ಅಪೊಸ್ತಲ ಪೌಲನು ಮೂರನೆಯ ಪರಲೋಕದ ಮಹಿಮೆಯನ್ನು ನೋಡಿದ್ದರಿಂದಲೇ ಒಬ್ಬ ಮಹಾನ್ ಪ್ರವಾದಿಯಾಗಲು ಸಾಧ್ಯವಾಯಿತು. ಮನುಕುಲಕ್ಕೆ ಕಲ್ಪಿಸಲಾಗದ ವಿಶಾಲವಾದ ವಿಶ್ವದೊಳಗೆ, ದೇವರು ನಮಗಾಗಿ ಒಂದು ವೈಭವಯುತ ಭವಿಷ್ಯವನ್ನು ಸಿದ್ಧಪಡಿಸಿದ್ದಾರೆ. ಈ ಕಾರಣದಿಂದಲೇ ಅವರು ನಮ್ಮನ್ನು ಭೂಮಿಯ ಕಡೆಗೆ ಅಲ್ಲ, ಬದಲಾಗಿ ವಿಶ್ವವನ್ನು ಅಂದರೆ ಪರಲೋಕರಾಜ್ಯವನ್ನು ನೋಡುವ ವಿಶಾಲ ದೃಷ್ಟಿಕೋನವನ್ನು ಹೊಂದಲು ಕರೆದಿದ್ದಾರೆ.
ನಾವು ಪರಲೋಕರಾಜ್ಯದ ಮಹಿಮೆ ಮತ್ತು ಅಲ್ಲಿ ನಮಗಾಗಿ ಕಾಯುತ್ತಿರುವ ಉಜ್ವಲ ಭವಿಷ್ಯವನ್ನು ನೆನಸುತ್ತಾ ಇಂದಿನ ಕಷ್ಟಗಳನ್ನು ಜಯಿಸಬೇಕು. ನಾವು ಪರಲೋಕರಾಜ್ಯವನ್ನು ನಂಬಲು ವಿಫಲವಾದರೆ, ಅಂತಿಮವಾಗಿ ತಾತ್ಕಾಲಿಕ ಕಷ್ಟಗಳಲ್ಲಿ ನಮ್ಮ ನಂಬಿಕೆಯನ್ನು ಕಳೆದುಕೊಂಡು ಸತ್ಯವನ್ನು ಬಿಟ್ಟುಬಿಡುತ್ತೇವೆ. ಎಷ್ಟಾದರೂ, ನಾವು ಪರಲೋಕರಾಜ್ಯದ ಸತ್ಯತ್ವವನ್ನು ನಿಜವಾಗಿ ಅರಿತುಕೊಂಡರೆ, ನಮ್ಮ ನಂಬಿಕೆಯು ದಿನದಿಂದ ದಿನಕ್ಕೆ ಬೆಳೆದು, ಅದರ ಮಹಿಮೆಯಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತದೆ.
ಶರೀರಭಾವದವುಗಳ ಮೇಲೆ ಮನಸ್ಸಿಡುವದು ಮರಣ; ಪವಿತ್ರಾತ್ಮನವುಗಳ ಮೇಲೆ ಮನಸ್ಸಿಡುವದು ಜೀವವೂ ಮನಶ್ಶಾಂತಿಯೂ ಆಗಿದೆ. ರೋಮಾಪುರದವರಿಗೆ 8:6
ನಾವು ರಕ್ಷಣೆಯನ್ನು ಹೊಂದಿದವರಾದರೂ ಇನ್ನು ಎದುರುನೋಡುವವರಾಗಿದ್ದೇವೆ. ಎದುರುನೋಡುವ ಪದವಿ ಪ್ರತ್ಯಕ್ಷವಾಗಿದ್ದರೆ ಎದುರುನೋಡುವದೇಕೆ? ಪ್ರತ್ಯಕ್ಷವಾದದ್ದನ್ನು ಎದುರುನೋಡುವದುಂಟೇ? ಈ ಯೇಸುವನ್ನೇ ದೇವರು ಎಬ್ಬಿಸಿದನು; ಇದಕ್ಕೆ ನಾವೆಲ್ಲರು ಸಾಕ್ಷಿಗಳಾಗಿದ್ದೇವೆ. ರೋಮಾಪುರದವರಿಗೆ 8:24–25
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ