ಕೆಲವು ಜನರು ಸತ್ಯವೇದವನ್ನು ಇಸ್ರಾಯೇಲ್ ಇತಿಹಾಸದ ಅಥವಾ ಪುರಾಣಗಳ ಪುಸ್ತಕವೆಂದು ಪರಿಗಣಿಸುತ್ತಾರೆ. ಎಷ್ಟಾದರೂ, ಸತ್ಯವೇದವು ಪ್ರಪಂಚದ ಅತ್ಯಂತ ಹಳೆಯ ಪುಸ್ತಕವಾಗಿದೆ, ಸುಮಾರು 1,600 ವರ್ಷಗಳ ಕಾಲದಲ್ಲಿ ವಿವಿಧ ಉದ್ಯೋಗಗಳು ಮತ್ತು ವಿವಿಧ ವಯಸ್ಸಿನ ಹತ್ತಾರು ಜನರಿಂದ ವಿವಿಧ ಸಮಯಗಳಲ್ಲಿ ಬರೆಯಲಾಗಿದೆ. ಇನ್ನೂ ಆಶ್ಚರ್ಯಕರ ಸಂಗತಿಯೆಂದರೆ, 1,600 ವರ್ಷಗಳಿಂದ ಬರೆಯಲ್ಪಟ್ಟ ಪ್ರತಿಯೊಂದೂ ಪ್ರವಾದನೆ ಮತ್ತು ನೆರವೇರಿಕೆಯಾಗಿ ಸಂಬಂಧಗೊಂಡಿದೆ.
ಸತ್ಯವೇದದ ದಾಖಲೆಗಳಲ್ಲಿ, ನಾವು ಅರಸ ಕೋರೆಷನ ಕುರಿತ ಪ್ರವಾದನೆ ಮತ್ತು ಅದರ ನೆರವೇರಿಕೆಯ ಕುರಿತು ಅಧ್ಯಯಿಸೋಣ. ಅರಸ ಕೋರೆಷನು ಪಾರಸಿಯ ಸಾಮ್ರಾಜ್ಯದ ಸ್ಥಾಪಕ ಮತ್ತು ಪೂರ್ವದೇಶಗಳನ್ನು ಜಯಿಸಿದವನು. ಸತ್ಯವೇದದಲ್ಲಿ ದಾಖಲಾಗಿರುವ ಆತನ ಮಹಾ ಸಾಧನೆಯನ್ನು ನೋಡೋಣ.
ಪಾರಸಿಯ ರಾಜನಾದ ಕೋರೆಷನೆಂಬ ನನ್ನ ಮಾತನ್ನು ಕೇಳಿರಿ - ಪರಲೋಕದೇವರಾದ ಯೆಹೋವನು ನನಗೆ ಭೂಲೋಕದ ಎಲ್ಲಾ ರಾಜ್ಯಗಳನ್ನೂ ಕೊಟ್ಟು ತನಗೋಸ್ಕರ ಯೆಹೂದ ದೇಶದ ಯೆರೂಸಲೇವಿುನಲ್ಲಿ ಆಲಯವನ್ನು ಕಟ್ಟಿಸಬೇಕು ಎಂದು ಆಜ್ಞಾಪಿಸಿದ್ದಾನೆ. (ಎಜ್ರ 1:2-3)
ಪಾರಸಿಯ ಅರಸನಾದ ಕೋರೆಷನು, ಇಸ್ರಾಯೇಲ್ ದೇವರನ್ನು ಸ್ತುತಿಸಿ, ಇಸ್ರಾಯೇಲ್ಯರನ್ನು ಏಕೆ ಬಿಡುಗಡೆ ಮಾಡಿದನು? ಇಸ್ರಾಯೇಲ್ಯರನ್ನು ಬಿಡುಗಡೆ ಮಾಡುವುದಕ್ಕಿಂತ ಸುಮಾರು 170 ವರ್ಷಗಳ ಮುಂಚೆಯೇ ಬರೆಯಲಾದ ಯೆಶಾಯ ಪುಸ್ತಕದಲ್ಲಿ ಅವನ ಹೆಸರು ಬರೆದಿರುವುದನ್ನು ಅರಸ ಕೋರೆಷನು ನೋಡಿದನು.
“ಯೆಹೋವನು ಯಾವನ ಕೈಹಿಡಿದು ಯಾವನೆದುರಿಗೆ ಜನಾಂಗಗಳನ್ನು ತುಳಿದು... ತಾನು ಅಭಿಷೇಕಿಸಿದ ಆ ಕೋರೆಷನಿಗೆ ಹೀಗೆನ್ನುತ್ತಾನೆ -...ನಿನ್ನ ಹೆಸರುಹಿಡಿದು ಕರೆಯುವ ನಾನು ಯೆಹೋವನು, ಇಸ್ರಾಯೇಲ್ಯರ ದೇವರು ಎಂದು ನೀನು ತಿಳಿದುಕೊಳ್ಳುವ ಹಾಗೆ ಕತ್ತಲಲ್ಲಿ ಬಚ್ಚಿಟ್ಟಿರುವ ಆಸ್ತಿಪಾಸ್ತಿಯನ್ನೂ ಗುಪ್ತಸ್ಥಳಗಳಲ್ಲಿ ಮರೆಮಾಡಿದ ನಿಧಿನಿಕ್ಷೇಪವನ್ನೂ ನಿನಗೆ ಕೊಡುವೆನು. (ಯೆಶಾ 45:1-3)
ಅರಸ ಕೋರೆಷನು ಬಾಬೆಲನ್ನು ವಶಪಡಿಸಿಕೊಳ್ಳುವುದಕ್ಕೆ ತನಗೆ ಸಹಾಯ ಮಾಡಿದ್ದು ದೇವರು ಎಂದು ಗ್ರಹಿಸಿಕೊಂಡನು ಮತ್ತು ಸತ್ಯವೇದದಲ್ಲಿ ಪ್ರವಾದಿಸಿದಂತೆ ಅವನು ಇಸ್ರಾಯೇಲ್ಯರನ್ನು ಬಿಡುಗಡೆ ಮಾಡಿದನು. ಫಲಿತಾಂಶವಾಗಿ, ಅರಸ ಕೋರೆಷನು ದಾಸತ್ವದಲ್ಲಿದ್ದವರನ್ನು ಬಿಡುಗಡೆ ಮಾಡಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಗುರುತಿಸಿದ ಪುರಾತನ ಚಕ್ರವರ್ತಿ ಎಂದು ಜನರಿಂದ ಇನ್ನೂ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಯೇಸು ಭೂಮಿಗೆ ಬರುವ ಸುಮಾರು 700 ವರ್ಷಗಳ ಮೊದಲೇ ಅವರು ಮಗುವಾಗಿ ಜನಿಸಿಸುವರು ಎಂದೂ ಸತ್ಯವೇದವು ಮುಂತಿಳಿಸಿದೆ.
“. . . ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನನ್ನು ಹಡೆದು ಅವನಿಗೆ ಇಮ್ಮಾನುವೇಲ್ ಎಂದು ಹೆಸರಿಡುವಳು.” (ಯೆಶಾ 7:14)
ಈ ಪ್ರವಾದನೆಯ ಪ್ರಕಾರ, ದೇವರು ಕನ್ಯೆ ಮರಿಯಳ ದೇಹದ ಮೂಲಕ ಯೇಸುವಾಗಿ ಜನಿಸಿದರು (ಮತ್ತಾ 1:18-23). ಇದಲ್ಲದೆ, ಯೇಸು ಹೇಗೆ ಯಾತನೆಯನ್ನು ಅನುಭವಿಸುವರು ಎಂದು ಸತ್ಯವೇದವು ಮೊದಲೇ ವಿವರವಾಗಿ ನುಡಿದಿದೆ.
“. . . ಅವನು ಧಿಕ್ಕರಿಸಲ್ಪಟ್ಟವನು, ಮನುಷ್ಯರು ಸೇರಿಸಿಕೊಳ್ಳದವನು,...ನಮ್ಮ ದ್ರೋಹಗಳ ದೆಸೆಯಿಂದ ಅವನಿಗೆ ಗಾಯವಾಯಿತು, ನಮ್ಮ ಅಪರಾಧಗಳ ನಿವಿುತ್ತ ಅವನು ಜಜ್ಜಲ್ಪಟ್ಟನು; ನಮಗೆ ಸುಕ್ಷೇಮವನ್ನುಂಟುಮಾಡುವ ದಂಡನೆಯನ್ನು ಅವನು ಅನುಭವಿಸಿದನು; ಅವನ ಬಾಸುಂಡೆಗಳಿಂದ ನಮಗೆ ಗುಣವಾಯಿತು.” (ಯೆಶಾ 53:3-5)
ಈ ಪ್ರವಾದನೆಯ ಪ್ರಕಾರ, ಯೇಸುವನ್ನು ಈಟಿಯಿಂದ ಚುಚ್ಚಲಾಯಿತು ಮತ್ತು ಚಾವಟಿಯಿಂದ ಹೊಡೆಯಲಾಯಿತು (ಮತ್ತಾ 27:26-35; ಯೋಹಾ 19:34). ಸತ್ಯವೇದದ ಪ್ರವಾದನೆಗಳು ಜನರಿಗೆ ಅರ್ಥವಾಗದಿದ್ದರೂ, ಅವುಗಳನ್ನು ಬರೆಯಲ್ಪಟ್ಟಾಗ ಅವೆಲ್ಲವೂ ನೆರವೇರಿದೆ. ಹಾಗಾಗಿ ಸತ್ಯವೇದವು ಪ್ರವಾದನೆಗಳನ್ನು ಹೀನೈಸಬೇಡಿರಿ ಎಂದು ಎಚ್ಚರಿಸುತ್ತಿದೆ (1 ಥೆಸ 5:20). ಅದೇಕೆಂದರೆ ನಾವು ಸತ್ಯವೇದದ ಪ್ರವಾದನೆಗಳನ್ನು ತಿರಸ್ಕರಿಸಿದರೆ ನಾವು ರಕ್ಷಣೆಯನ್ನು ಹೊಂದಲು ಸಾಧ್ಯವಾಗುವುದಿಲ್ಲ. ಅನೇಕ ಪ್ರವಾದನೆಗಳನ್ನು ಬರೆಯಲ್ಪಟ್ಟಂತೆ ನಿಖರವಾಗಿ ನೆರವೇರಿದೆ, ಹಾಗಾಗಿ ಉಳಿದ ಪ್ರವಾದನೆಗಳೆಲ್ಲವೂ ತಪ್ಪದೆ ನೆರವೇರುತ್ತದೆ.
“ಮತ್ತು ಮಹಾಭೂಕಂಪಗಳಾಗುವವು; ಅಲ್ಲಲ್ಲಿ ಬರಗಳೂ ಉಪದ್ರವಗಳೂ ಬರುವವು; ಉತ್ಪಾತಗಳೂ ಆಕಾಶದಲ್ಲಿ ಮಹಾ ಸೂಚನೆಗಳೂ ತೋರುವವು.” (ಲೂಕ 21:11)
ಕೊನೆಯ ಮಹಾ ವಿಪತ್ತು ಮತ್ತು ನಾಶನವು ಸಂಭವಿಸಿದಾಗ ನಾವು ರಕ್ಷಣೆಯನ್ನು ಹೊಂದಲು ಚೀಯೋನಿಗೆ ಓಡಿಹೋಗಬೇಕು ಎಂದು ಸತ್ಯವೇದವು ಹೇಳುತ್ತದೆ.
“. . . ಕೂಡಿಕೊಂಡು ಕೋಟೆಕೊತ್ತಲಗಳ ಊರುಗಳನ್ನು ಸೇರೋಣ ಎಂದು ಕೂಗಿರಿ;. . .ಚೀಯೋನಿನ ಕಡೆಗೆ ಧ್ವಜವನ್ನೆತ್ತಿರಿ; ತಡಮಾಡದೆ ವಲಸೆಹೋಗಿರಿ;” (ಯೆರೆ 4:5–6)
ದೇವರ ಹಬ್ಬಗಳನ್ನು ಆಚರಿಸುವ ಚೀಯೋನ್, ದೇವರು ನಮಗೆ ವಾಗ್ದಾನ ಮಾಡಿದ ಆತ್ಮರಕ್ಷಣೆಯ ಮತ್ತು ಆಶ್ರಯದ ಸ್ಥಳವಾಗಿದೆ (ಯೆಶಾ 33:20). ಲೋಕದಲ್ಲಿ, ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್ ಸತ್ಯವೇದದ ಬೋಧನೆಗಳ ಪ್ರಕಾರ ದೇವರ ಹಬ್ಬಗಳನ್ನು ಆಚರಿಸುವ ಏಕೈಕ ಸಭೆಯಾಗಿದೆ; ಅದು ಚೀಯೋನ್.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ