ಈ ಲೋಕದ ಸಂಪತ್ತು, ಗೌರವ ಮತ್ತು ಅಧಿಕಾರವು ದೀರ್ಘಕಾಲ ಉಳಿಯುವುದಿಲ್ಲ, ಆದರೆ ಮರಣದ ಮುಂದೆ ಅವೆಲ್ಲವೂ ವ್ಯರ್ಥವಾಗಿದೆ.
ಹಾಗಾಗಿ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ನಮಗೆ ನಿತ್ಯ ಸಂತೋಷ ಇರುವ ಆಧ್ಯಾತ್ಮಿಕ ಲೋಕಕ್ಕೆ ಸಿದ್ಧತೆ ಮಾಡಿಕೊಳ್ಳಲು ಹೇಳಿದರು.
ಅದೇಕೆಂದರೆ ನಮ್ಮ ಮೂಲವು ಆತ್ಮವೇ; ಹೊರತು ಮಾಂಸವಲ್ಲ. (ಯೋಹಾನ 6:63)
ನಿತ್ಯ ಲೋಕದ ಕುರಿತು ತಿಳಿಯದ ಜೀವನವು ಅರ್ಥಹೀನವಾಗಿದೆ.
ಈ ಭೂಮಿಯ ಮೇಲಿನ ನಮ್ಮ ಅಲ್ಪಾವಧಿಯ ಜೀವನವು ನಿತ್ಯ ಲೋಕಕ್ಕೆ ಸಿದ್ಧತೆ ಮಾಡುವ ಸಮಯವಾಗಿದೆ.
ನಿತ್ಯ ಆಧ್ಯಾತ್ಮಿಕ ಲೋಕಕ್ಕೆ ಹೋಗಲು ನಾವು ಏನು ಮಾಡಬೇಕು?
ನೋವು ಅಥವಾ ಮರಣವಿಲ್ಲದ ನಿತ್ಯದ ಆಧ್ಯಾತ್ಮಿಕ ಲೋಕಕ್ಕೆ (ಪ್ರಕ 21:4) ಲಯಾವಸ್ಥೆಯಲ್ಲಿರುವ ದೇಹವು ಪ್ರವೇಶಿಸಲಾರದು, ಆದರೆ ನಿತ್ಯಜೀವವನ್ನು ಹೊಂದಿದವನು ಮಾತ್ರ ಪ್ರವೇಶಿಸಬಹುದು. (ಕೊರಿಂಥದವರಿಗೆ 15:50)
ಹಾಗಾದರೆ, ನಾವು ನಿತ್ಯಜೀವವನ್ನು ಹೇಗೆ ಹೊಂದಬಹುದು?
ನಾವು ಯೇಸುವಿನ ಮಾಂಸವನ್ನು ತಿಂದು ಅವರ ರಕ್ತವನ್ನು ಕುಡಿಯುವಾಗ, ನಾವು ನಿತ್ಯಜೀವನವನ್ನು ಹೊಂದಬಹುದು. (ಯೋಹಾನ 6:54)
ಪಸ್ಕದ ರೊಟ್ಟಿ ಮತ್ತು ದ್ರಾಕ್ಷಾರಸವು ತನ್ನ ಮಾಂಸ ಮತ್ತು ರಕ್ತವೆಂದು ಯೇಸು ವಾಗ್ದಾನ ಮಾಡಿದರು. (ಮತ್ತಾಯ 26:26)
ಹಾಗಾಗಿ, ಪಸ್ಕಹಬ್ಬದ ಮೂಲಕ ನಿತ್ಯಜೀವವನ್ನು ಪಡೆಯುವವರು ವಿಶ್ವದಲ್ಲಿ ಮುಕ್ತವಾಗಿ ಸಂಚರಿಸುವ, ಆಧ್ಯಾತ್ಮಿಕ ಲೋಕಕ್ಕೆ ಪ್ರವೇಶಿಸಬಹುದು.
ದೈಹಿಕ ಲೋಕದಲ್ಲಿ ಮಾತ್ರ ಕೇಂದ್ರೀಕರಿಸುತ್ತಾ, ನಮ್ಮ ಜೀವನವನ್ನು ವ್ಯರ್ಥ ಮಾಡುವ ಬದಲು, ನಿತ್ಯ ಆಧ್ಯಾತ್ಮಿಕ ಲೋಕವನ್ನು ಎದುರು ನೋಡುತ್ತಾ, ನಿತ್ಯಜೀವದ [ಪಸ್ಕಹಬ್ಬ] ಪವಿತ್ರ ವಾಗ್ದಾನದಲ್ಲಿ ಪಾಲ್ಗೊಳ್ಳೋಣ.
ಎರಡನೆಯ ಬರುವಿಕೆಯ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಸ್ಥಾಪಿಸಿದ ದೇವರ ಸಭೆಯು, ಹೊಸ ಒಡಂಬಡಿಕೆಯ ಪಸ್ಕಹಬ್ಬವನ್ನು ಆಚರಿಸುವ ಏಕೈಕ ಸಭೆಯಾಗಿದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ