ಯೇಸುಕ್ರಿಸ್ತ ಸ್ವತಃ ಬೋಧನೆಯ ಮೂಲಕ ಮನುಕುಲವನ್ನು ಪಾಪದಿಂದ ರಕ್ಷಿಸುವ ಮಾದರಿಯನ್ನು ತೋರಿಸಿದರು. “ಲೋಕವನ್ನು ರಕ್ಷಿಸಿರಿ” ಎಂದು ಹೇಳುವ ಮೂಲಕ ಹೊಸ ಒಡಂಬಡಿಕೆಯ ಕೆಲಸಗಾರರಾಗುವ ಧ್ಯೇಯವನ್ನು ನಮಗೆ ಕೊಟ್ಟರು. ಆದ್ದರಿಂದ, ನಾವು ತನಗೆ ಬೇಕಾದುದನ್ನು ಮಾತ್ರ ಮಾಡಿದ ಏಸಾವನಂತೆ ಇರಬಾರದು, ಆದರೆ ಮೊದಲು ತಾನು ಮಾಡಬೇಕಾದದ್ದನ್ನು ಮಾಡಿದ ಯಾಕೋಬನಂತೆ ಇರಬೇಕು. ಆಗ ಮಾತ್ರ ನಾವು ದೇವರು ನೀಡುವ ಆಶೀರ್ವಾದಗಳನ್ನು ಪಡೆಯಬಹುದು.
ಮಾಡಬೇಕಾದದ್ದನ್ನು ಮಾಡುವವರ ಮತ್ತು ಮಾಡದವರ ಫಲಿತಾಂಶವು ಪರಲೋಕರಾಜ್ಯ ಮತ್ತು ನರಕದ ನಡುವಿನ ವ್ಯತ್ಯಾಸವಾಗಿದೆ. ಯೇಸುವಿನಂತೆ ಬೋಧನೆಯ ಜೀವನವನ್ನು ನಡೆಸಿದ ಅಪೊಸ್ತಲರೊಂದಿಗೆ ಪವಿತ್ರಾತ್ಮನ ಅದ್ಭುತ ಕಾರ್ಯವು ಯಾವಾಗಲೂ ಇದ್ದಂತೆ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಆತ್ಮರಕ್ಷಣೆಯನ್ನು ಪ್ರಕಟಿಸುವುದು ಈಗ ನಮ್ಮ ಕರ್ತವ್ಯವಾಗಿದೆ.
ಆತನು ಹೊಸ ಒಡಂಬಡಿಕೆಗೆ ಸೇವಕರಾಗಿರುವ ಸಾಮರ್ಥ್ಯವನ್ನು ನಮಗೆ ಅನುಗ್ರಹಿಸಿದ್ದಾನೆ. ಈ ಒಡಂಬಡಿಕೆಯು ಲಿಖಿತ ರೂಪವಾದದ್ದಾಗಿರದೆ ದೇವರಾತ್ಮ ಸಂಬಂಧವಾದದ್ದು ಆಗಿದೆ. ಲಿಖಿತರೂಪವಾದ ಒಡಂಬಡಿಕೆಯು ಮರಣವನ್ನುಂಟುಮಾಡುತ್ತದೆ; ದೇವರಾತ್ಮ ಸಂಬಂಧವಾದದ್ದು ಜೀವವನ್ನುಂಟುಮಾಡುತ್ತದೆ. 2 ಕೊರಿಂಥದವರಿಗೆ 3:6
ನಾವು ಸಮೀಪದಲ್ಲಿರುವ ಬೇರೆ ಊರುಗಳಿಗೆ ಹೋಗೋಣ; ಅಲ್ಲಿಯೂ ನಾನು ಸುವಾರ್ತೆಯನ್ನು ಸಾರಬೇಕು; ಇದಕ್ಕಾಗಿಯೇ ನಾನು ಹೊರಟು ಬಂದಿದ್ದೇನೆ ಎಂದು ಹೇಳಿದನು. ಮಾರ್ಕನು 1:38
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ