ಮೋಶೆ ಎರಡನೇ ಬಾರಿ ದಶಾಜ್ಞೆಗಳನ್ನು ಸ್ವೀಕರಿಸಿದಾಗ ಪವಿತ್ರ ಪಂಚಾಂಗದ ಪ್ರಕಾರ ಏಳನೇ ತಿಂಗಳಿನ ಹತ್ತನೇ ದಿನವಾದ ಸರ್ವದೋಷಪರಿಹಾರಕ ದಿನಕ್ಕಾಗಿ ಸಿದ್ಧಮಾಡಲು ಪವಿತ್ರ ಪಂಚಾಂಗದ ಪ್ರಕಾರ ಏಳನೇ ತಿಂಗಳಿನ ಮೊದಲನೇ ದಿನವಾದ ತುತೂರಿಗಳ ಹಬ್ಬದಂದು ಇಸ್ರಾಯೇಲ್ಯರು ಪಶ್ಚಾತ್ತಾಪದ ತುತೂರಿಯನ್ನು ಊದುವಂತೆ ದೇವರು ಆಜ್ಞಾಪಿಸಿದರು.
ಆಧ್ಯಾತ್ಮಿಕವಾಗಿ, ಪರಲೋಕದಲ್ಲಿ ಕ್ಷಮಿಸಲಾಗದ ಪಾಪಗಳನ್ನು ಮಾಡಿ ಈ ಭೂಮಿಗೆ ದೊಬ್ಬಲ್ಪಟ್ಟ ಎಲ್ಲಾ ಮಾನವಕುಲಕ್ಕೆ, "ಹೊಸ ಒಡಂಬಡಿಕೆಯ ಮೂಲಕ ಪಶ್ಚಾತ್ತಾಪಪಟ್ಟು ದೇವರ ಬಳಿಗೆ ಹಿಂತಿರುಗಿ" ಎಂದು ಹೇಳುತ್ತಾ ಪಶ್ಚಾತ್ತಾಪ ಪಡುವಂತೆ ಪ್ರೇರೇಪಿಸುವ ಹಬ್ಬವಾಗಿದೆ.
ಇಂದು, ಪರಲೋಕ ರಾಜ್ಯವು ಹತ್ತಿರದಲ್ಲಿರುವಾಗ, ಸಂಪೂರ್ಣ ಪಶ್ಚಾತ್ತಾಪದ ಮೂಲಕ ಪರಲೋಕರಾಜ್ಯವನ್ನು ಪ್ರವೇಶಿಸುವ ವಾಗ್ದಾನವನ್ನು ಹೊಂದಿರುವವರು ಹೊಸ ಒಡಂಬಡಿಕೆಯ ಮೂಲಕ ತಮ್ಮನ್ನು ರಕ್ಷಿಸಿದ ದೇವರ ತ್ಯಾಗ ಮತ್ತು ಪ್ರೀತಿಯ ಬಗ್ಗೆ ತುತೂರಿಯನ್ನು ಊದಬೇಕು, ಇದರಿಂದ ಇಡೀ ಲೋಕವು ಪಶ್ಚಾತ್ತಾಪಪಟ್ಟು ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರ ಬಳಿಗೆ ಹಿಂತಿರುಗುತ್ತದೆ.
ನೀನು ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸಬೇಕು - ಏಳನೆಯ ತಿಂಗಳಿನ ಮೊದಲನೆಯ ದಿನದಲ್ಲಿ ನಿಮಗೆ ಸಂಪೂರ್ಣ ವಿರಾಮವಿರಬೇಕು. ಅದನ್ನು ತುತೂರಿಗಳ ಧ್ವನಿಯಿಂದ ಪ್ರಕಟಪಡಿಸಬೇಕು. ದೇವಾರಾಧನೆಗಾಗಿ ಸಭೆಕೂಡಬೇಕು.
ಯಾಜಕಕಾಂಡ 23:24
ಕಾಲ ಪರಿಪೂರ್ಣವಾಯಿತು, ದೇವರ ರಾಜ್ಯವು ಸಮೀಪಿಸಿತು, ದೇವರ ಕಡೆಗೆ ತಿರುಗಿಕೊಂಡು ಸುವಾರ್ತೆಯನ್ನು ನಂಬಿರಿ ಎಂದು ದೇವರ ಸುವಾರ್ತೆಯನ್ನು ಸಾರಿಹೇಳಿದನು.
ಮಾರ್ಕ 1:15
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ