ಜೀವಬಾಧ್ಯರ ಪಟ್ಟಿಯಲ್ಲಿ ದಾಖಲಾಗಿರುವ ಪ್ರತಿಯೊಬ್ಬ ಮನುಷ್ಯನ ಕೃತ್ಯಗಳು
ಸಾವಿರಾರು ವರ್ಷಗಳ ನಂತರವೂ ಅಳಿಸಿಹೋಗುವದಿಲ್ಲ, ಆದರೆ ಅವರು ಪ್ರಶಸ್ತಿಗಳಿಗೆ
ಅಥವಾ ಶಿಕ್ಷೆಗೆ ಅರ್ಹರೇ ಎಂದು ದೇವರಿಂದ ನಿರ್ಣಯಿಸಲಾಗುತ್ತದೆ. ಅದರ ಪ್ರಕಾರ,
ಅವರು ನೀತಿವಂತರ ಪುನರುತ್ಥಾನದಲ್ಲಿ ಭಾಗಿಯಾಗಿ, ಪರಲೋಕಕ್ಕೆ ಹೋಗಬಹುದು
ಅಥವಾ ದುಷ್ಟರ ಪುನರುತ್ಥಾನದಲ್ಲಿ ಭಾಗಿಯಾಗಿ ಅವರು ನರಕಕ್ಕೆ ಹೋಗಬಹುದು.
ಆದಿ ಸಭೆಯ ಸಂತರು ಯೇಸುವಿನ ಪುನರುತ್ಥಾನವನ್ನು ನೋಡಿದರು
ಮತ್ತು ಅವರು ನಂಬಿಕೆಯಲ್ಲಿ ದೃಢವಾಗಿ ನಿಂತರು. ಇಂದು, ಕ್ರಿಸ್ತ ಅನ್ ಸಂಗ್ ಹೊಂಗ್
ಮತ್ತು ಪರಲೋಕದ ತಾಯಿಯು ನಮಗೆ ಪುನರುತ್ಥಾನ ಮತ್ತು ರೂಪಾಂತರದಲ್ಲಿ
ನಂಬಿಕೆಯನ್ನು ಹೊಂದಲು ಕಲಿಸುತ್ತಾರೆ. ಎಲ್ಲಾ ಮಾನವರು ದೇವರಿಗೆ ಭಯಪಟ್ಟು,
ಅವರ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟಾಗ, ಅವರು ಆತ್ಮಿಕ ದೇಹಗಳಾಗಿ ರೂಪಾಂತರಗೊಳ್ಳುತ್ತಾರೆ
ಮತ್ತು ದೇವದೂತರ ಲೋಕಕ್ಕೆ ಹಿಂತಿರುಗುತ್ತಾರೆ ಎಂದು ಅವರು ಕಲಿಸುತ್ತಾರೆ.
ಇದಲ್ಲದೆ ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದೆಂದು ಇವರು ದೇವರಲ್ಲಿ ನಿರೀಕ್ಷೆಯಿಟ್ಟಿರುವ ಪ್ರಕಾರವೇ ನಾನೂ ನಿರೀಕ್ಷೆಯುಳ್ಳವನಾಗಿದ್ದೇನೆ; ಇದರ ದೆಸೆಯಿಂದ ದೇವರ ವಿಷಯದಲ್ಲಿಯೂ ಮನುಷ್ಯರ ವಿಷಯದಲ್ಲಿಯೂ ನಾನು ನಿರ್ದೋಷಿ ಎಂದು ಸಾಕ್ಷಿ ಹೇಳುವ ಮನಸ್ಸು ನನಗೆ ಯಾವಾಗಲೂ ಇರಬೇಕೆಂದು ಅಭ್ಯಾಸಮಾಡಿಕೊಳ್ಳುತ್ತೇನೆ.
ಅಪೊಸ್ತಲರ ಕೃತ್ಯಗಳು 24:15-16
ನಾವಾದರೋ ಪರಲೋಕಸಂಸ್ಥಾನದವರು; ಕರ್ತನಾದ ಯೇಸು ಕ್ರಿಸ್ತನು ಅಲ್ಲಿಂದಲೇ ರಕ್ಷಕನಾಗಿ ಬರುವದನ್ನು ಎದುರುನೋಡುತ್ತಾ ಇದ್ದೇವೆ. ಆತನು . . . ದೀನಾವಸ್ಥೆಯುಳ್ಳ ನಮ್ಮ ದೇಹವನ್ನು ರೂಪಾಂತರಪಡಿಸಿ ಪ್ರಭಾವವುಳ್ಳ ತನ್ನ ದೇಹದ ಸಾರೂಪ್ಯವಾಗುವಂತೆ ಮಾಡುವನು.
ಫಿಲಿಪ್ಪಿಯವರಿಗೆ 3:20–21
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ