ನಮ್ಮ ಕ್ರಿಯೆಗಳು ಸರಿಯೋ ತಪ್ಪೋ ಎಂದು ತಿಳಿಯಲು, ನಾವು ನಿಜವಾದ ಬೆಳಕಾಗಿರುವ ದೇವರ ಬಳಿಗೆ ಬರಬೇಕು. ಇಂದು, ಜನರು ದೇವರ ಚಿತ್ತವನ್ನು ಗ್ರಹಿಸಲು ಸಾಧ್ಯವಾಗದ ಕತ್ತಲೆಯ ಲೋಕದಲ್ಲಿ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ಸಬ್ಬತ್ ಮತ್ತು ಪಸ್ಕದ ಮೂಲಕ ಜೀವದ ಸತ್ಯದ ಬೆಳಕನ್ನು ಪ್ರಕಾಶಿಸಿದ್ದಾರೆ.
ದೇವರು ಲೋಕದ ಕತ್ತಲೆಯ ಆತ್ಮವನ್ನು ಸೋಲಿಸುತ್ತಾ, ಪರಲೋಕ ವಿಷಯಗಳ ಬಗ್ಗೆ ನಮಗೆ ಕಲಿಸುತ್ತಾ, ಲೋಕಕ್ಕೆ ನಿರೀಕ್ಷೆಯನ್ನು ನೀಡುತ್ತಾ ಮತ್ತು ಬೆಳಕನ್ನು ಪ್ರಕಾಶಿಸುತ್ತಾ ಈ ಭೂಮಿಗೆ ಬೆಳಕಾಗಿ ಬಂದರು. ಅದೇ ರೀತಿ, ದೇವರ ಮಕ್ಕಳು ಸಹ ಸುವಾರ್ತೆಯ ಬೆಳಕನ್ನು ಲೋಕಕ್ಕೆ ಪ್ರಕಾಶಿಸಬೇಕು ಹಾಗಾಗಿ ಪ್ರತಿಯೊಬ್ಬರು ದೇವರನ್ನು ಗುರುತಿಸಬಹುದು.
ಇವರಲ್ಲಿ ದೇವರ ಪ್ರತಿರೂಪವಾಗಿರುವ ಕ್ರಿಸ್ತನ ಪ್ರಭಾವವನ್ನು ತೋರಿಸುವ ಸುವಾರ್ತೆಯ ಪ್ರಕಾಶವು ಉದಯವಾಗಬಾರದೆಂದು ಈ ಪ್ರಪಂಚದ ದೇವರು ನಂಬಿಕೆಯಿಲ್ಲದವರ ಮನಸ್ಸನ್ನು ಮಂಕುಮಾಡಿದನು . . . ಯಾಕಂದರೆ ಕತ್ತಲೆಯೊಳಗಿಂದ ಬೆಳಕು ಹೊಳೆಯಲಿ ಎಂದು ಹೇಳಿದ ದೇವರು ತಾನೇ ಯೇಸು ಕ್ರಿಸ್ತನ ಮುಖದಲ್ಲಿ ತೋರುವ ದೇವಪ್ರಭಾವಜ್ಞಾನವೆಂಬ ಪ್ರಕಾಶವು ಅನೇಕರಿಗೆ ಉಂಟಾಗುವದಕ್ಕಾಗಿ ನಮ್ಮ ಹೃದಯಗಳಲ್ಲಿ ಹೊಳೆದನು. 2 ಕೊರಿಂಥದವರಿಗೆ 4:4-6
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ