ಸರ್ವದೋಷಪರಿಹಾರಕ ದಿನವು ಜನರು ಮತ್ತು ಯಾಜಕರ ಎಲ್ಲಾ ಪಾಪಗಳನ್ನು ಕ್ಷಮಿಸುವ ಮಹಾನ್ ದಿನವಾಗಿದೆ. ಇಸ್ರಾಯೇಲ್ಯರು ದೇವರ ಕೃಪೆಯನ್ನು ಮರೆತು ಚಿನ್ನದ ಬಸವನ ವಿಗ್ರಹವನ್ನು ಪೂಜಿಸುವ ಮೂಲಕ ಪಾಪ ಮಾಡಿದರು. ಆದ್ದರಿಂದಲೇ ಮೋಶೆಯು ದೇವರು ಕೊಟ್ಟ ಮೊದಲ ದಶಾಜ್ಞೆಗಳ ಕಲ್ಲಿನ ಹಲಿಗೆಗಳನ್ನು ಮುರಿದನು. ಇಸ್ರಾಯೇಲ್ಯರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟರು ಮತ್ತು ದೇವರು ಅವರಿಗೆ ದಶಾಜ್ಞೆಗಳ ಎರಡನೇ ಕಲ್ಲಿನ ಹಲಿಗೆಗಳನ್ನು ಕೊಟ್ಟರು; ಈ ದಿನವು ಸರ್ವದೋಷಪರಿಹಾರಕ ದಿನದ ಪ್ರಾರಂಭವಾಯಿತು.
ಹಳೆಯ ಒಡಂಬಡಿಕೆಯಲ್ಲಿ, ಇಸ್ರಾಯೇಲಿನ ಎಲ್ಲಾ ಪಾಪಗಳನ್ನು ಸರ್ವದೋಷಪರಿಹಾರಕ ದಿನದವರೆಗೆ ತಾತ್ಕಾಲಿಕವಾಗಿ ಗುಡಾರದ ಮೇಲೆ ಹೊರಿಸಲಾಯಿತು. ಇಂದು, ನಮ್ಮ ಎಲ್ಲಾ ಪಾಪಗಳನ್ನು ಗುಡಾರದ ನಿಜ ಅರ್ಥವಾಗಿರುವ ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರಿಗೆ ಹೊರಿಸಲಾಗಿದೆ. ನಂತರ, ಸರ್ವದೋಷಪರಿಹಾರಕ ದಿನದಂದು, ನಮ್ಮ ಎಲ್ಲಾ ಪಾಪಗಳನ್ನು ಪಾಪದ ಮೂಲಪಿತೃವಾದ ಸೈತಾನನ ಮೇಲೆ ಹೊರಿಸಲಾಗುತ್ತದೆ. ಅಂತಿಮವಾಗಿ, ಸೈತಾನನು ಅಧೋಲೋಕದಲ್ಲಿ, ಅಂದರೆ ನರಕದಲ್ಲಿ ನ್ಯಾಯತೀರಿಸಲ್ಪಡುತ್ತಾನೆ, ಮತ್ತು ಆ ಹೊತ್ತಿಗೆ, ಎಲ್ಲಾ ಪಾಪಗಳು ಅಂತಿಮವಾಗಿ ಕಣ್ಮರೆಯಾಗುತ್ತವೆ.
ಯೆಹೋವನು ಮೋಶೆಗೆ ಹೇಳಿದ್ದೇನಂದರೆ - ಅದೇ ಏಳನೆಯ ತಿಂಗಳಿನ ಹತ್ತನೆಯ ದಿನವು ಸರ್ವದೋಷಪರಿಹಾರಕ ದಿನ. ಅದರಲ್ಲಿ ದೇವಾರಾಧನೆಗಾಗಿ ಸಭೆಕೂಡಬೇಕು; ನೀವು ಪೂರ್ಣವಾಗಿ ಉಪವಾಸಮಾಡಬೇಕು, ಮತ್ತು ಯೆಹೋವನ ಸನ್ನಿಧಿಯಲ್ಲಿ ಹೋಮವನ್ನು ಮಾಡಬೇಕು.
ಯಾಜಕಕಾಂಡ 23:26-27
ಮರುದಿನ ಯೋಹಾನನು ತನ್ನ ಕಡೆಗೆ ಬರುವ ಯೇಸುವನ್ನು ನೋಡಿ - ಅಗೋ [ಯಜ್ಞಕ್ಕೆ] ದೇವರು ನೇವಿುಸಿದ ಕುರಿ, ಲೋಕದ ಪಾಪವನ್ನು ನಿವಾರಣೆ ಮಾಡುವವನು.
ಯೋಹಾನ 1:29
ಇದಲ್ಲದೆ ಅವರನ್ನು ಮರುಳುಗೊಳಿಸಿದ ಸೈತಾನನು ಬೆಂಕಿ ಗಂಧಕಗಳುರಿಯುವ ಕೆರೆಯಲ್ಲಿ ದೊಬ್ಬಲ್ಪಟ್ಟನು. ಅಲ್ಲಿ ಮೃಗವೂ ಸುಳ್ಳು ಪ್ರವಾದಿಯೂ ಕೂಡ ಇದ್ದಾರೆ; ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆಪಡುತ್ತಿರುವರು.
ಪ್ರಕಟನೆ 20:10
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ