ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ತಿಂದ ಪಾಪದಿಂದಾಗಿ ಆದಾಮ ಮತ್ತು ಹವ್ವ ಏದೆನ್ ತೋಟದ ಮಹಿಮೆಯನ್ನು ಕಳೆದುಕೊಂಡಂತೆ, ಮನುಕುಲವು ಪರಲೋಕದಲ್ಲಿ ತಮ್ಮ ಪಾಪಗಳಿಂದಾಗಿ ಎಲ್ಲಾ ಮಹಿಮೆಯನ್ನು ಕಳೆದುಕೊಂಡು ಈ ಭೂಮಿಗೆ ದೊಬ್ಬಲ್ಪಟ್ಟಿತು. ಮನುಕುಲವು ತಮ್ಮ ಪಾಪಗಳಿಂದಾಗಿ ದೇವರಿಂದ ಬೇರ್ಪಟ್ಟಿತು, ಆದರೆ ದೇವರು ಅವರ ಪಾಪಗಳನ್ನು ಕ್ಷಮಿಸುವ ಒಂದು ಮಾರ್ಗವಾಗಿ ಸಬ್ಬತ್ ದಿನ ಮತ್ತು ಪಸ್ಕ ಸೇರಿದಂತೆ ಮೂರಾವರ್ತಿ ಏಳು ಹಬ್ಬಗಳ ಮೂಲಕ ದೇವರನ್ನು ಆರಾಧಿಸಲು ಅವರಿಗೆ ಅವಕಾಶ ಮಾಡಿಕೊಟ್ಟರು.
ದೇವರನ್ನು ಮೆಚ್ಚಿಸಿದ ಹೇಬೆಲನ ಯಜ್ಞವು, ಕ್ರಿಸ್ತನು ಶಿಲುಬೆಯ ಮೇಲೆ ತನ್ನ ರಕ್ತವನ್ನು ಸುರಿಸುವುದರ ಮೂಲಕ ಮನುಕುಲದ ಪಾಪಗಳನ್ನು ಕ್ಷಮಿಸುತ್ತಾರೆ ಎಂಬುದನ್ನು ಮುನ್ಸೂಚಿಸಿತು ಎಂದು ನಾವು ಸತ್ಯವೇದದಲ್ಲಿ ದೃಢಪಡಿಸಿಕೊಳ್ಳಬಹುದು. ರಕ್ತದ ಯಜ್ಞಾರ್ಪಣೆ ಅಂದರೆ ಆರಾಧನೆಯ ಮೂಲಕ, ಮನುಕುಲವು ದೇವರಿಗೆ ಸಮೀಪಸ್ಥರಾಗಬಹುದು ಮತ್ತು ಪವಿತ್ರಾತ್ಮನ ಕಾಲದಲ್ಲಿ ರಕ್ಷಕರಾದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಕುಮಾರ ಮತ್ತು ಕುಮಾರಿಯರಾಗಿ ದೇವರ ಕುಟುಂಬದ ಭಾಗವಾಗಬಹುದು.
ಈಗಲಾದರೋ ಮೊದಲು ದೂರವಾಗಿದ್ದ ನೀವು ಕ್ರಿಸ್ತ ಯೇಸುವನ್ನು ಸೇರಿದವರಾಗಿದ್ದು ಆತನ ರಕ್ತದ ಮೂಲಕ ಸಮೀಪಸ್ಥರಾದಿರಿ . . . ಹೀಗಿರಲಾಗಿ ನೀವು ಇನ್ನು ಮೇಲೆ ಪರದೇಶದವರೂ ಅನ್ಯರೂ ಆಗಿರದೆ ದೇವಜನರೊಂದಿಗೆ ಒಂದೇ ಸಂಸ್ಥಾನದವರೂ ದೇವರ ಮನೆಯವರೂ ಆಗಿದ್ದೀರಿ. ಎಫೆಸದವರಿಗೆ 2:13, 19
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ