾತ್ಮಿಕ ಕಣ್ಣುಗಳನ್ನು ತೆರೆಯುವ ರೊಟ್ಟಿಯನ್ನು ಮುರಿಯುತ್ತಾರೆ.
“ಆದರೆ ಕ್ರಿಸ್ತನು ಸತ್ತವರೊಳಗಿಂದ ಎದ್ದು ಬಂದೇ ಇದ್ದಾನೆ;. . .
ನಿದ್ರೆಹೋದವರಲ್ಲಿ ಪ್ರಥಮಫಲವಾದನು. . .
ಅದೇ ಪ್ರಕಾರ ಕ್ರಿಸ್ತನ ಸಂಬಂಧದಿಂದ ಎಲ್ಲರೂ ಜೀವಿತರಾಗುವರು.” 1 ಕೊರಿಂಥದವರಿಗೆ 15:20–22
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ