ಎಲೀಯನು ಒಬ್ಬನೇ 850 ಸುಳ್ಳು ಪ್ರವಾದಿಗಳ ವಿರುದ್ಧ ಹೋರಾಡಿದನು; ಯುವಕ ದಾವೀದನು ದೈತ್ಯ ಗೊಲ್ಯಾತನನ್ನು ಸೋಲಿಸಿದನು; ಗಿದ್ಯೋನನ 300 ಯೋಧರು 1,35,000 ಮಿದ್ಯಾನ್ಯರ ಸೈನ್ಯದ ವಿರುದ್ಧ ಹೋರಾಡಿದರು; ಇಸ್ರಾಯೇಲ್ಯರು 40 ವರ್ಷಗಳ ಕಾಲ ಮರಳುಗಾಡಿನಲ್ಲಿ ನರಳಿದರು ಮತ್ತು ಆದಿ ಸಭೆಯ ದೇವಜನರು ಹಿಂಸೆ ಮತ್ತು ಹುತಾತ್ಮತೆಯನ್ನು ಎದುರಿಸುತ್ತಾ ಸುವಾರ್ತೆಯನ್ನು ಬೋಧಿಸಿದರು. ಸಂಕಷ್ಟದ ಮಧ್ಯೆದಲ್ಲಿ, ಅವರ ಹೃದಯಗಳು ಪರಿಷ್ಕರಿಸಲ್ಪಟ್ಟವು ಮತ್ತು ಅವರ ನಂಬಿಕೆಯು ದೇವರಿಂದ ಅನುಮೋದಿಸಲ್ಪಟ್ಟಿತು; ಕೊನೆಯಲ್ಲಿ, ಅವರು ವಿಜಯದ ಮಹಿಮೆಯನ್ನು ಪಡೆದರು.
ದೇವರು ತನ್ನ ಮಕ್ಕಳು ಕಷ್ಟಪಡುತ್ತಾರೆ ಮತ್ತು ಸೈತಾನನಿಂದ ಅಡಚಣೆಯನ್ನು ಎದುರಿಸುತ್ತಾರೆ ಎಂದು ಮೊದಲೇ ನೋಡಿದ್ದಾರೆ. ಆದರೂ, ತನ್ನ ಸರ್ವಶಕ್ತ ಶಕ್ತಿಯಿಂದ ಅವರಿಗಾಗಿ ಅದ್ಭುತಗಳನ್ನು ಮಾಡುವ ಮೊದಲು, ಪರಿಷ್ಕರಣೆಯ ಮೂಲಕ ಅವರು ನಂಬಿಕೆ, ನಿರೀಕ್ಷೆ, ಪ್ರೀತಿ ಮತ್ತು ಕೆಟ್ಟದ್ದನ್ನು ತಿರಸ್ಕರಿಸಿ ಒಳ್ಳೆಯದನ್ನು ಅನುಸರಿಸುವ ಮನೋಭಾವದೊಂದಿಗೆ ತನ್ನ ಬಗ್ಗೆ ಭಕ್ತಿಯನ್ನು ಬೆಳೆಸಿಕೊಳ್ಳುವಂತೆ ಮಾಡಿದರು.
ಬೆಳ್ಳಿಬಂಗಾರಗಳನ್ನು ಪುಟಕುಲಿಮೆಗಳು ಶೋಧಿಸುವವು; ಹೃದಯಗಳನ್ನು ಶೋಧಿಸುವವನು ಯೆಹೋವನೇ. ಜ್ಞಾನೋಕ್ತಿಗಳು 17:3
ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಿದ್ದೇನೆ; ನನ್ನ ಸಂಕಲ್ಪವು ನಿಲ್ಲುವದು, ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವೆನು ಎಂದು ಹೇಳಿ ಇನ್ನೂ ನಡೆಯದಿರುವ ಕಾರ್ಯಗಳನ್ನು ಪುರಾತನಕಾಲದಲ್ಲಿಯೇ ಅರುಹಿದ್ದೇನೆ; ಯೆಶಾಯನು 46:10
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ