ಮನುಕುಲದ ರಕ್ಷಕರಾದ ದೇವರು ನಮಗೆ ಪಾಪಗಳ ಕ್ಷಮೆ ಮತ್ತು ನಿತ್ಯಪರಲೋಕ ರಾಜ್ಯದ ಆಶೀರ್ವಾದವನ್ನು ಪಸ್ಕ ಹಬ್ಬದ ಮೂಲಕ ಅನುಮತಿಸಿದರು ಮತ್ತು ಪಸ್ಕ ಹಬ್ಬವನ್ನು ಆಚರಿಸುವವರನ್ನು ಪರಲೋಕದ ಪೌರತ್ವವನ್ನು ಸ್ವೀಕರಿಸುವ ಮತ್ತು ಆತ್ಮರಕ್ಷಣೆಯ ಸಾಧಿಸುವ ದೇವಜನರೆಂದು ಗುರುತಿಸಲಾಗುತ್ತದೆ ಎಂದು ಬಲವಾಗಿ ಘೋಷಿಸಿದರು.
2,000 ವರ್ಷಗಳ ಹಿಂದೆ ಬಂದ ಯೇಸು ಮತ್ತು ಈ ಕಾಲದಲ್ಲಿ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಹಾಗೂ ತಾಯಿ ದೇವರು, ಪಸ್ಕ ಹಬ್ಬವನ್ನು ಆಚರಿಸದೆ ನಮ್ಮ ತುಟಿಗಳಿಂದ ಮಾತ್ರ ದೇವರನ್ನು ಕರೆಯುವುದು ಅಸ್ಪಷ್ಟ ನಂಬಿಕೆ ಎಂದು ನಮಗೆ ನಿರಂತರವಾಗಿ ಕಲಿಸಿದರು.
ಇದಲ್ಲದೆ, ನೇಮಕವಾದ ಕಾಲದಲ್ಲಿ ಆಚರಿಸಲು ಸಾಧ್ಯವಾಗದವರಿಗೆ ದೇವರು ಎರಡನೇ ಪಸ್ಕ ಹಬ್ಬವನ್ನು ಕೊಟ್ಟ ಕಾರಣವೇನೆಂದರೆ, ಪಸ್ಕವು ನಿಜವಾದ ದೇವಜನರನ್ನು ಪ್ರತ್ಯೇಕಿಸುವ ಅತ್ಯಂತ ಪ್ರಮುಖ ಹಬ್ಬವಾಗಿದೆ.
ಇಸ್ರಾಯೇಲ್ಯರು ಪಸ್ಕಹಬ್ಬವನ್ನು ನೇಮಕವಾದ ಕಾಲದಲ್ಲಿ ಆಚರಿಸಹೇಳು;
ಆದರೆ ಕೆಲವು ಜನರು ಮನುಷ್ಯ ಶವ ಸೋಂಕಿದದರಿಂದ ಅಶುದ್ಧರಾಗಿ ಆ ದಿನದಲ್ಲಿ ಪಸ್ಕಹಬ್ಬವನ್ನು ಆಚರಿಸಲಾರದೆ ಮೋಶೆ ಆರೋನರ ಬಳಿಗೆ ಬಂದು ಮೋಶೆಗೆ - . . .
ಆಗ ಯೆಹೋವನು ಮೋಶೆಗೆ ಹೇಳಿದ್ದೇನಂದರೆ -
. . . ಯೆಹೋವನ ಆಜ್ಞಾನುಸಾರ ಪಸ್ಕಹಬ್ಬವನ್ನು ಆಚರಿಸಲೇಬೇಕು.
ಅಂಥವರು ಎರಡನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೇವೇಳೆಯಲ್ಲಿ ಅದನ್ನು ಆಚರಿಸಬೇಕು. . . .
ಆದರೆ ಯಾವನಾದರೂ ಶುದ್ಧನಾಗಿಯೂ ಪ್ರಯಾಣಮಾಡದೆಯೂ ಇದ್ದು ಪಸ್ಕಹಬ್ಬವನ್ನು ಆಚರಿಸದೆ ತಪ್ಪಿದರೆ ಅವನು ತನ್ನ ಕುಲದಿಂದ ತೆಗೆದುಹಾಕಲ್ಪಡಬೇಕು. . . .
ಅರಣ್ಯಕಾಂಡ 9:2-13
ಹೀಗಿರಲಾಗಿ ಅವರ ಫಲಗಳಿಂದ ಅವರನ್ನು ತಿಳಿದುಕೊಳ್ಳುವಿರಿ.
ನನ್ನನ್ನು ಸ್ವಾಮೀ, ಸ್ವಾಮೀ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನು.
ಮತ್ತಾಯನು 7:20-21
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ