ಪರಲೋಕದಲ್ಲಿ ಮಹಿಮೆಯ ಸ್ಥಾನದಲ್ಲಿದ್ದ ದೇವದೂತ ಲೂಸಿಫರ್ ಮತ್ತು ತೂರಿನ ರಾಜನು ತಮ್ಮ ದುರಹಂಕಾರದಿಂದ ದೇವರಿಗಿಂತ ತಮ್ಮನ್ನು ತಾವು ಉನ್ನತೀಕರಿಸಲು ಬಯಸಿ, ದೇವರಿಗೆ ದ್ರೋಹ ಮಾಡಿದಂತೆ, ಎಲ್ಲಾ ಮಾನವಕುಲವು ಪರಲೋಕದಲ್ಲಿ ಪಾಪಮಾಡಿ ಭೂಮಿಗೆ ದೊಬ್ಬಲ್ಪಟ್ಟರು ಮತ್ತು ನರಕದ ಶಿಕ್ಷೆಗೆ ಗುರಿಯಾದರು. ಎಷ್ಟಾದರೂ ದೇವರು ಸ್ವತಃ ಪ್ರತಿ ಆರಾಧನೆಯಲ್ಲಿ ದೋಷಪರಿಹಾರಕ ಯಜ್ಞವಾಗಿ ನಮಗೆ ಪಾಪಕ್ಷಮೆಯನ್ನು ನೀಡುತ್ತಾರೆ.
ಮೋಶೆಯ ಸಮಯದಿಂದ ಯೇಸುವಿನ ಸಮಯದವರೆಗೆ ಸುಮಾರು
1,500 ವರ್ಷಗಳ ಕಾಲ, ಸಬ್ಬತ್ ಮತ್ತು ಪ್ರತಿ ಹಬ್ಬದ ದಿನದಂದು
ಗಂಡು ಮತ್ತು ಹೆಣ್ಣು ಪಶುಗಳ ಯಜ್ಞಬಲಿಯ ರಕ್ತದ ಮೂಲಕ
ಪಾಪಕ್ಷಮೆಯನ್ನು ಸ್ವೀಕರಿಸಲು ದೇವರು ನಮಗೆ ಅನುಮತಿಸಿದರು.
ಹಳೆ ಒಡಂಬಡಿಕೆಯ ಮೂಲಕ, ದೇವರು ಹೊಸ ಒಡಂಬಡಿಕೆಯ
ಸತ್ಯತ್ವವಾದ ತಾಯಿ ದೇವರ ತ್ಯಾಗ ಮತ್ತು ಪ್ರೀತಿಯನ್ನು
ನಮಗೆ ತಿಳಿಸುತ್ತಾರೆ ಮತ್ತು ಮಾನವಕುಲದ ಮೇಲಿನ ಪ್ರೀತಿಗೆ
ಸಾಕ್ಷಿಯಾಗಿ ಶಿಲುಬೆಯಲ್ಲಿ ರಕ್ತ ಸುರಿಸಿದ ಕ್ರಿಸ್ತ ಅನ್ ಸಂಗ್ ಹೊಂಗ್
ಅವರ ತ್ಯಾಗವನ್ನು ನಮಗೆ ತೋರಿಸುತ್ತಾರೆ.
ಮತ್ತು ಶುದ್ಧನಾದವನೊಬ್ಬನು ಆ ಆಕಳಿನ ಬೂದಿಯನ್ನು ಕೂಡಿಸಿ ಪಾಳೆಯದ ಹೊರಗೆ ಶುದ್ಧವಾದ ಸ್ಥಳದಲ್ಲಿ ಇಡಬೇಕು. ಅದನ್ನು ಇಸ್ರಾಯೇಲ್ಯರ ಸಮೂಹದವರ ಉಪಯೋಗಕ್ಕಾಗಿ ನೀವು ಜೋಪಾನ ಮಾಡಬೇಕು. ಅದು ಹೊಲೆಗಳೆವ ನೀರನ್ನು ಸಿದ್ಧಪಡಿಸುವದಕ್ಕಾಗಿ ಅಲ್ಲೇ ಇಟ್ಟಿರಬೇಕು; ಅದು ದೋಷಪರಿಹಾರಕವಾದದ್ದು.
ಅರಣ್ಯಕಾಂಡ 19:9
ಯಾವನಾದರೂ ಒಬ್ಬನು ಮಾತ್ರ ತಿಳಿಯದೆ ತಪ್ಪು ಮಾಡಿದರೆ ಅವನು ದೋಷಪರಿಹಾರಕಯಜ್ಞಕ್ಕಾಗಿ ಒಂದು ವರುಷದ ಆಡನ್ನು ಸಮರ್ಪಿಸಬೇಕು.
ಅರಣ್ಯಕಾಂಡ 15:27
ಯೆಹೋವನು ಹೀಗನ್ನುತ್ತಾನೆ - ನಾನು ನಿಮ್ಮ ತಾಯಿಯನ್ನು ತ್ಯಜಿಸಿದ ತ್ಯಾಗಪತ್ರವು ಎಲ್ಲಿ? ನನ್ನ ಸಾಲಗಾರರಲ್ಲಿ ಯಾರಿಗೆ ನಿಮ್ಮನ್ನು ಮಾರಿಬಿಟ್ಟಿದ್ದೇನೆ ನೋಡಿರಿ, ನಿಮ್ಮ ದೋಷಗಳ ನಿವಿುತ್ತ ನಿಮ್ಮನ್ನು ಮಾರಿದೆನು, ನಿಮ್ಮ ದ್ರೋಹಗಳಿಗಾಗಿ ನಿಮ್ಮ ತಾಯಿಯನ್ನು ಬಿಟ್ಟೆನು.
ಯೆಶಾಯ 50:1
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ