ಹಳೆಯ ಒಡಂಬಡಿಕೆಯ ಇತಿಹಾಸದಲ್ಲಿ ತೋರಿಸಿರುವಂತೆ, ಅವಿಧೇಯರಾದವರು ಕಾನಾನ್ ದೇಶವಾದ ಪರಲೋಕರಾಜ್ಯವನ್ನು ಪ್ರವೇಶಿಸಲು ಸಾಧ್ಯವಿಲ್ಲ.
ಈ ಇತಿಹಾಸದ ಮೂಲಕ, ರಾಜ ಚಿದ್ಕೀಯನು ಮೊದಲು ಹೇಗೆ ವಿಧೇಯನಾಗಿದ್ದನು ನಂತರ ಅವಿಧೇಯನಾದನು ಮತ್ತು ರಾಜ ಸೌಲನು ಹೇಗೆ ಅರ್ಧ ವಿಧೇಯನಾಗಿ ಮತ್ತು ಅರ್ಧ ಅವಿಧೇಯನಾಗಿದ್ದನು, ಹಾಗೂ ಮೊದಲಿನಿಂದಲೂ ಅವಿಧೇಯರಾಗಿದ್ದವರನ್ನು ನಾವು ನೋಡಬಹುದು. ಇಂಥ ಜನರು ರಕ್ಷಣೆ ಹೊಂದುವದಿಲ್ಲ, ಆದರೆ ಕುರಿಯಾದಾತನು ಎಲ್ಲಿಗೆ ಹೋದರೂ ಆತನನ್ನು ಹಿಂಬಾಲಿಸುವವರು ರಕ್ಷಿಸಲ್ಪಡುತ್ತಾರೆ.
ದೇವರ ವಾಕ್ಯಕ್ಕೆ ವಿಧೇಯರಾಗುವವರು ಪರಲೋಕಕ್ಕೆ ಹೋಗುತ್ತಾರೆ ಎಂದು ಕುರಿಯಾದಾತನ ರೂಪದಲ್ಲಿ ಬಂದಿರುವ
ಕ್ರಿಸ್ತ ಅನ್ ಸಂಗ್ ಹೊಂಗ್ ಸತ್ಯವೇದದ ಮೂಲಕ ದೃಢಪಡಿಸಿದರು. "ನೀವು ತಾಯಿ ದೇವರ ಬೋಧನೆಗಳಿಗೆ ಸಂಪೂರ್ಣವಾಗಿ ವಿಧೇಯರಾದಾಗ, ನೀವು ನಿರೀಕ್ಷಿಸದ ಅನೇಕ ಒಳ್ಳೆಯ ವಿಷಯಗಳು ಸಂಭವಿಸುತ್ತವೆ" ಎಂದು ಹೇಳುವ ಮೂಲಕ ಅವರು ತಮ್ಮ ಬೋಧನೆಗಳನ್ನು ಮನುಕುಲಕ್ಕೆ ಬಿಟ್ಟರು.
ನಾನು ಈಗ ನಿಮಗೆ ಬೋಧಿಸುವ ಧರ್ಮೋಪದೇಶವನ್ನೆಲ್ಲಾ ನೀವು ಅನುಸರಿಸಬೇಕು. ಅನುಸರಿಸಿದರೆ ನೀವು ಬದುಕಿಕೊಂಡು ಹೆಚ್ಚಿ ಯೆಹೋವನು ನಿಮ್ಮ ಪಿತೃಗಳಿಗೆ ಪ್ರಮಾಣರೂಪವಾಗಿ ಕೊಟ್ಟ ದೇಶವನ್ನು ಸೇರಿ ಸ್ವಾಧೀನಮಾಡಿಕೊಳ್ಳುವಿರಿ.
. . . ನೀವು ತನ್ನ ಆಜ್ಞೆಗಳನ್ನು ಕೈಕೊಳ್ಳುವವರೋ ಅಲ್ಲವೋ ಎಂದು ತಿಳಿದುಕೊಳ್ಳುವದಕ್ಕೆ ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ ನಿಮ್ಮ ಮನೋಭಾವವನ್ನು ಪರೀಕ್ಷಿಸಿದ್ದನ್ನೂ ನೆನಪಿಗೆ ತಂದುಕೊಳ್ಳಿರಿ.
ಧರ್ಮೋಪದೇಶಕಾಂಡ 8:1-2
ನನ್ನ ವಿಶ್ರಾಂತಿಯಲ್ಲಿ ನೀವು ಸೇರುವದೇ ಇಲ್ಲವೆಂದು ಯಾರನ್ನು ಕುರಿತು ಪ್ರಮಾಣಮಾಡಿದನು? ಅವಿಧೇಯರನ್ನು ಕುರಿತಲ್ಲವೇ. ಅವರು ಸೇರಲಾರದೆ ಹೋದದ್ದು ಅಪನಂಬಿಕೆಯಿಂದಲೇ ಎಂದು ತಿಳಿದುಕೊಳ್ಳುತ್ತೇವೆ.
ಇಬ್ರಿಯರಿಗೆ 3:18-19
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ