ಏಸಾವನು ಮತ್ತು ಇಸ್ಕರಿಯೋತ ಯೂದನು ಅವರು ಆಡಿದ ಅಸಡ್ಡೆ ಮಾತುಗಳಿಂದ ಆಶೀರ್ವಾದವನ್ನು ಕಳೆದುಕೊಂಡರು ಮತ್ತು ಬಲಡೆಯಲ್ಲಿದ್ದ ಕಳ್ಳನು ಮತ್ತು ದಾನಿಯೇಲನ ಮೂವರು ಸ್ನೇಹಿತರು ನಂಬಿಕೆಯಿಂದ ಹೇಳಿದ ಮಾತುಗಳಿಂದ ದೇವರಿಂದ ತುಂಬಿ ತುಳುಕುವ ಆಶೀರ್ವಾದಗಳನ್ನು ಪಡೆದರು.
ನಮ್ಮ ಬಾಯಿಂದ ಹೊರಡುವ ಮಾತುಗಳು ಎಂದಿಗೂ ಕಣ್ಮರೆಯಾಗದೆ ನ್ಯಾಯತೀರ್ಪಿನ ದಿನದಂದು ನಮಗೆ ಹಿಂತಿರುಗುವದರಿಂದ, ನಾವು ಮಾತನಾಡುವ ಮೊದಲು ಅನೇಕ ಬಾರಿ ಯೋಚಿಸಲು ಮತ್ತು ಕೋಪಗೊಳ್ಳಲು ನಿಧಾನವಾಗಿರಲು ದೇವರು ಯಾವಾಗಲೂ ನಮಗೆ ಕಲಿಸುತ್ತಾರೆ.
ನಾವು ಪಾಪ ಮಾಡಿದ್ದರಿಂದ ಪರಲೋಕದಿಂದ ದೊಬ್ಬಲ್ಪಟ್ಟಿದ್ದೇವೆ ಎಂದು ನಾವು ಗ್ರಹಿಸಿಕೊಂಡರೆ, ನಾವು ಯಾವುದರಲ್ಲೂ ನಿರಾಶೆಗೊಳ್ಳುವುದಿಲ್ಲ. ಬದಲಾಗಿ, ನಾವು ಕೃತಜ್ಞರಾಗಿರುವದರ ಮೂಲಕ ಮತ್ತು ದೇವರ ಬೋಧನೆಗಳನ್ನು ಅನುಸರಿಸುವ ಮೂಲಕ ಒಳ್ಳೆಯದನ್ನು ಹೇಳುವುದರ ಮೂಲಕ ನಾವು ಆಶೀರ್ವದಿಸಬಹುದಾದ ಜೀವನವನ್ನು ನಡೆಸಬಹುದು, ಏಕೆಂದರೆ ನಾವು ಪವಿತ್ರಾತ್ಮನ ಕಾಲದಲ್ಲಿ ಬಂದಿರುವ ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರೊಂದಿಗೆ ಇರಬಹುದು.
ನನ್ನ ಪ್ರಿಯ ಸಹೋದರರೇ, ನೀವು ಬಲ್ಲವರು. ಆದರೆ ಪ್ರತಿಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಇರಲಿ. ಕೋಪಿಸುವದರಲ್ಲಿಯೂ ನಿಧಾನವಾಗಿರಲಿ; ಮನುಷ್ಯನ ಕೋಪವು ದೇವರಿಗೆ ಮೆಚ್ಚಿಕೆಯಾಗಿರುವ ನೀತಿಗೆ ಅನುಕೂಲವಾಗುವದಿಲ್ಲ . . . ವಾಕ್ಯದ ಪ್ರಕಾರ ನಡೆಯುವವರಾಗಿರಿ; ಅದನ್ನು ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸಬೇಡಿರಿ. . . ಅದರ ಪ್ರಕಾರ ನಡೆಯುವವನಾಗಿದ್ದು ತನ್ನ ನಡತೆಯಿಂದ ಧನ್ಯನಾಗುವನು.
ಯಾಕೋಬನು 1:19-25
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ