ಕ್ರಿಸ್ತನ ಮಾರ್ಗವನ್ನು ಸರಿಯಾಗಿ ಅನುಸರಿಸಲು, ನಾವು ನಮ್ಮ ಸ್ವಂತ ಶಿಲುಬೆಯನ್ನು ಹೊತ್ತುಕೊಳ್ಳಬೇಕು. ದೇವರಾದ ಯೇಸು ಮನುಕುಲದ ಆತ್ಮರಕ್ಷಣೆಗಾಗಿ ಶಿಲುಬೆಯ ಭಾರವನ್ನು ಹೊತ್ತುಕೊಂಡರು ಹಾಗೂ ಮೋಶೆ ಮತ್ತು ಅಪೊಸ್ತಲ ಪೌಲನಂತಹ ನಂಬಿಕೆಯ ಪೂರ್ವಜರು ತಮ್ಮ ಯಾತನೆಯ ಶಿಲುಬೆಯನ್ನು ಸಂತೋಷದಿಂದ ಹೊತ್ತುಕೊಂಡರು. ಅದೇ ರೀತಿ, ನಾವು ಕೂಡ ನಮ್ಮ ಸ್ವಂತ ಶಿಲುಬೆಯನ್ನು ಹೊತ್ತುಕೊಂಡು ಆತ್ಮರಕ್ಷಣೆಗಾಗಿ ಯಾತನೆಯ ಹಾದಿಯಲ್ಲಿ ನಡೆಯಬೇಕು.
ಕ್ರಿಸ್ತನ ಶಿಲುಬೆಯ ಮಾರ್ಗವನ್ನು ಅನುಸರಿಸಿ, ಅಪೊಸ್ತಲ ಪೌಲನು ಎಲ್ಲಾ ಕಷ್ಟಗಳನ್ನು ಆಶೀರ್ವಾದವೆಂದು ಪರಿಗಣಿಸಿದಂತೆಯೇ, ಚರ್ಚ್ ಆಫ್ ಗಾಡ್ ಸದಸ್ಯರು ಯಾವುದೇ ಕ್ಷಣದಲ್ಲಿ, ತಮ್ಮ ಶಿಲುಬೆಯನ್ನು ಸಂತೋಷದಿಂದ ಹೊತ್ತುಕೊಂಡು, ದೇವರಿಗೆ ಕೃತಜ್ಞತೆ ಸಲ್ಲಿಸಲು ಎಂದಿಗೂ ಮರೆಯದೆ, ದೃಢ ನಂಬಿಕೆಯಿಂದ ದೇವರ ಮಾರ್ಗವನ್ನು ಅನುಸರಿಸುತ್ತಾರೆ.
ನೀತಿಯ ನಿವಿುತ್ತವಾಗಿ ಹಿಂಸೆಯನ್ನು ತಾಳಿಕೊಳ್ಳುವವರು ಧನ್ಯರು; ಪರಲೋಕರಾಜ್ಯವು ಅವರದು. ನನ್ನ ನಿವಿುತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು. ಸಂತೋಷಪಡಿರಿ, ಉಲ್ಲಾಸಪಡಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವದು; ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನೂ ಹೀಗೆಯೇ ಹಿಂಸೆಪಡಿಸಿದರಲ್ಲಾ. ಮತ್ತಾಯನು 5:10-12
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ